HEALTH TIPS

ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವ: ಬದಿಯಡ್ಕದಲ್ಲಿ ಹಸಿರುವಾಣಿ ಸಂಗ್ರಹ ಮೆರವಣಿಗೆ; ಇಂದಿನಿಂದ ಪೆರಡಾಲ ನವಜೀವನ ಶಾಲೆಯಲ್ಲಿ ಕಲೋತ್ಸವ ಸಂಭ್ರಮ

 ನವೆಂಬರ್ 4ರ ವರೆಗೆ 3 ದಿನಗಳ ಕಾಲ ಕಲಾ ವೈಭವ; ಪೂರ್ವಭಾವಿ ಸಿದ್ಧತೆಗಳು ಪೂರ್ಣ

ಬದಿಯಡ್ಕ: ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ನವೆಂಬರ್ 2 ರಿಂದ 4ರ ವರೆಗೆ ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಅದ್ಧೂರಿಯಾಗಿ ಜರುಗಲಿದ್ದು, ಕಲೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದರ ಅಂಗವಾಗಿ ಶನಿವಾರ ಬದಿಯಡ್ಕ ಪೇಟೆಯಲ್ಲಿ ಸಂಭ್ರಮದ 'ಹಸಿರುವಾಣಿ ಸಂಗ್ರಹ' (ಆಹಾರ ಸಾಮಗ್ರಿಗಳ ಸಂಗ್ರಹ) ಮೆರವಣಿಗೆ ನಡೆಯಿತು.


ಬದಿಯಡ್ಕ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಸಂಘಟನಾ ಸಮಿತಿಯ ಅಧ್ಯಕ್ಷರೂ ಆದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶಂಕರ ಡಿ. ಅವರು ಮೆರವಣಿಗೆಗೆ ಚಾಲನೆ ನೀಡಿದರು. ನಿವೃತ್ತ ಶಿಕ್ಷಕಿ ಪ್ರಭಾವತಿ ಕೆದಿಲಾಯ ಪುಂಡೂರು ಅವರು ಅಕ್ಕಿ ಹಾಗೂ ತೆಂಗಿನಕಾಯಿಗಳನ್ನು ಹಸ್ತಾಂತರಿಸುವ ಮೂಲಕ ಹಸಿರುವಾಣಿ ಸಂಗ್ರಹಕ್ಕೆ ವಿದ್ಯುಕ್ತ ಚಾಲನೆ ನೀಡಿದರು.

ಗ್ರಾಮ ಪಂಚಾಯಿತಿ, ಕುಟುಂಬಶ್ರೀ ಸಿಡಿಎಸ್, ರಕ್ಷಕ-ಶಿಕ್ಷಕ ಸಂಘ (ಪಿಟಿಎ), ಆಹಾರ ಸಮಿತಿ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿ ಹಾಗೂ ಊರವರ ಜಂಟಿ ಆಶ್ರಯದಲ್ಲಿ ಬದಿಯಡ್ಕ ಪೇಟೆಯಲ್ಲಿ ಹಸಿರುವಾಣಿ ಸಂಗ್ರಹ ನಡೆಯಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಜನಪ್ರತಿನಿಧಿಗಳಾದ ಹಮೀದ್ ಕೆಡೆಂಜಿ, ಅವಿನಾಶ್ ರೈ, ಶ್ಯಾಮಪ್ರಸಾದ ಮಾನ್ಯ, ಗಂಗಾಧರ ಗೋಳಿಯಡ್ಕ, ಮಧುಸೂದನ ಕಂಗಿಲ, ಶ್ಯಾಮಪ್ರಸಾದ ಸರಳಿ, ಅನ್ನತ್ ಬೀವಿ, ಸಿಡಿಎಸ್ ಅಧ್ಯಕ್ಷೆ ಸುಲೋಚನ ಭಾಗವಹಿಸಿದ್ದರು. ವಿವಿಧ ಸಮಿತಿಗಳ ಪ್ರಮುಖರಾದ ಆನಂದ ಕೆ. ಮವ್ವಾರು, ಶಾಹಿದ್ ನೆಲ್ಲಿಕಟ್ಟೆ, ಶರೀಫ್ ಪಾಲೆಕ್ಕಾರು, ಗಂಗಾಧರ ಪಳ್ಳತ್ತಡ್ಕ, ಚಂದ್ರನ್ ಪೊಯ್ಯಕಂಡ, ಜಗನ್ನಾಥ ರೈ, ಸೀತಾರಾಮ ನವಕಾನ, ಶಾಫಿ ಚೂರಿಪ್ಪಳ್ಳ, ಸುಧಾಕರ ವಿದ್ಯಾಗಿರಿ, ಶಿಕ್ಷಕರಾದ ನಿರಂಜನ ರೈ ಪೆರಡಾಲ, ರಾಜೇಶ್ ಮಾಸ್ಟರ್ ಅಗಲ್ಪಾಡಿ, ಶಶಿಧರನ್ ನಂಬ್ಯಾರ್ ಹಾಗೂ ಅಪಾರ ಸಂಖ್ಯೆಯ ಸಾರ್ವಜನಿಕರು ಉಪಸ್ಥಿತರಿದ್ದರು.





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries