ಮುಳ್ಳೇರಿಯ: ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಮುಳ್ಳೇರಿಯ ವಲಯದ ವಿಶೇಷ ಸಭೆಯು ಮುಳ್ಳೇರಿಯ ಗಣೇಶ ಮಂದಿರದಲ್ಲಿ ನಡೆಯಿತು. ಕಾಸರಗೋಡು ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಡಾ. ವೆಂಕಟ್ರಮಣ ಹೊಳ್ಳ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಮಾತನಾಡಿದ ಭಜನಾ ಪರಿಷತ್‌ನ ಕಾಸರಗೋಡು ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ಮುಂಬರುವ ದಿನಗಳಲ್ಲಿ ವಲಯ ಪರಿಷತ್ ನೇತೃತ್ವದಲ್ಲಿ ಕಾರ್ಯಕ್ರಮಗಳ ಸಂಯೋಜನೆ ಹಾಗೂ ಪದಾಧಿಕಾರಿಗಳು ಸ್ಥಳೀಯ ಭಜನಾ ಮಂಡಳಿಗಳಿಗೆ ಭೇಟಿ ನೀಡುವ ಕುರಿತು ಮಾಹಿತಿ ನೀಡಿದರು.
ಮುಂದಿನ ಕಾರ್ಯಯೋಜನೆ: ಮುಂದಿನ ದಿನಗಳಲ್ಲಿ ದೇಲಂಪಾಡಿ, ಕಾರಡ್ಕ, ಬೆಳ್ಳೂರು, ಕುಂಬ್ದಾಜೆ ಹಾಗೂ ಮುಳಿಯಾರು ಪಂಚಾಯಿತಿಗಳ ಎಲ್ಲಾ ಭಜನಾ ಮಂಡಳಿಗಳನ್ನು ಸಂಪರ್ಕಿಸಿ, ಒಂದು ದಿನದ ಕಾರ್ಯಾಗಾರದೊಂದಿಗೆ ಮಾದರಿ ಭಜನೋತ್ಸವವನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಸಭೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರಡ್ಕ ವಲಯ ಮೇಲ್ವಿಚಾರಕ ಸುರೇಶ್ ಪಿ.ಬಿ. ಸೇರಿದಂತೆ ಹಲವರು ಉಪಸ್ಥಿತರಿದ್ದರು. ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ ಆಚಾರ್ಯ ನಾಟೆಕಲ್ಲು ಸ್ವಾಗತಿಸಿದರು ಮತ್ತು ಕಾರ್ಯದರ್ಶಿ ರಾಧಾಕೃಷ್ಣ ಅಡೂರು ವಂದಿಸಿದರು.

.jpg)
.jpg)
