HEALTH TIPS

ತಂತ್ರಜ್ಞಾನವು ಸಾಂಸ್ಕೃತಿಕ ಸಂಪರ್ಕಕ್ಕೆ ಹೊಸ ಸಾಧ್ಯತೆ ಸೃಷ್ಟಿಸಿದೆ: ಮೋದಿ

ನವದೆಹಲಿ:  ಸಾಂಸ್ಕೃತಿಕ ಮತ್ತು ನಾಗರಿಕತೆಯ ಸಹಕಾರವು ವಿವಿಧ ದೇಶಗಳ ನಡುವೆ ಸಂಬಂಧ ಬಲಪಡಿಸುತ್ತದೆ. ಇಪ್ಪತ್ತೊಂದನೇ ಶತಮಾನದ ತಂತ್ರಜ್ಞಾನವು ಸಾಂಸ್ಕೃತಿಕ ಸಂಪರ್ಕಕ್ಕೆ ಹೊಸ ಸಾಧ್ಯತೆಗಳನ್ನು ಸೃಷ್ಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಹೇಳಿದ್ದಾರೆ. 


ಇಲ್ಲಿ ಮೊದಲ 'ಎಸ್‌ಸಿಒ ನಾಗರಿಕ ಸಂವಾದ ವೇದಿಕೆ'ಯನ್ನು ಉದ್ಘಾಟಿಸಿ ಮಾತನಾಡಿದ ಮೋದಿ, ಭಾರತದ ವಸ್ತುಸಂಗ್ರಹಾಲಯಗಳು, ಗ್ರಂಥಾಲಯಗಳು ಮತ್ತು ದಾಖಲೆ ಭಂಡಾರಗಳಲ್ಲಿ ಸಾವಿರಾರು ವರ್ಷಗಳ ಅಮೂಲ್ಯ ಪರಂಪರೆ ಸಂರಕ್ಷಿಸಲ್ಪಟ್ಟಿದೆ. ತಂತ್ರಜ್ಞಾನದ ಸಹಾಯದಿಂದ ಈ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸಬಹುದು ಎಂದು ತಿಳಿಸಿದ್ದಾರೆ.

‘ಇತ್ತೀಚಿನ ವರ್ಷಗಳಲ್ಲಿ, ಎಸ್‌ಸಿಒ ಭದ್ರತೆ, ಆರ್ಥಿಕತೆ ಮತ್ತು ಸಂಪರ್ಕದ ಕ್ಷೇತ್ರಗಳಲ್ಲಿ ಸಹಕಾರವನ್ನು ಗಮನಾರ್ಹವಾಗಿ ಹೆಚ್ಚಿಸಿದೆ. ಇಂತಹ ಸನ್ನಿವೇಶದಲ್ಲಿ, ಸಾಂಸ್ಕೃತಿಕ ಮತ್ತು ನಾಗರಿಕತೆಯ ಸಹಕಾರವು ವಿವಿಧ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸುತ್ತದೆ’ ಎಂದಿದ್ದಾರೆ.

‘ಹೊಸ ಆಲೋಚನೆಗಳು ಈ ವೇದಿಕೆಯಿಂದ ಹೊರಹೊಮ್ಮತ್ತವೆ ಎಂದು ನನಗೆ ವಿಶ್ವಾಸವಿದೆ. ಸಾಂಸ್ಕೃತಿಕ ಸಹಕಾರಕ್ಕೆ ಹೊಸ ಅವಕಾಶಗಳು ಸೃಷ್ಟಿಯಾಗುತ್ತವೆ.

ನಮ್ಮ ಪರಸ್ಪರ ಹಂಚಿಕೆಯ ನಾಗರಿಕ ಅನುಭವಗಳು ಜಗತ್ತನ್ನು ಒಗ್ಗೂಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ’ ಎಂದು ಅವರು ಹೇಳಿದ್ದಾರೆ.

ಹಿಂದಿನ ವಿವಿಧ ಸಾಮ್ರಾಜ್ಯಗಳು ಖಂಡಿತವಾಗಿಯೂ ಪ್ರಪಂಚದ ನಕ್ಷೆಗಳನ್ನು ಬದಲಾಯಿಸಿವೆ. ಆದರೆ, ನಾಗರಿಕ ಸಂವಾದಗಳು ಜಗತ್ತಿನ ಆಲೋಚನೆಗಳನ್ನು ಬದಲಾಯಿಸಿ, ಅವುಗಳನ್ನು ಶ್ರೀಮಂತಗೊಳಿಸಿವೆ ಎಂದು ಪ್ರಧಾನಿ ಹೇಳಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries