HEALTH TIPS

ದ್ವೀಪದಂತಿದ್ದ ಏತಡ್ಕಕ್ಕೆ ಮುಕ್ತಿ ನೀಡಿದವರು ಡಾ. ವೈ.ಕೆ. ಕೇಶವ ಭಟ್: ಗ್ರಾಮೀಣ ಪ್ರದೇಶದ ಸಮಗ್ರ ಅಭಿವೃದ್ಧಿಯ ಸವ್ಯಸಾಚಿ


ಬದಿಯಡ್ಕ
:
ಮಳೆಗಾಲದಲ್ಲಿ ದ್ವೀಪದಂತೆ ಪರವೂರಿನ ಸಂಪರ್ಕ ಅಸಾಧ್ಯವಾಗಿದ್ದ ಏತಡ್ಕಕ್ಕೆ ಎರಡು ಸಂಪರ್ಕ ಸೇತುವೆ, ರಸ್ತೆ, ವಿದ್ಯುತ್ ಸಂಪರ್ಕ, ಟೆಲಿಫೋನ್ ಸಂಪರ್ಕ, ವೈದ್ಯಕೀಯ ನೆರವು, ಗ್ರಂಥಾಲಯ ಹೀಗೆ ಅಭಿವೃದ್ಧಿಗಾಗಿ ಯಾವುದೇ ಜಾತಿ ಮತ ಭೇದವಿಲ್ಲದೆ ಅವಿರತ ಶ್ರಮಿಸಿದವರು ಕುಂಬ್ದಾಜೆ ಪಂಚಾಯತಿನ ಮಾಜಿ ಅಧ್ಯಕ್ಷ ಡಾ. ವೈ.ಕೆ. ಕೇಶವ ಭಟ್ ಎಂದು ಕೇರಳ ವಿದ್ಯುತ್ ಇಲಾಖೆಯ ಬದಿಯಡ್ಕ ಶಾಖೆಯ ಮೇಲ್ವಿಚಾರಕರಾದ ಷರೀಫ್ ಪಾಲೆಕ್ಕಾರ್ ಅಭಿಪ್ರಾಯಪಟ್ಟರು.

ಕುಂಬ್ದಾಜೆ ಗ್ರಾಮ ಸೇವಾ ಸಂಘ ಗ್ರಂಥಾಲಯ ಏತಡ್ಕ ಇದರ ಆಶ್ರಯದಲ್ಲಿ ನಡೆದ ಡಾ. ವೈ.ಕೆ. ಕೇಶವ ಭಟ್ ಸಂಸ್ಮರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಸಂಸ್ಮರಣಾ ಭಾಷಣ ಮಾಡಿದರು.

ಗ್ರಂಥಾಲಯ ಅಧ್ಯಕ್ಷರಾದ ಸುಬ್ರಹ್ಮಣ್ಯ ವೈ.ವಿ. ಅಧ್ಯಕ್ಷತೆ ವಹಿಸಿದ್ದರು. ಡಾ. ಮೋಹನ್ ಕುಮಾರ್ ವೈ.ಎಸ್., ಚಂದ್ರಶೇಖರ ಏತಡ್ಕ, ಡಾ. ವೇಣುಗೋಪಾಲ ಕೆ., ನರೇಶ ಕಟ್ಟದ ಮೂಲೆ ಮತ್ತು ಗಣಪತಿ ಭಟ್ ವೈ.ಕೆ. ಅವರು ಡಾ. ಕೇಶವ ಭಟ್ ಅವರೊಂದಿಗಿನ ಒಡನಾಟವನ್ನು ಸ್ಮರಿಸುತ್ತಾ ಮಾತನಾಡಿದರು.

ವಿಜಯಲಕ್ಷ್ಮಿ ಕಟ್ಟದ ಮೂಲೆ, ತನ್ವಿ ಕೆ., ಅಶ್ವಿತಾ ಎಚ್.ಎಸ್., ಪಾರ್ಥಶರ್ಮ ಮತ್ತು ಸ್ವರೂಪ ಭಾವಗೀತೆಗಳನ್ನು ಹಾಡಿದರು. ನರಸಿಂಹ ಭಟ್ ಕೆ. ಮುಕ್ತಕ ವಾಚಿಸಿದರು. ತನ್ವಿ ಕೆ. ಪ್ರಾರ್ಥನೆ ಹಾಡಿದರು. ಡಾ. ವೈ.ಕೆ. ಕೇಶವ ಭಟ್ಟರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈಯಲಾಯಿತು. ಗ್ರಂಥಾಲಯದ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಕೆ. ಸ್ವಾಗತಿಸಿ, ಕಾರ್ಯಕಾರಿ ಸಮಿತಿ ಸದಸ್ಯ ಶಶಿಧರ ಕೆ. ವಂದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries