ಉಪ್ಪಳ: ಎಂಡಿಎಂಎ ಸಾಗಿಸುತ್ತಿದ್ದ ಕಾರೊಂದನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸರು ತಮ್ಮ ವಾಹನವನ್ನು ಅಡ್ಡಲಾಗಿ ನಿಲ್ಲಿಸುತ್ತಿದ್ದಂತೆ, ಇವರ ಕಣ್ಣಪ್ಪಿಸಿ ಪರಾರಿಯಾಗುವ ಯತ್ನದ ಮಧ್ಯೆ ಆರೋಪಿಗಳ ಕಾರು ಸನಿಹದ ಅಂಗಡಿಯೊಂದಕ್ಕೆ ಡಿಕ್ಕಿಯಾಗಿ ನಿಂತಿದೆ. ಕಾರಿನಲ್ಲಿದ್ದ ಮೂವರನ್ನು ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ಕಾರಿನಿಂದ 3.39 ಗ್ರಾಂ ಎಂಡಿಎಂಎ ಹಾಗೂ ಶೂಸ್ನೊಳಗೆ ಅವಿತಿರಿಸಿದ್ದ 6.060 ಗ್ರಾಂ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿ ಉಪ್ಪಳ ಮಂಚಲ್ನ ಅಯಾಜ್ (35), ಬಪ್ಪಾಯಿ ತೊಟ್ಟಿಯ ಬಿ.ಎಂ. ಅಮೀರ್ (43) ಮತ್ತು ಮಂಗಳಪಾಡಿ ಅಡುಕ್ಕಾದ ಉಮರ್ ಫಾರೂಕ್ (35) ಎಂಬವರನ್ನು ಬಂಧಿಸಲಾಗಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ 'ಡಾನ್ಸಾಫ್' ತಂಡ ಮತ್ತು ಮಂಜೇಶ್ವರ ಠಾಣೆ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ, ಉಪ್ಪಳದ ಕೈಕಂಬದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ.


