HEALTH TIPS

ರಾಜ್ಯಮಟ್ಟದ ವಿಜ್ಞಾನ ಮೇಳ: ವೆಬ್ ವಿನ್ಯಾಸದಲ್ಲಿ ಹಾಧಿ ಅಬೂಬಕರ್‌ಗೆ ದ್ವಿತೀಯ ಸ್ಥಾನ; ಎಣ್ಮಕಜೆ ಪಂಚಾಯತಿಗೆ ಕೀರ್ತಿ

ಪೆರ್ಲ: ಪಾಲಕ್ಕಾಡ್‌ನ ಮಣ್ಣಾರ್‌ಕಾಡ್‌ನಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಮೇಳದ ಐಟಿ ವಿಭಾಗದ ವೆಬ್ ಪೇಜ್ ವಿನ್ಯಾಸ ಸ್ಪರ್ಧೆಯಲ್ಲಿ ಕಾಟುಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾರ್ಥಿ ಹಾಧಿ ಅಬೂಬಕರ್ ನಡುಬೈಲ್ 'ಎ' ಗ್ರೇಡ್‌ನೊಂದಿಗೆ ದ್ವಿತೀಯ ಸ್ಥಾನ ಗಳಿಸಿ ಎಣ್ಮಕಜೆ ಪಂಚಾಯತಿಗೆ ಕೀರ್ತಿ ತಂದಿದ್ದಾರೆ.

ಉಪಜಿಲ್ಲಾ ಹಾಗೂ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದ ಇವರು, ಸೌದಾಭಿ-ಮೊಹಮ್ಮದ್ ಹನೀಫ್ ದಂಪತಿಯ ಪುತ್ರ. 12ನೇ ವಯಸ್ಸಿನಲ್ಲೇ ತಂತ್ರಜ್ಞಾನದಲ್ಲಿ ನಿಪುಣತೆ ಸಾಧಿಸಿರುವ ಹಾಧಿ, ಪೆರ್ಲದ ತಂದೆಯ ಜನಸೇವಾ ಕೇಂದ್ರದಲ್ಲಿಯೂ ತಾಂತ್ರಿಕ ಸೇವೆ ನೀಡುತ್ತಿದ್ದಾರೆ. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದ ಅಭಿನಂದನೆ ಸಲ್ಲಿಸಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries