HEALTH TIPS

ಬದಿಯಡ್ಕ ಮರ್ಚೆಂಟ್ಸ್ ವನಿತಾ ವಿಂಗ್ ಪದಾಧಿಕಾರಿಗಳ ಆಯ್ಕೆ

ಬದಿಯಡ್ಕ: ಮರ್ಚೆಂಟ್ಸ್ ವನಿತಾ ವಿಂಗ್ ಬದಿಯಡ್ಕ ಘಟಕದ ವಾರ್ಷಿಕ ಮಹಾಸಭೆ ಹಾಗೂ 2026-28ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಬದಿಯಡ್ಕ ವ್ಯಾಪಾರ ಭವನದಲ್ಲಿ ಜರುಗಿದ ಈ ಸಭೆಯನ್ನು ವನಿತಾ ವಿಂಗ್ ಜಿಲ್ಲಾಧ್ಯಕ್ಷೆ ರೇಖಾ ಮೋಹನದಾಸ್ ಉದ್ಘಾಟಿಸಿದರು.

ಬದಿಯಡ್ಕ ಘಟಕದ ಅಧ್ಯಕ್ಷೆ ಜಯಂತಿ ಚೆಟ್ಟಿಯಾರ್ ಅಧ್ಯಕ್ಷತೆ ವಹಿಸಿದ್ದರು. ಕೆ.ವಿ.ವಿ.ಇ.ಎಸ್ (KVVES) ಬದಿಯಡ್ಕ ಘಟಕದ ಉಪಾಧ್ಯಕ್ಷ ಅಬ್ದುಲ್ ಹಮೀದ್ ಬಾರಕ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಜಿಲ್ಲಾ ಉಪಾಧ್ಯಕ್ಷೆ ಲೀಲಾವತಿ, ಜಿಲ್ಲಾ ಕಾರ್ಯದರ್ಶಿ ಸಿಂಧು, ಘಟಕದ ಪ್ರಧಾನ ಕಾರ್ಯದರ್ಶಿ ರವಿ ಎಂ., ಕೋಶಾಧಿಕಾರಿ ಜ್ಞಾನದೇವ ಶೆಣೈ ಶುಭಾಶಂಸನೆಗೈದು ಮಾತನಾಡಿದರು. ಪೂರ್ಣಿಮಾ ಸಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ಕೃಪಾ ಯತೀಶ್ ಸ್ವಾಗತಿಸಿ, ಕವಿತಾ ವಂದಿಸಿದರು.

ಇದೇ ವೇಳೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷೆಯಾಗಿ ಜಯಂತಿ ಎನ್. ಚೆಟ್ಟಿಯಾರ್, ಉಪಾಧ್ಯಕ್ಷೆಯಾಗಿ ವಿನುತಾ, ಪ್ರಧಾನ ಕಾರ್ಯದರ್ಶಿಯಾಗಿ ವಸಂತಿ, ಕಾರ್ಯದರ್ಶಿಯಾಗಿ ಕವಿತಾ ರತ್ನಾಕರ, ಕೋಶಾಧಿಕಾರಿಯಾಗಿ ಪೂರ್ಣಿಮಾ ಸಿ.ಎಚ್. ಅವರನ್ನೊಳಗೊಂಡ 15 ಮಂದಿ ಸದಸ್ಯರ ಸಮಿತಿಯನ್ನು ಆಯ್ಕೆ ಮಾಡಲಾಯಿತು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries