ಬದಿಯಡ್ಕ: ಶಬರಿಗಿರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಕಲಶೋತ್ಸವದ ಅಂಗವಾಗಿ ಚಪ್ಪರ ಮುಹೂರ್ತ ನಡೆಯಿತು. ಉದನೇಶ್ವರ ಬದಿಯಡ್ಕ ಅವರು ಚಪ್ಪರ ಮುಹೂರ್ತ ನೆರವೇರಿಸಿದರು.
ಶಬರಿಗಿರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪದಾಧಿಕಾರಿಗಳಾದ ಡಾ. ಶ್ರೀನಿಧಿ ಸರಳಾಯ, ದೇವದಾಸ್ ಕಾಮತ್, ಗಿರೀಶ್ ರೈ ಬಳಮಲೆ, ರಾಜೇಶ್ ಮಾಸ್ಟರ್ ಚೆಂಬಳತ್ತಿಮಾರು, ಕೃಷ್ಣ ಚುಳ್ಳಿಕಾನ, ಜಗದಾಂಬಾ, ಉಮೇಶ್ ಕೆಡೆಂಜಿ, ಶಿವಪ್ರಸಾದ್, ವಿಜಯ ಕನಕಪ್ಪಾಡಿ, ರತೀಶ್ ರೈ ಬಳಮಲೆ, ಗುರುಪ್ರಸಾದ್ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ನರೇಂದ್ರ ಬಿ.ಎನ್. ಸ್ವಾಗತಿಸಿ, ಗುರುಪ್ರಸಾದ್ ರೈ ಕೆ. ವಂದಿಸಿದರು.
ಶಬರಿಗಿರಿ ಶ್ರೀ ಅಯ್ಯಪ್ಪ ಭಜನಾ ಮಂದಿರದ ಪ್ರತಿಷ್ಠಾ ಕಲಶೋತ್ಸವ ಹಾಗೂ ಸ್ವಾಮಿ ಅಯ್ಯಪ್ಪನ ತಿರುವುಳಕ್ ಮಹೋತ್ಸವವು ಡಿಸೆಂಬರ್ 4, 5 ಮತ್ತು 6ರಂದು ಜರುಗಲಿದೆ.

.jpg)
