ಕೀವ್: ಲಿಬಿಯಾದ ನೌಕಾ ನೆಲೆಯಲ್ಲಿ ರಷ್ಯಾದ ಯುದ್ಧನೌಕೆಯ ಮೇಲೆ ನಡೆದ ದಾಳಿಯ ಹಿಂದೆ ತನ್ನ ಕೈವಾಡ ಇರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದಾರೆ.
‘ರಷ್ಯಾದ ನೌಕೆಯನ್ನು ಭಾನುವಾರ ಹೊಡೆದುರುಳಿಸುವ ಕಾರ್ಯಚರಣೆಗೆ ಉಕ್ರೇನ್ ಪಡೆಗಳು ಏಳು ಸ್ವದೇಶಿ ಡ್ರೋನ್ಗಳನ್ನು ನಿಯೋಜಿಸಿದ್ದವು.
ಈ ನೌಕೆಯು ರಷ್ಯಾದ ಹೊಸ ನೌಕೆಯಾಗಿದ್ದು, 2023ರಲ್ಲಿ ನಿಯೋಜಿಸಲಾಗಿತ್ತು’ ಎಂದು ಝೆಲೆನ್ಸ್ಕಿ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಈ ಪ್ರದೇಶದಲ್ಲಿ ನಾವು ನಮ್ಮ ಕಾರ್ಯಾಚರಣೆಯನ್ನು ಮುಂದುವರಿಸುತ್ತೇವೆ. ರಷ್ಯಾದ ಆಕ್ರಮಣಕ್ಕೆ ಪ್ರತ್ಯುತ್ತರ ನೀಡುತ್ತೇವೆ. ಉಕ್ರೇನ್ ಶಸ್ತ್ರಾಸ್ತ್ರಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂದು ಹೇಳಿದ್ದಾರೆ.
‘ಶಸ್ತ್ರಾಸ್ತ್ರಗಳ ಸಾಗಾಣೆಗೆ ರಷ್ಯಾ ಬಳಸುವ ಎಂ.ವಿ ಅಂಗರ ಹಡಗಿನ ಮೇಲೆಯೂ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ರಷ್ಯಾದ ಕೆಎ–27 ಸೇನಾ ಹೆಲಿಕಾಪ್ಟರ್ ಕೂಡಾ ನಾಶವಾಗಿದೆ’ ಎಂದು ತಿಳಿಸಿದ್ದಾರೆ.
‘ಲಿಬಿಯಾದಲ್ಲಿನ ನೌಕಾನೆಲೆಯ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ರಷ್ಯಾದ ನೌಕೆಗೆ ತೀವ್ರ ಹಾನಿಯಾಗಿದೆ’ ಎಂದು ಲಿಬಿಯಾದ ಅಧಿಕಾರಿಗಳು ತಿಳಿಸಿದ್ದಾರೆ.



