HEALTH TIPS

ಢಾಕಾ | ಮೊಹಮ್ಮದ್‌ ಯೂನುಸ್‌ ಅವರ ಪೂರ್ವಜರ ಮನೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಢಾಕಾ: ಚಟ್ಟೋಗ್ರಾಮದಲ್ಲಿರುವ ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿದ್ದ ಮೊಹಮ್ಮದ್‌ ಯೂನುಸ್‌ ಅವರ ಪೂರ್ವಜರ ಮನೆಗೆ ಕಚ್ಚಾ ಬಾಂಬ್‌ ಎಸೆದು ಸ್ಫೋಟಿಸಲಾಗಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್‌ ಪಕ್ಷವು ಗುರುವಾರ ‘ಲಾಕ್‌ಡೌನ್‌’ಗೆ ಕರೆ ನೀಡಿತ್ತು. ಇದೇ ದಿನ ಈ ಘಟನೆ ನಡೆದಿದೆ. 


‘ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಗುರುವಾರ ಬೆಳಗಿನ ಜಾವ ಘಟನೆ ನಡೆದಿದೆ. ಸರಣಿ ಬಾಂಬ್‌ ಸ್ಫೋಟಗಳು ಕೇಳಿಸಿದವು’ ಎಂದು ಪೊಲೀಸರು ತಿಳಿಸಿದರು. ಬಾಂಗ್ಲಾದೇಶದಲ್ಲಿರುವ ಯೂನುಸ್‌ ಅವರ ಗ್ರಾಮೀಣ ಬ್ಯಾಂಕ್‌ಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ.

ಪತ್ರಿಕೆಯೊಂದು ವರದಿ ಮಾಡಿರುವಂತೆ, ಪ್ರಧಾನಿ ತಾರೀಕ್‌ ರಹೆಮಾನ್‌ ಅವರ ಬಿಎನ್‌ಪಿ ಪಕ್ಷಕ್ಕೆ ಸೇರಿದ ಕೆಲವರು, ಅವಾಮಿ ಲೀಗ್ ಪಕ್ಷದ ಇಬ್ಬರು ನಾಯಕರ ನಿವಾಸಕ್ಕೆ ಬೆಂಕಿ ಹಚ್ಚಿದ್ದಾರೆ.

ಹಸೀನಾ ಅವರಿಗೆ ಗಲ್ಲು ಶಿಕ್ಷೆ ವಿಧಿಸಿರುವುದನ್ನು ವಿರೋಧಿಸಿ ಅವಾಮಿ ಲೀಗ್‌ ಪಕ್ಷದವರು ಗುರುವಾರ ಲಾಕ್‌ಡೌನ್‌ಗೆ ಕರೆ ನೀಡಿತ್ತು. ಹಸೀನಾ ಅವರು ‘ಡಿಸೆಂಬರ್‌ನಲ್ಲಿ ಬಾಂಗ್ಲಾಗೆ ಮರಳುತ್ತೇನೆ’ ಎಂದು ಹೇಳಿದ ಬಳಿಕ ದೇಶದಲ್ಲಿ ಹಲವು ಹಿಂಸಾತ್ಮಕ ಬೆಳವಣಿಗೆಗಳು ನಡೆಯುತ್ತಿದೆ. ಡಿಸೆಂಬರ್‌ನಾದ್ಯಂತ ದೇಶದಲ್ಲಿ ಬಿಗಿ ಭದ್ರತೆ ನಿಯೋಜಿಸಲು ಸರ್ಕಾರ ಮುಂದಾಗಿದೆ. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries