ಸಿಂಗಪುರ: 'ಅಮೆರಿಕದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಎನ್‌ವಿಡಿಯಾದ ಸಿಇಒ ಆಗಿದ್ದ ಜೆನ್ಸೆನ್ ಹುವಾಂಗ್ ಜೊತೆ ಸಂಬಂಧ ಹೊಂದಿದ್ದಾರೆ ಎಂದು ಹೇಳಲಾಗುವ ಅಲೈಸ್ ಹುವಾಂಗ್ ಅವರು 2025ರ ಆಗಸ್ಟ್‌ನಲ್ಲಿಯೇ ನಮ್ಮ ಕಂಪನಿಯನ್ನು ತೊರೆದಿದ್ದಾರೆ ಮತ್ತು ಕಂಪನಿಯ ವ್ಯವಹಾರದ ಬಗ್ಗೆ ವರದಿಯಾಗಿರುವ ಕಾರಣ ಆಂತರಿಕ ತನಿಖೆ ನಡೆಸಲಾಗುತ್ತಿದೆ' ಎಂದು ಮೆಗಾಸ್ಪೀಡ್ ಕಂಪನಿ ತಿಳಿಸಿದೆ.
ಸಿಂಗಪುರ ಮೂಲದ ಕ್ಲೌಡ್ ಕಂಪ್ಯೂಟಿಂಗ್ ಕಂಪನಿ ಮೆಗಾಸ್ಪೀಡ್ ಭಾನುವಾರ ಈ ಬಗ್ಗೆ ಪ್ರಕಟಣೆ ನೀಡಿದ್ದು, 'ನಮ್ಮ ವ್ಯವಹಾರ, ಪೂರೈಕೆ ವ್ಯವಸ್ಥೆ ಮತ್ತು ಜಾಗತಿಕ ಕಾರ್ಯಾಚರಣೆಗಳ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿರುವುದಕ್ಕೆ ದೃಢೀಕೃತ ಸಾಕ್ಷ್ಯಗಳಿಲ್ಲ' ಎಂದು ಹೇಳಿದೆ.
'ಅಲೈಸ್ ಅವರು ಪ್ರಸ್ತುತ ನಮ್ಮ ಕಂಪನಿಯಲ್ಲಿ ಯಾವುದೇ ಸ್ಥಾನವನ್ನು ಹೊಂದಿಲ್ಲ' ಎಂದು ಸ್ಪಷ್ಟಪಡಿಸಿದೆ.
ಅಮೆರಿಕದ ರಫ್ತು ನಿರ್ಬಂಧದ ನಡುವೆಯೇ ಎನ್‌ವಿಡಿಯಾದ ಅತ್ಯಾಧುನಿಕ ಚಿಪ್‌ಗಳನ್ನು ಚೀನಾ ಕಂಪನಿಗಳಿಗೆ ಪೂರೈಕೆ ಮಾಡಲು ಮೆಗಾಸ್ಪೀಡ್ ಸಹಾಯ ಮಾಡಿದೆ ಎಂಬ ಆರೋಪಗಳು ಕೇಳಿಬಂದ ಬೆನ್ನಲ್ಲೇ ಮೆಗಾಸ್ಪೀಡ್ ಪ್ರತಿಕ್ರಿಯೆ ನೀಡಿದೆ.


