HEALTH TIPS

ರಾಜೀನಾಮೆ ನಂತರ ಪದಚ್ಯುತಿ: ಸಾಧ್ಯವಿಲ್ಲ:ಸಚಿವಾಲಯಕ್ಕೆ ನ್ಯಾ. ಯಶವಂತ ವರ್ಮಾ ಪತ್ರ

ನವದೆಹಲಿ: ರಾಜೀನಾಮೆ ನೀಡಿದ ನಂತರ ಪದಚ್ಯುತಿಗೊಳಿಸುವ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ’ ಎಂದು ಲೋಕಸಭಾ ಸಚಿವಾಲಯಕ್ಕೆ ತಿಳಿಸಿರುವ ನ್ಯಾಯಮೂರ್ತಿ ಯಶವಂತ ವರ್ಮಾ, ‘ತಮ್ಮನ್ನು ತೆಗೆದುಹಾಕಲು ಮಾಡುವ ಯಾವುದೇ ಪ್ರಯತ್ನಗಳಿಗೆ ಸಾಂವಿಧಾನಿಕ ಆಧಾರ ಇರುವುದಿಲ್ಲ’ ಎಂದು ಪ್ರತಿಪಾದಿಸಿದ್ದಾರೆ.


ದೆಹಲಿ ಹೈಕೋರ್ಟ್ ನ್ಯಾಯಮೂರ್ತಿಯಾಗಿದ್ದ ಯಶವಂತ ವರ್ಮಾ ಅವರ ಮನೆಯಲ್ಲಿ ಅರೆ ಸುಟ್ಟ ನೋಟುಗಳ ರಾಶಿ ಪತ್ತೆಯಾಗಿದ್ದ ಪ್ರಕರಣದ ಕುರಿತು ತನಿಖೆ ನಡೆಸಿದ್ದ ಲೋಕಸಭಾ ಸ್ಪೀಕರ್‌ ರಚಿಸಿದ್ದ ಸಮಿತಿಯು ಅವರ ವಿರುದ್ಧದ ಆರೋಪಗಳು ಸಾಬೀತಾಗಿವೆ ಎಂದು ವರದಿ ನೀಡಿತ್ತು.

ಲೋಕಸಭಾ ಪ್ರಧಾನ ಕಾರ್ಯದರ್ಶಿ ಉತ್ಪಲ್‌ ಕುಮಾರ್‌ ಸಿಂಗ್‌ ಅವರಿಗೆ ಸೆಪ್ಟೆಂಬರ್‌ 10ರಂದು ಪತ್ರ ಬರೆದಿರುವ ವರ್ಮಾ ಅವರು ತಾವು ನಿರಾಪರಾಧಿ ಎಂದು ಸಮರ್ಥಿಸಿಕೊಂಡಿದ್ದು, ಏಪ್ರಿಲ್‌ 9ರಂದು ತಾವು ನೀಡಿದ ರಾಜೀನಾಮೆಯನ್ನು ತಪ್ಪುಗಳ ಸ್ವೀಕೃತಿ, ಸಮ್ಮತಿ ಅಥವಾ ತಮ್ಮ ವಿರುದ್ಧದ ಆರೋಪಗಳು ಸಾಬೀತಾಗಿವೆ ಎನ್ನುವ ರೀತಿಯಲ್ಲಿ ಅರ್ಥೈಸಿಕೊಳ್ಳಬಾರದು’ ಎಂದು ಹೇಳಿದ್ದಾರೆ. 

ಲೋಕಸಭಾ ಸ್ಪೀಕರ್‌ ರಚಿಸಿದ್ದ ಸಮಿತಿ ಸಲ್ಲಿಸಿರುವ ವರದಿಯ ಬಗ್ಗೆ ಪ್ರತಿಕ್ರಿಯಿಸಲು ಅಥವಾ ಈ ಪ್ರಕರಣದಲ್ಲಿ ಮುಂದಿನ ಪ್ರಕ್ರಿಯೆಗಳಲ್ಲಿ ಭಾಗವಹಿಸಲು ನಿರಾಕರಿಸಿರುವ ನ್ಯಾಯಮೂರ್ತಿ ವರ್ಮಾ ಅವರು, ‘ತಾವು ಬರೆದಿರುವ ಪತ್ರ ಮತ್ತು ಲಗತ್ತುಗಳನ್ನು ಸಂಸತ್ತಿನ ಉಭಯ ಸದನಗಳ ಸದಸ್ಯರ ಮುಂದೆ ಮಂಡಿಸಿ, ಈ ವಿಷಯವನ್ನು ಮುಕ್ತಾಯಗೊಳಿಸಬೇಕೆಂದು ಮನವಿ ಮಾಡಿದ್ದಾರೆ. ವರ್ಮಾ ಬರೆದಿರುವ  ಪತ್ರವನ್ನು ಗುರುವಾರ ಸಂಸದರಿಗೆ ವಿತರಿಸಲಾಯಿತು. 

‘ರಾಷ್ಟ್ರಪತಿ ಅಂಗೀಕಾರದ ಅಗತ್ಯವಿಲ್ಲ’

ಸಂವಿಧಾನದ 217 (1) (ಎ) ವಿಧಿ ಮತ್ತು 1978ರ ಕೇಂದ್ರ ಸರ್ಕಾರ–ಗೋಪಾಲ್‌ ಚಂದ್ರ ಮಿಶ್ರಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಸಂವಿಧಾನ ಪೀಠದ ತೀರ್ಪನ್ನು ಉಲ್ಲೇಖಿಸಿರುವ ವರ್ಮಾ ಅವರು, ‘ಹೈಕೋರ್ಟ್‌ ನ್ಯಾಯಮೂರ್ತಿಗಳ ರಾಜೀನಾಮೆಯು ತನ್ನದೇ ಬಲದಿಂದ ಜಾರಿಗೆ ಬರುತ್ತದೆ. ಇದಕ್ಕೆ ರಾಷ್ಟ್ರಪತಿ ಅಥವಾ ಇತರ ಪ್ರಾಧಿಕಾರದಿಂದ ಅಂಗೀಕಾರದ ಅಗತ್ಯವೇನೂ ಇಲ್ಲ. ನ್ಯಾಯಮೂರ್ತಿಗಳ ಪದಚ್ಯುತಿಯನ್ನು ನಿಯಂತ್ರಿಸುವ ಸಾಂವಿಧಾನಿಕ ನಿಬಂಧನೆಗಳು ಹುದ್ದೆಯಲ್ಲಿ ಇರುವವರಿಗೆ ಮಾತ್ರ ಅನ್ವಯಿಸುತ್ತವೆ. ತಾವು ರಾಜೀನಾಮೆ ನೀಡಿರುವುದರಿಂದ ಪದಚ್ಯುತಿ ಪ್ರಕ್ರಿಯೆ ಮುಂದುವರಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries