ವಯನಾಡು: ಕೇರಳದ ವಯನಾಡು ಜಿಲ್ಲೆಯ ಪನಮರಂ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗರ್ಭಿಣಿಯೊಬ್ಬರಿಗೆ ಔಷಧ ಬದಲಿಸಿ ನೀಡಿದ ಗಂಭೀರ ನಿರ್ಲಕ್ಷ್ಯದ ಘಟನೆ ಬೆಳಕಿಗೆ ಬಂದಿದೆ. ರಕ್ತಹೀನತೆಗಾಗಿ ನೀಡಬೇಕಿದ್ದ ಐರನ್ ಇಂಜೆಕ್ಷನ್ ಬದಲಾಗಿ, ನಾಯಿ ಕಡಿತಕ್ಕೆ ನೀಡುವ ರೇಬಿಸ್ ವಿರೋಧಿ (Anti-Rabies) ಇಂಜೆಕ್ಷನ್ ಚುಚ್ಚಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿ ದೂರು ನೀಡಿದ್ದಾರೆ.
ಪನಮರಂ ಕೀಞ್ಞುಕಡವ್ ವಟ್ಟುಕುತ್ತ್ ನಿವಾಸಿ ರಾಹಿನಾ ಆಶಿಕ್ (29) ಎಂಬ ಗರ್ಭಿಣಿಯೇ ಸಿಬ್ಬಂದಿಯ ಈ ಎಡವಟ್ಟಿನಿಂದ ಸಂಕಷ್ಟಕ್ಕೆ ಸಿಲುಕಿದ ಮಹಿಳೆಯಾಗಿದ್ದಾರೆ. ಸಾಮಾನ್ಯ ತಪಾಸಣೆಗಾಗಿ ಆಸ್ಪತ್ರೆಗೆ ತೆರಳಿದ್ದ ವೇಳೆ ಈ ಅಚಾತುರ್ಯ ನಡೆದಿದೆ ಎಂದು ತಿಳಿದುಬಂದಿದೆ.


