HEALTH TIPS

West Bengal | ಡಿ. 31ರ ಒಳಗೆ 2.5 ಲಕ್ಷ ಜನರಿಗೆ ಪೌರತ್ವ: ಸಿಎಂ ಸುವೇಂದು ಅಧಿಕಾರಿ

 ಠಾಕೂರ್ ನಗರ: ಪಶ್ಚಿಮ ಬಂಗಾಳದ 2.5 ಲಕ್ಷ ಅರ್ಜಿದಾರರು ಪೌರತ್ವ ತಿದ್ದುಪಡಿ ಕಾಯ್ದೆ (ಅಂಂ) ಅಡಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ತ್ವರಿತಗೊಳಿಸಿ, ಡಿಸೆಂಬರ್ 31ರ ಒಳಗೆ ಪೌರತ್ವ ನೀಡಲಾಗುವುದು ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ರವಿವಾರ ತಿಳಿಸಿದ್ದಾರೆ. 


ಉತ್ತರ 24 ಪರಗಣ ಜಿಲ್ಲೆಯ ಮಟುವಾ ಸಮುದಾಯದ ಸಾಂಪ್ರದಾಯಿಕ ಭದ್ರಕೋಟೆಯಾದ ಠಾಕೂರ್ ನಗರದಲ್ಲಿ ನಡೆದ 'ಅಂತರರಾಷ್ಟ್ರೀಯ ಮಟುವಾ ಗೋಸಾಯಿ ಸಮಾವೇಶ 2026' ಉದ್ದೇಶಿಸಿ ಮಾತನಾಡಿದ ಅಧಿಕಾರಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲು ಮಟುವಾ ಸಮುದಾಯದ ಬೆಂಬಲವೇ ಕಾರಣ ಎಂದರು.

ಸಮುದಾಯದ ಅಭಿವೃದ್ಧಿಗೆ 50 ಕೋಟಿ ರೂ. ಮಂಜೂರು ಮಾಡಲಾಗುವುದು ಎಂದೂ ಅವರು ಘೋಷಿಸಿದರು.

''ಪಶ್ಚಿಮ ಬಂಗಾಳದಲ್ಲಿ ಇದುವರೆಗೆ ಕೇವಲ 25 ಸಾವಿರ ಜನರು ಮಾತ್ರ CAA ಅಡಿಯಲ್ಲಿ ಪೌರತ್ವ ಪಡೆದಿದ್ದಾರೆ. ನಾವು ವಿಚಾರಣೆಯನ್ನು ತ್ವರಿತಗೊಳಿಸಲಿದ್ದೇವೆ ಮತ್ತು ಡಿಸೆಂಬರ್ 31ರ ಒಳಗೆ 2.5 ಲಕ್ಷ ಅರ್ಜಿದಾರರಿಗೆ ಪೌರತ್ವ ನೀಡಲಿದ್ದೇವೆ'' ಎಂದು ಅಧಿಕಾರಿ ತಿಳಿಸಿದರು.

''ಉಳಿದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು CAA ಜಾರಿಗೊಳಿಸಿದ್ದಾರೆ ಮತ್ತು ಅರ್ಹರಿಗೆ ಪೌರತ್ವ ಸಿಕ್ಕಿದೆ. ಮಮತಾ ಬ್ಯಾನರ್ಜಿ ಮಾತ್ರ ಇದನ್ನು ವಿರೋಧಿಸಿದರು'' ಎಂದು ಅವರು ಹೇಳಿದರು.

ಇದಕ್ಕೂ ಮುನ್ನ, ಠಾಕೂರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಧಿಕಾರಿ, ತಮ್ಮ ಪೂರ್ವಾಧಿಕಾರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಮಟುವಾ ಸಮುದಾಯಕ್ಕೆ ಏನನ್ನೂ ಮಾಡಲಿಲ್ಲ. ಬದಲಾಗಿ, ಸಮುದಾಯವನ್ನು ವಿಭಜಿಸಿದರು ಎಂದು ಆರೋಪಿಸಿದರು. 





ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries