ಬದಿಯಡ್ಕ: ಬದಿಯಡ್ಕ ಗ್ರಾಮ ಪಂಚಾಯಿತಿ ಕೃಷಿಭವನದ ಮೂಲಕ ಜನಕೀಯಾಸೂತ್ರಣ ಪದ್ಧತಿಯ ಭಾಗವಾಗಿ ಕೃಷಿಕರಿಗೆ ಮಣ್ಣಿನ ಚಟ್ಟಿ ವಿತರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ. ಶಂಕರ ಚಾಲನೆ ನೀಡಿದರು.
ಉಪಾಧ್ಯಕ್ಷೆ ಅಶ್ವಿನಿ ಕೆ.ಎಂ., ಕ್ಷೇಮಕಾರ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ರಜನಿ ಸಂದೀಪ್, ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷ ಅವಿನಾಶ್ ರೈ, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಾಲಕೃಷ್ಣ ಶೆಟ್ಟಿ ಕೆ., ಶ್ಯಾಮಪ್ರಸಾದ ಮಾನ್ಯ, ಮಧುಸೂದನ ಕಂಗಿಲ, ಶಾಹಿನ, ಶ್ಯಾಮಪ್ರಸಾದ ಸರಳಿ ಹಾಗೂ ಫಲಾನುಭವಿ ಕೃಷಿಕರು ಪಾಲ್ಗೊಂಡಿದ್ದರು. ಕೃಷಿ ಅಧಿಕಾರಿಗಳಾದ ಬಿಂದು ಜಾರ್ಜ್ ಸ್ವಾಗತಿಸಿ, ಮೋಹನನ್ ವಂದಿಸಿದರು.

.jpg)
