ಊಟದ ಜೊತೆಗೆ ಪಲ್ಯ (ತೋರನ್) ಇಲ್ಲದಿದ್ದರೆ ಹೇಗೆ, ಅಲ್ಲವೇ? ನಮಗೆ ಹಲವು ಬಗೆಯ ಪಲ್ಯಗಳ ಬಗ್ಗೆ ತಿಳಿದಿದೆ. ಅವುಗಳಲ್ಲಿ ಬೂದುಗುಂಬಳಕಾಯಿ ಸಿಪ್ಪೆಯಿಂದ ತಯಾರಿಸುವ ಪಲ್ಯವೂ ಒಂದು.
ಬೇಕಾಗುವ ಸಾಮಗ್ರಿಗಳು:
ಬೂದುಗುಂಬಳಕಾಯಿ ಸಿಪ್ಪೆ – 1 ಕಪ್ (ಸಣ್ಣದಾಗಿ ಹೆಚ್ಚಿಕೊಂಡಿದ್ದು)
ಈರುಳ್ಳಿ – 1 (ಸಣ್ಣದು)
ಸಣ್ಣ ಈರುಳ್ಳಿ (ಸಾಂಬಾರ್ ಈರುಳ್ಳಿ) – 6
ಬೆಳ್ಳುಳ್ಳಿ – 6 ಎಸಳು
ಹಸಿಮೆಣಸಿನಕಾಯಿ – 2–3
ಕರಿಬೇವು – 2–3 ಎಸಳು
ತುರಿದ ತೆಂಗಿನಕಾಯಿ – 4 ಟೇಬಲ್ ಚಮಚ
ತೆಂಗಿನೆಣ್ಣೆ – 2 ಟೇಬಲ್ ಚಮಚ
ಉಪ್ಪು – ½ ಟೇಬಲ್ ಚಮಚ (ಅಥವಾ ರುಚಿಗೆ ತಕ್ಕಷ್ಟು)
ಅರಿಶಿನ ಪುಡಿ – ¼ ಟೀ ಚಮಚ
ಕುಟ್ಟಿದ ಒಣಮೆಣಸಿನಕಾಯಿ ಪುಡಿ (ಚಿಲ್ಲಿ ಫ್ಲೇಕ್ಸ್) – ½ ಟೇಬಲ್ ಚಮಚ
ತಯಾರಿಸುವ ವಿಧಾನ: ಬೂದುಗುಂಬಳಕಾಯಿಯ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಸಣ್ಣ ತುಂಡುಗಳಾಗಿ ಹೆಚ್ಚಿಕೊಳ್ಳಿ. ಕಲ್ಲಿನ ಕುಟ್ಟಾಣಿಯಲ್ಲಿ ಸಣ್ಣ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಚೆನ್ನಾಗಿ ಜಜ್ಜಿಕೊಳ್ಳಿ.
ಒಂದು ಬಾಣಲೆಯಲ್ಲಿ ತೆಂಗಿನೆಣ್ಣೆ ಹಾಕಿ ಬಿಸಿಯಾದ ನಂತರ ಜಜ್ಜಿದ ಸಣ್ಣ ಈರುಳ್ಳಿ, ಬೆಳ್ಳುಳ್ಳಿ, ಜೊತೆಗೆ ಹಸಿಮೆಣಸಿನಕಾಯಿ ಮತ್ತು ಕರಿಬೇವು ಸೇರಿಸಿ ಚೆನ್ನಾಗಿ ಹುರಿಯಿರಿ. ಇವು ಹುರಿದು ಪರಿಮಳ ಬರುವಾಗ ಅರಿಶಿನ ಪುಡಿ ಹಾಗೂ ಕುಟ್ಟಿದ ಒಣಮೆಣಸಿನಕಾಯಿ ಪುಡಿಯನ್ನು ಹಾಕಿ ಹುರಿಯಬೇಕು. ಬಳಿಕ ಸಣ್ಣದಾಗಿ ಹೆಚ್ಚಿದ ಈರುಳ್ಳಿಯನ್ನು ಸೇರಿಸಿ ಬಾಡಿಸಿಕೊಳ್ಳಿ.
ನಂತರ ಹೆಚ್ಚಿಟ್ಟುಕೊಂಡ ಬೂದುಗುಂಬಳಕಾಯಿ ಸಿಪ್ಪೆ, ಅರ್ಧ ಲೋಟ ನೀರು ಮತ್ತು ಉಪ್ಪು ಸೇರಿಸಿ ಚೆನ್ನಾಗಿ ಕಲಸಿ ಮುಚ್ಚಳ ಮುಚ್ಚಿ ಬೇಯಿಸಿ. ಸಿಪ್ಪೆ ಚೆನ್ನಾಗಿ ಬೆಂದ ನಂತರ ತುರಿದ ತೆಂಗಿನಕಾಯಿಯನ್ನು ಸೇರಿಸಿ ಕಲಸಿ ಒಲೆಯನ್ನು ಆರಿಸಿದರೆ ರುಚಿಕರವಾದ ಬೂದುಗುಂಬಳಕಾಯಿ ಸಿಪ್ಪೆಯ ಪಲ್ಯ ಸವಿಯಲು ಸಿದ್ಧ.



