ಲಖನೌ: ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಮತ್ತು ಪತ್ರಕರ್ತೆ ನಿಧಿ ರಾಜ್ದಾನ್ ಅವರ ವಿವಾಹದ ವಿರುದ್ಧ ಹಿರಿಯ ಮುಸ್ಲಿಂ ಮೌಲ್ವಿ 'ಫತ್ವಾ' ಹೊರಡಿಸಿದ್ದಾರೆ. ಇಸ್ಲಾಂ ಧರ್ಮದ ಪ್ರಕಾರ ಈ ವಿವಾಹವು 'ಅಸಿಂಧು' ಎಂದು ಅವರು ಹೇಳಿದ್ದಾರೆ.
ಅಖಿಲ ಭಾರತ ಮುಸ್ಲಿಂ ಜಮಾತ್ನ ರಾಷ್ಟ್ರೀಯ ಅಧ್ಯಕ್ಷ ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು, 'ಅಬ್ದುಲ್ಲಾ ಮತ್ತು ನಿಧಿ ರಾಜ್ದಾನ್ ಅವರ ವಿವಾಹವು ಮುಸ್ಲಿಂ ತತ್ವಗಳಿಗೆ ಬದ್ಧವಾಗಿಲ್ಲ. ಹೀಗಾಗಿ ಅದನ್ನು ಅಸಿಂಧುಗೊಳಿಸಲಾಗಿದೆ' ಎಂದು ಹೇಳಿದ್ದಾರೆ.
'ಇಸ್ಲಾಂನಲ್ಲಿ ವಿವಾಹಕ್ಕೆ ಸಂಬಂಧಿಸಿದಂತೆ ಕೆಲವು ನಿಬಂಧನೆಗಳಿವೆ. ವಿವಾಹವನ್ನು 'ಸಿಂಧು'ಗೊಳಿಸಲು ಈ ನಿಬಂಧನೆಗಳನ್ನು ಅನುಸರಿಸಲೇಬೇಕು' ಎಂದು ಅವರು ಹೇಳಿದ್ದಾರೆ.
'ಇಸ್ಲಾಂ ಪ್ರಕಾರ ಮುಸ್ಲಿಂ ವ್ಯಕ್ತಿಯು ಆ ಧರ್ಮದ ಮಹಿಳೆಯನ್ನು ಮಾತ್ರ ಮದುವೆಯಾಗಬೇಕು. ಅಬ್ದುಲ್ಲಾ ಅವರು ಮುಸ್ಲಿಂ, ಆದರೆ ನಿಧಿ ಮುಸ್ಲಿಮೇತರರು' ಎಂದಿದ್ದಾರೆ.



