HEALTH TIPS

ಬಿಮಲ್‌ ಪ್ರಕರಣ: ವಿವಾದ ನಿಭಾಯಿಸಿದ ರೀತಿಗೆ ಬಿಜೆಪಿಯಲ್ಲಿ ಅಸಮಾಧಾನ

ಇಂಫಾಲ್‌: 'ಜೆಎನ್‌ಯು ಪ್ರಾಧ್ಯಾಪಕ ಕಾಂಗ್ರೆಸ್‌ ಸಂಸದ ಅಂಗಮ್ಚ ಬಿಮಲ್‌ ಆಕೀಜಮ್ ಅವರು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ' ಎಂದು 11 ವಿದ್ಯಾರ್ಥಿನಿಯರು ಆರೋಪಿಸಿದ್ದರು. ಈ ವಿವಾದ ನಿಭಾಯಿಸಿದ ರೀತಿಯ ಕುರಿತು ಮಣಿಪುರ ಬಿಜೆಪಿಯೊಳಗೆ ಅಸಮಾಧಾನ ಎದ್ದಿದೆ. 


'ಮೈತೇಯಿ ಸಮುದಾಯವು ಅತಿ ಹೆಚ್ಚಿರುವ ಇಂಫಾಲ್‌ನಲ್ಲಿ ಸಂಸದ ಬಿಮಲ್‌ ಅವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆಕೀಜಮ್ ಅವರನ್ನು ವಿರೋಧಿಸಿದ್ದರಿಂದ ಪಕ್ಷಕ್ಕೆ ನಷ್ಟವೇ ಆಗಿದೆ' ಎಂದು ಹೆಸರು ಹೇಳಲು ಇಚ್ಛಿಸದ ಹಲವು ಬಿಜೆಪಿ ನಾಯಕರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ಬಿಮಲ್‌ ವಿರುದ್ಧ ನಾವು ವೈಯಕ್ತಿಕ ದಾಳಿ ನಡೆಸಬಾರದಿತ್ತು. ಇದು ನಮಗೆ ಸಂಪೂರ್ಣವಾಗಿ ತಿರುಗುಬಾಣವಾಗಿದೆ. ಮಣಿಪುರದ ಬಿಜೆಪಿ ಅಧ್ಯಕ್ಷರಾದ ಶಾರದಾ ದೇವಿ ಅವರು ರ್‍ಯಾಲಿ ನಡೆಸಿದ್ದು ತಪ್ಪು. ಜನರ ಭಾವನೆಯನ್ನು ಅರಿಯದೆಯೇ ರ್‍ಯಾಲಿ ನಡೆಸಲಾಗಿದೆ' ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

ತಮ್ಮ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಬಿಮಲ್‌ ಅವರು ವಿರೋಧಿಸಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries