HEALTH TIPS

ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ಇಂದಿನಿಂದ ಶ್ರೀಮದ್ ಭಾಗವತ ಸಪ್ತಾಹ ಮಹಾಯಜ್ಞ

 ಬದಿಯಡ್ಕ: ಇಲ್ಲಿನ ಕಾರ್ಮಾರು ಶ್ರೀ ಮಹಾವಿಷ್ಣು ಕ್ಷೇತ್ರದಲ್ಲಿ ನವೆಂಬರ್ 14ರ ಶನಿವಾರದಿಂದ ನವೆಂಬರ್ 21ರ ವರೆಗೆ ಜಗದ್ಗುರು ಶ್ರೀ ಶಂಕರಾಚಾರ್ಯ ಮಹಾಸಂಸ್ಥಾನಂ ಶ್ರೀಮದ್ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಪೂರ್ಣಾನುಗ್ರಹದೊಂದಿಗೆ, ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳವರ ನಿರ್ದೇಶನದಂತೆ ಬ್ರಹ್ಮಶ್ರೀ ಗುರುಪುರಂ ನಾರಾಯಣ ಮೂರ್ತಿಯವರಿಂದ ಶ್ರೀಮದ್ ಭಾಗವತ ಸಪ್ತಾಹ ಮಹಾಯಜ್ಞ ನಡೆಯಲಿದೆ.


ನ. 14ರ ಕಾರ್ಯಕ್ರಮದ ವಿವರ: ಶನಿವಾರ ಬೆಳಿಗ್ಗೆ 8 ಗಂಟೆಯಿಂದ ಗಣಪತಿ ಹೋಮ, ಶ್ರೀ ಮಹಾವಿಷ್ಣು ದೇವರಿಗೆ ತುಳಸಿ ಲಕ್ಷಾರ್ಚನೆ ಹಾಗೂ ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಪ್ರಸಾದ ವಿತರಣೆ ನಡೆಯಲಿದೆ. ಸಂಜೆ 4 ಗಂಟೆಗೆ ಮಾನ್ಯ ಶ್ರೀ ಅಯ್ಯಪ್ಪ ಭಜನ ಮಂದಿರ ಪರಿಸರದಿಂದ ಕುಣಿತ ಭಜನೆ ಸಹಿತ ವಿಶೇಷ ಆಕರ್ಷಣೆಗಳೊಂದಿಗೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಹೊರಡಲಿದೆ. ಸಂಜೆ 4.30ಕ್ಕೆ ಕ್ಷೇತ್ರ ತಂತ್ರಿವರ್ಯರಾದ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳು ಹಾಗೂ ಯಜ್ಞಾಚಾರ್ಯರಾದ ಬ್ರಹ್ಮಶ್ರೀ ಗುರುಪುರಂ ನಾರಾಯಣ ಮೂರ್ತಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು.

ಸಂಜೆ 5 ಗಂಟೆಗೆ ಗಣ್ಯರ ಉಪಸ್ಥಿತಿಯಲ್ಲಿ ಸಭಾಕಾರ್ಯಕ್ರಮ ಜರುಗಲಿದ್ದು, ಬ್ರಹ್ಮಶ್ರೀ ಗುರುಪುರಂ ನಾರಾಯಣ ಮೂರ್ತಿಯವರಿಂದ 'ಭಾಗವತ ಮಹಾತ್ಮೆ' ಕುರಿತು ಪ್ರವಚನ ನಡೆಯಲಿದೆ. ರಾತ್ರಿ 7.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಪ್ರಸಾದ ನೆರವೇರಲಿದೆ.

ನ. 15ರಿಂದ 21ರ ವರೆಗಿನ ದೈನಂದಿನ ಕಾರ್ಯಕ್ರಮಗಳು:

  • ಬೆಳಿಗ್ಗೆ 6.30: ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ, ಶ್ರೀಮದ್ ಭಾಗವತ ಪಾರಾಯಣ ಮತ್ತು ಪ್ರವಚನ

  • ಬೆಳಿಗ್ಗೆ 7.30: ಮಹಾಪೂಜೆ (8 ಗಂಟೆಗೆ ಉಪಾಹಾರ)

  • ಬೆಳಿಗ್ಗೆ 8.30 ರಿಂದ 10.30: ಭಾಗವತ ಪಾರಾಯಣ

  • ಬೆಳಿಗ್ಗೆ 10.30 ರಿಂದ 12.30: ಪ್ರವಚನ

  • ಮಧ್ಯಾಹ್ನ 12.30: ಮಹಾಪೂಜೆ ಮತ್ತು ಭೋಜನ ಪ್ರಸಾದ

  • ಅಪರಾಹ್ನ 2.00 ರಿಂದ 4.00: ಪಾರಾಯಣ

  • ಸಂಜೆ 4.30 ರಿಂದ 6.30: ಪ್ರವಚನ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries