HEALTH TIPS

ನೀರು ಸೇದುವಾಗ ಹಗ್ಗ ತುಂಡಾಗಿ ಬಾವಿಗೆ ಬಿದ್ದ ಮಹಿಳೆ: ನೆರೆಮನೆಯ ಯುವಕ, ಅಗ್ನಿಶಾಮಕ ದಳದಿಂದ ಸಾಹಸಿಕ ರಕ್ಷಣೆ

ಕಾಶರಗೋಡು: ನೀರು ಸೇದುವಾಗ ಆಕಸ್ಮಿಕವಾಗಿ ಹಗ್ಗ ತುಂಡಾಗಿ ಬಾವಿಗೆ ಬಿದ್ದ 55 ವರ್ಷದ ಮಹಿಳೆಯೊಬ್ಬರನ್ನು ನೆರೆಮನೆಯ ಯುವಕನ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ದಳದ ತ್ವರಿತ ಕಾರ್ಯಾಚರಣೆಯಿಂದ ಪವಾಡಸದೃಶವಾಗಿ ರಕ್ಷಿಸಿದ ಘಟನೆ ಕಾಸರಗೋಡು ಸಮೀಪದ ಪನಂಗೋಳಿಯಲ್ಲಿ ನಡೆದಿದೆ.

ಪನಂಗೋಳಿ ನಿವಾಸಿ ಆಶಾಲತಾ (55) ಪ್ರಾಣಾಪಾಯದಿಂದ ಪಾರಾದ ಮಹಿಳೆ.


ಸಮಯಪ್ರಜ್ಞೆ ಮೆರೆದ ನೆರೆಮನೆಯ ಯುವಕ:

ಸೋಮವಾರ ಸಂಜೆ ಸುಮಾರು 5 ಗಂಟೆಯ ವೇಳೆಗೆ ಆಶಾಲತಾ ಅವರು ತಮ್ಮ ಮನೆಯ ಬಾವಿಯಿಂದ ನೀರು ಸೇದುತ್ತಿದ್ದಾಗ ಏಕಾಏಕಿ ಹಗ್ಗ ತುಂಡಾಗಿದೆ. ಇದರಿಂದ ನಿಯಂತ್ರಣ ತಪ್ಪಿ ಅವರು ಆಳವಾದ ಬಾವಿಗೆ ಬಿದ್ದಿದ್ದಾರೆ. ತಕ್ಷಣವೇ ಕೇಳಿಬಂದ ಭಾರೀ ಶಬ್ದವನ್ನು ಆಲಿಸಿದ ಮನೆಯವರು ಹಾಗೂ ಅಕ್ಕಪಕ್ಕದವರು ಸ್ಥಳಕ್ಕೆ ಧಾವಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆಯನ್ನು ಅರಿತ ನೆರೆಮನೆಯ ನಿವಾಸಿ ಹರಿಪ್ರಸಾದ್ ಕ್ಷಣ ಮಾತ್ರವೂ ತಡಮಾಡದೆ ಬಾವಿಗೆ ಇಳಿದಿದ್ದಾರೆ. ಅಗ್ನಿಶಾಮಕ ದಳ ಬರುವವರೆಗೂ ಅವರು ಹಗ್ಗದ ನೆರವಿನಿಂದ ನೀರಿನಲ್ಲಿ ಮುಳುಗದಂತೆ ಆಶಾಲತಾ ಅವರನ್ನು ಎತ್ತಿಹಿಡಿದು ಧೈರ್ಯ ತುಂಬಿದ್ದು, ಜೀವ ಉಳಿಯುವಲ್ಲಿ ಈ ಸಮಯಪ್ರಜ್ಞೆಯ ರಕ್ಷಣೆ ನಿರ್ಣಾಯಕ ಪಾತ್ರ ವಹಿಸಿತು.

ಅಗ್ನಿಶಾಮಕ ದಳದಿಂದ ರೋಚಕ ರಕ್ಷಣಾ ಕಾರ್ಯಾಚರಣೆ:

ಸ್ಥಳೀಯರು ನೀಡಿದ ತುರ್ತು ಮಾಹಿತಿಯ ಮೇರೆಗೆ ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದರು. ವಿಶೇಷ ರಕ್ಷಣಾ ಬಲೆಯ (ಖesಛಿue ಓeಣ) ನೆರವಿನಿಂದ ಬಾವಿಯೊಳಗೆ ಇಳಿದ ರಕ್ಷಣಾ ಪಡೆ, ಗಾಯಗೊಂಡಿದ್ದ ಆಶಾಲತಾ ಹಾಗೂ ಕೆಳಗಿಳಿದಿದ್ದ ಹರಿಪ್ರಸಾದ್ ಅವರನ್ನು ಅತ್ಯಂತ ಸುರಕ್ಷಿತವಾಗಿ ಮೇಲಕ್ಕೆತ್ತಿತು.

ಹಿರಿಯ ಅಗ್ನಿಶಾಮಕ ಮತ್ತು ರಕ್ಷಣಾ ಅಧಿಕಾರಿ ಕೆ. ರಂಜಿತ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಅಧಿಕಾರಿಗಳಾದ ಇ. ಪ್ರಸೀದ್, ರಾಜೇಶ್ ಪಾವೂರು, ಎಸ್. ಎಂ. ಅಶ್ವಿನ್, ವೈಶಾಖ್ ಪಾರ್ಥಸಾರಥಿ ಹಾಗೂ ಹೋಮ್ ಗಾರ್ಡ್ ಪಿ. ಶ್ರೀಜಿತ್ ಪಾಲ್ಗೊಂಡಿದ್ದರು.

ಬಾವಿಯಲ್ಲಿ ನೀರಿನ ಮಟ್ಟ ಸಾಕಷ್ಟು ಹೆಚ್ಚಾಗಿದ್ದುದರಿಂದ ಬಿದ್ದ ರಭಸಕ್ಕೆ ನೆಲಕ್ಕೆ ತಾಗದೆ ಪ್ರಾಣಾಪಾಯ ತಪ್ಪಿದೆ. ತಕ್ಷಣ ಸ್ಪಂದಿಸಿ ಬಾವಿಗಿಳಿದು ಮಹಿಳೆಯನ್ನು ಮುಳುಗದಂತೆ ಹಿಡಿದಿಟ್ಟುಕೊಂಡ ಯುವಕ ಹರಿಪ್ರಸಾದ್ ಅವರ ಸಾಹಸಕ್ಕೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಗೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries