HEALTH TIPS

ಪ್ರಧಾನಿಯಾಗಲು ಬಯಸಿದರೆ ಅಣಕು ಸಂಸತ್ತಿನಲ್ಲೇ ಇರಿ: ರಾಹುಲ್ ವಿರುದ್ಧ ಶಾ ವಾಗ್ದಾಳಿ

ಚಂಡೀಗಢ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ದೇಶದ ಪ್ರಧಾನಿಯಾಗುವ ಆಸೆಯಿದ್ದರೆ, ಅವರು ತಮ್ಮ ಜೀವನ ಪೂರ್ತಿ 'ಅಣಕು ಸಂಸತ್ತಿ'ನಲ್ಲೇ ಉಳಿಯಬೇಕಾಗುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.


ವಿರೋಧ ಪಕ್ಷಗಳ ಒಕ್ಕೂಟವು ಶನಿವಾರ(ಅ.31), ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದ ಹುಲ್ಲುಹಾಸಿನಲ್ಲಿ ಸಂಸತ್ತಿನ ಕಲಾಪವನ್ನು ಹೋಲುವ ವಾತಾವರಣವನ್ನು ನಿರ್ಮಿಸಿ, ಜ್ಞಾನೇಶ್ ಕುಮಾರ್ ವಿರುದ್ಧ ಸಂಕೇತಿಕವಾಗಿ 'ಸಾರ್ವಜನಿಕ ಮಹಾಭಿಯೋಗ' ನಡೆಸಿತ್ತು. 

ಬಿಜೆಪಿ ಚುನಾವಣೆಗಳನ್ನು ಗೆಲ್ಲಲು ಮತದಾರರನ್ನು ತೆಗೆದುಹಾಕುತ್ತಿದ್ದಾರೆ ಎಂದು ಆರೋಪಿಸಿದ ವಿರೋಧ ಪಕ್ಷಗಳು, ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಬೇಕೆಂದು ಆಗ್ರಹಿಸಿದವು. ಇದನ್ನು ಬಿಜೆಪಿ ಸಂಸತ್ತಿಗೆ ಎಸಗಿದ 'ಅಪಹಾಸ್ಯ' ಎಂದು ಬಣ್ಣಿಸಿತ್ತು.

ಚಂಡೀಗಢದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅಮಿತ್ ಶಾ , 'ಕಾಂಗ್ರೆಸ್ ಕಳೆದ 15 ವರ್ಷಗಳಿಂದ ಚುನಾವಣೆಯಲ್ಲಿ ಸೋಲುತ್ತಲೇ ಬಂದಿದೆ. ಆದರೂ, ತನ್ನ ಮಗ ಪ್ರಧಾನಿಯಾಗಬೇಕು ಎಂಬ ಸೋನಿಯಾ ಗಾಂಧಿ ಅವರ ಕನಸು ನನಸಾಗದೆ ಉಳಿದಿದೆ. ಹಾಗಾಗಿ, ಅವರು ಅಣಕು ಸಂಸತ್ತನ್ನು ನಡೆಸುವ ಹೊಸ ದಾರಿಯನ್ನು ಕಂಡುಕೊಂಡಿದ್ದಾರೆ. ನಾನು ರಾಹುಲ್ ಅವರಿಗೆ ಒಂದು ಕಿವಿಮಾತು ಹೇಳುತ್ತೇನೆ, ನೀವು ಪ್ರಧಾನಿಯಾಗಲು ಬಯಸಿದರೆ, ನಿಮ್ಮ ಇಡೀ ಜೀವನವನ್ನು ಅಣಕು ಸಂಸತ್ತಿನಲ್ಲೇ ಕಳೆಯಿರಿ. ಭಾರತದ ಪ್ರಧಾನಿಯಾಗುವ ನಿಮ್ಮ ಸರದಿ ಎಂದಿಗೂ ಬರುವುದಿಲ್ಲ' ಎಂದು ಹೇಳಿದ್ದಾರೆ.

ಸುಳ್ಳು ಹೇಳುವುದು, ಅರಾಜಕತೆ ಹಾಗೂ ಸಂಸತ್ತು ಕಾರ್ಯನಿರ್ವಹಿಸಲು ಬಿಡದಿರುವುದು ವಿರೋಧ ಪಕ್ಷಗಳ ನೈಜ ಗುಣವಾಗಿದೆ. 1984ರ 'ಸಿಖ್ ನರಮೇಧ'ದ ವಾರ್ಷಿಕೋತ್ಸವದಂದು 'ಇಂಡಿಯಾ' ಸಮಾವೇಶ ನಡೆಸಿದ್ದನ್ನು ದೇಶ ಎಂದಿಗೂ ಮರೆಯುವುದಿಲ್ಲ. ರಾಹುಲ್ ಅವರ ಪ್ರೀತಿಯ ಅಂಗಡಿಯಿಂದ ದ್ವೇಷವನ್ನು ಹೊರತುಪಡಿಸಿ ಬೇರೇನನ್ನೂ ಪಡೆಯಲು ಯಾರಿಗೂ ಸಾಧ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ದೇಶವನ್ನು ಸುರಕ್ಷಿತವಾಗಿಡುತ್ತಿರುವವರು ಯಾರು? ಅಭಿವೃದ್ಧಿಪಡಿಸುತ್ತಿರುವವರು ಯಾರು? ಹೊಸ ಶಿಕ್ಷಣ ನೀತಿಯನ್ನು ತಂದವರು ಯಾರು? ಆರ್ಥಿಕವಾಗಿ ಸಮೃದ್ಧಗೊಳಿಸುತ್ತಿರುವವರು ಯಾರು? ದೇಶದ ಜನತೆ ಇವೆಲ್ಲವನ್ನೂ ನೋಡುತ್ತಿದ್ದಾರೆ. 2029ರ ಚುನಾವಣೆಯಲ್ಲಿ ಇವೆಲ್ಲಕ್ಕೂ ಲೆಕ್ಕ ಸಿಗಲಿದೆ. ರಾಹುಲ್ ಜೀ, ನನ್ನ ಮಾತುಗಳನ್ನು ನೆನಪಿಟ್ಟುಕೊಳ್ಳಿ ಎಂದು ಶಾ ಹೇಳಿದ್ದಾರೆ.

ಚುನಾವಣಾ ಅಕ್ರಮಗಳ ಆರೋಪದ ಮೇಲೆ ಮುಖ್ಯ ಚುನಾವಣೆ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ 'ಇಂಡಿಯಾ'ಕೂಟವು ಭಾನುವಾರ(ನ.1) ರಾಷ್ಟ್ರ ರಾಜಧಾನಿಯ ರಾಮಲೀಲಾ ಮೈದಾನದಲ್ಲಿ 'ಚಲೋ ದೆಹಲಿ' ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries