ಕಾಸರಗೋಡು: ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (ಐಎಂಎ) ಕಾಸರಗೋಡು ಘಟಕವು ತನ್ನ ಮಹಿಳಾ ವಿಭಾಗವಾದ 'ವಿಮೆನ್ ಇನ್ ಮೆಡಿಕಲ್ ಅಸೋಸಿಯೇಷನ್' (ವಿಮಾ) ಸಹಯೋಗದೊಂದಿಗೆ ಮಕ್ಕಳ ದಿನಾಚರಣೆ ಮತ್ತು ದೀಪಾವಳಿ ಉತ್ಸವವನ್ನು ಇಲ್ಲಿನ ಐಎಂಎ ಹೌಸ್‌ನಲ್ಲಿ ಸಂಭ್ರಮದಿಂದ ಆಚರಿಸಿತು.
ಇದೇ ಸಂದರ್ಭದಲ್ಲಿ 'ವಿಮಾ' ಸಂಘಟನೆಯ ವಾರ್ಷಿಕ ಮಹಾಸಭೆಯೂ ಜರುಗಿತು. ಐಎಂಎ ಅಧ್ಯಕ್ಷ ಡಾ. ಜಮಾಲ್ ಅಹ್ಮದ್ ಎ. ಸಮಾರಂಭವನ್ನು ಉದ್ಘಾಟಿಸಿದರು. 'ವಿಮಾ' ಅಧ್ಯಕ್ಷೆ ಡಾ. ಸುಧಾ ಭಟ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಐಎಂಎ ಕಾರ್ಯದರ್ಶಿ ಡಾ. ಮಾಹಿನ್ ಪಿ. ಅಬ್ದುಲ್ಲಾ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯದರ್ಶಿ ಡಾ. ಶ್ರೀಕರಿ ವಾರ್ಷಿಕ ವರದಿಯನ್ನು ಮಂಡಿಸಿದರು.
ಸಭೆಯಲ್ಲಿ 'ವಿಮಾ' ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ನೂತನ ಅಧ್ಯಕ್ಷೆಯಾಗಿ ಡಾ. ಉಷಾ ಮೆನನ್ ಹಾಗೂ ಕಾರ್ಯದರ್ಶಿಯಾಗಿ ಡಾ. ಚೈತ್ರಾ ಅವರು ಆಯ್ಕೆಯಾದರು.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಮಕ್ಕಳಿಗಾಗಿ ವೇಷಭೂಷಣ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು ಹಾಗೂ ದೀಪಗಳನ್ನು ಬೆಳಗುವ ಮೂಲಕ ದೀಪಾವಳಿ ಹಬ್ಬವನ್ನು ಸಡಗರದಿಂದ ಆಚರಿಸಲಾಯಿತು.


