HEALTH TIPS

ಮಂತ್ರಾಲಯದಲ್ಲಿ ರಂಜಿಸಿದ ವೈಷ್ಣವೀ ನಾಟ್ಯಾಲಯದ ಭರತನಾಟ್ಯ

ಬದಿಯಡ್ಕ: ಮಂತ್ರಾಲಯದ ತುಂಗಾ ತೀರದಲ್ಲಿ ಪುತ್ತೂರಿನ ವೈಷ್ಣವೀ ನಾಟ್ಯಾಲಯದ ನಿರ್ದೇಶಕಿ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರ ನಿರ್ದೇಶನದಲ್ಲಿ 8 ಮಂದಿ ಕಲಾವಿದರಿಂದ ಪ್ರದರ್ಶಿಸಲ್ಪಟ್ಟ ಭರತನಾಟ್ಯವು ಭಕ್ತರನ್ನು ಆನಂದಗೊಳಿಸಿತು.

ಶ್ರೀಮಠದ ನೇತೃತ್ವದಲ್ಲಿ ನಿರ್ವಹಿಸುತ್ತಿರುವ 'ನಾದನಮನ' ಕಾರ್ಯಕ್ರಮದ ಭಾಗವಾಗಿ ಪ್ರಾಂಶುಪಾಲ ವಾದಿರಾಜಾಚಾರ್ ಹಾಗೂ ಸಂಚಾಲಕರಾದ ಪದ್ಮನಾಭಾಚಾರ್ ಸಮ್ಮುಖದಲ್ಲಿ ನಡೆದ 'ಗುರುಚರಣಾರ್ಪಿತಂ' ಕಾರ್ಯಕ್ರಮದಲ್ಲಿ ಪುಷ್ಪಾಂಜಲಿ, ಗಣೇಶ ಸ್ತುತಿ, ಶಿವಸ್ತುತಿ, ದೇವೀ ಸ್ತುತಿ, ರಾಮ ಕೀರ್ತನ, ಪಾಂಡುರಂಗ ಅಭಂಗ ಹಾಗೂ ತಿಲ್ಲಾನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

ವಿದುಷಿ ಯೋಗೀಶ್ವರಿ ಜಯಪ್ರಕಾಶ್, ವಿದುಷಿ ಹರ್ಷಿತ ಬದಿಯಡ್ಕ, ವಿದುಷಿ ಅಭಿಜ್ಞ ಕೊಳ್ತಿಗೆ, ವಿದುಷಿ ಪ್ರಣೀತ ಬಾಯಾರು, ವಿದುಷಿ ಭಾರ್ಗವಿ ಬಾಯಾರು, ಡಾ. ಅರ್ಪಿತ ಮುಳ್ಳೇರಿಯ, ಕು. ಪ್ರತೀಕ ರೈ ಕೊಳಂಬೆ ಹಾಗೂ ಕು. ವೈಷ್ಣವೀ ಬದಿಯಡ್ಕ ಪ್ರದರ್ಶನದಲ್ಲಿ ಭಾಗವಹಿಸಿದರು. ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಕಲಾವಿದರಿಗೆ ಫಲಮಂತ್ರ ಅಕ್ಷತೆ ನೀಡಿ ಆಶೀರ್ವದಿಸಿದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries