ಬೀಜಿಂಗ್: ಉಭಯದೇಶಗಳ ಉದ್ಯಮಿಗಳಿಗೆ ವೀಸಾ ನೀಡುವ ಬಗ್ಗೆ ಭಾರತದೊಂದಿಗೆ ಪ್ರಕ್ರಿಯೆ ನಡೆಸಲು ಸಿದ್ಧರಿದ್ದೇವೆ ಎಂದು ಚೀನಾ ತಿಳಿಸಿದೆ.
ಉದ್ಯಮ ವೀಸಾ ಸೇರಿದಂತೆ ಭಾರತೀಯರಿಗೆ ವೀಸಾ ನೀಡುವುದನ್ನು ಚೀನಾ ಕಡಿಮೆಗೊಳಿಸಿದೆ ಎಂದು ವರದಿಯಾಗಿರುವ ಬಗ್ಗೆ ಚೀನಾ ಪ್ರತಿಕ್ರಿಯೆ ನೀಡಿದೆ.
'ಕಾನೂನು ಮತ್ತು ನಿಯಮಗಳನ್ವಯ ಅರ್ಹ ನಾಗರಿಕರಿಗೆ ಚೀನಾ ವೀಸಾ ನೀಡುತ್ತದೆ’ ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.


