ಶ್ರೀಹರಿಕೋಟಾ: ಇಸ್ರೊ ನಿರ್ಮಿತ ಎನ್‌ವಿಎಸ್-03 ಉಪಗ್ರಹವು ತನ್ನ ನಿರ್ದೇಶಿತ ಕಕ್ಷೆಯನ್ನು ಸೇರಿಕೊಂಡಿದೆ. ಈ ಉಪಗ್ರಹವನ್ನು ಹೊತ್ತಿದ್ದ ಜಿಎಸ್‌ಎಲ್‌ವಿ ರಾಕೆಟ್, ಶುಕ್ರವಾರ ರಾತ್ರಿ ಶ್ರೀಹರಿಕೋಟಾ ದಿಂದ ನಭಕ್ಕೆ ಜಿಗಿದಿತ್ತು.
ಈ ಮೂಲಕ ಜಿಪಿಎಸ್‌ನಂತೆಯೇ ಕಾರ್ಯನಿರ್ವಹಿ ಸುವ ದೇಶೀಯವಾಗಿ ಇಸ್ರೊ ರೂಪಿಸಿರುವ 'ನಾವಿಕ್' ಹೆಸರಿನ ಉಪಗ್ರಹ ಆಧಾರಿತ ಪಥದರ್ಶಕ ವ್ಯವಸ್ಥೆಯು ಪುನಃ ಕಾರ್ಯಾರಂಭಗೊಂಡಿದೆ.
ಕಳೆದ ವರ್ಷ ಎನ್‌ವಿಎಸ್-02 ಉಪ ಗ್ರಹವನ್ನು ಕಳುಹಿಸಲಾಗಿತ್ತು. ತಾಂತ್ರಿಕ ಕಾರಣಗಳಿಂದ ಇದು ಕಾರ್ಯನಿರ್ವ ಹಿಸುತ್ತಿರಲಿಲ್ಲ. 'ನಾವಿಕ್' ವ್ಯವಸ್ಥೆಯು ಕಾರ್ಯನಿರ್ವಹಿಸಬೇಕೆಂದರೆ, ಕನಿಷ್ಠ ನಾಲ್ಕು ಉಪಗ್ರಹಗಳು ಕಾರ್ಯನಿರ್ವ ಹಿಸಲೇಬೇಕು. ಈಗ ಎನ್‌ವಿಎಸ್-03 ಉಪಗ್ರಹವು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದರಿಂದ 'ನಾವಿಕ್' ಪುನರ್ ಆರಂಭಗೊಂಡಿದೆ.
ಉಪಗ್ರಹವು ಯಶ್ವಸಿಯಾಗಿ ಉಡ್ಡಯನಗೊಂಡ ಬಳಿಕ, ಇಸ್ರೊ ಮುಖ್ಯಸ್ಥ ವಿ. ನಾರಾಯಣ್ ಅವರು ಶನಿವಾರ ಮಾಧ್ಯಮಗೋಷ್ಠಿ ನಡೆಸಿ, 'ಒಂದು ರಾಷ್ಟ್ರ, ಒಂದು ಸಮಯ' ಯೋಜನೆಗಾಗಿ 'ನಾವಿಕ್' ವ್ಯವಸ್ಥೆಯು ಅತ್ಯಂತ ಪ್ರಮುಖವಾಗಿದೆ' ಎಂದರು.
ಪ್ರಧಾನಿ ನರೇಂದ್ರ ಮೋದಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಖಾತೆ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರು ಇಸ್ರೊ ತಂಡಕ್ಕೆ ಶುಭಾಶಯ ಕೋರಿದ್ದಾರೆ.
• ಭಾರತದ ಗಡಿಗಳ ಸುತ್ತ ಮತ್ತು ಗಡಿಯಿಂದ ಆಚೆ 1,500 ಕಿ.ಮೀವರೆಗೂ ಈ ಉಪಗ್ರಹವು ತನ್ನ ಕಾರ್ಯವ್ಯಾಪ್ತಿ ಹೊಂದಿದೆ
• ಅತ್ಯಂತ ನಿಖರವಾದ ಮತ್ತು ವೇಗವಾಗಿ ಸಿಗ್ನಲ್‌ಗಳನ್ನು ರವಾನಿಸುವ 'ಪರಮಾಣು ಗಡಿಯಾರ' ವ್ಯವಸ್ಥೆಯನ್ನು ಅಳವಡಿಸಲಾಗಿದೆ. ದೇಶೀಯವಾಗಿ ನಿರ್ಮಿಸಿದ ಮತ್ತು ವಿದೇಶದಿಂದಲೂ ಪಡೆದ 'ಪರಮಾಣು ಗಡಿಯಾರ'ವನ್ನು ಉಪಗ್ರಹದಲ್ಲಿ ಅಳವಡಿಸಲಾಗಿದೆ
- ವಿ. ನಾರಾಯಣ್'ನಾವಿಕ್'ನ ಪ್ರಯೋಜನವನ್ನು ನಾಗರಿಕರು ಪಡೆದುಕೊಳ್ಳಲು ಇನ್ನೂ ಸಮಯವಿದೆ. ಯಾಕೆಂದರೆ, ಈ ವ್ಯವಸ್ಥೆಯಡಿ ಒಟ್ಟು ಏಳು ಉಪಗ್ರಹಗಳನ್ನು ಉಡ್ಡಯನ ಮಾಡಬೇಕಿದೆ. ಈ ಬಳಿಕವೇ ಜನರಿಗೆ ನಾವಿಕ್‌ನ ಪ್ರಯೋಜನ ಸಿಗಲಿದೆ.



