HEALTH TIPS

ಮಕ್ಕಳ ಕೊಂದವರನ್ನು ಬಿಡಲ್ಲ...: ಅಮೆರಿಕದ ಇಬ್ಬರು ಅಧಿಕಾರಿಗಳ ಬೆನ್ನತ್ತಿದ ಇರಾನ್

ಟೆಹ್ರಾನ್:  ಮಿನಾಬ್‌ನ ಶಾಲೆಯೊಂದರ ಮೇಲೆ ಕ್ಷಿಪಣಿ ದಾಳಿ ನಡೆಸಿ 123 ಮಕ್ಕಳ ಸಾವಿಗೆ ಕಾರಣರಾದ ಅಮೆರಿಕದ ಇಬ್ಬರು ನೌಕಾಪಡೆ ಅಧಿಕಾರಿಗಳನ್ನು ಹುಡುಕುತ್ತಿರುವುದಾಗಿ ಇರಾನ್ ಹೇಳಿದೆ.


ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಇರಾನ್, 'ನಿಮ್ಮನ್ನು ಹುಡುಕಿಯೇ ತೀರುತ್ತೇವೆ' ಎಂದು ಪರೋಕ್ಷವಾಗಿ ಬೆದರಿಕೆ ಹಾಕಿದೆ.

ಅಮೆರಿಕದ ಯುದ್ಧನೌಕೆ 'ಯುಎಸ್‌ಎಸ್ ಸ್ಪ್ರೂಯನ್ಸ್‌'ನ ಕಮಾಂಡಿಂಗ್ ಆಫೀಸರ್ ಕಮಾಂಡರ್ ಲೀ ಆರ್. ಟೇಟ್ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಲೆಫ್ಟಿನೆಂಟ್ ಕಮಾಂಡರ್ ಜೆಫ್ರಿ ಇ. ಯಾರ್ಕ್ ಅವರನ್ನು ಹುಡುಕುತ್ತಿರುವುದಾಗಿ ಇರಾನ್‌ ಹೇಳಿದೆ.

'ಈ ಇಬ್ಬರನ್ನು ನೆನಪಿಟ್ಟುಕೊಳ್ಳಿ. ಟೇಟ್ ಮತ್ತು ಯಾರ್ಕ್‌, ಇವರೇ ಶಾಲೆ ಮೇಲೆ ಕ್ಷಿಪಣಿ ಉಡಾಯಿಸಲು ಆದೇಶಿಸಿದವರು. ಇದರಿಂದ ಮಿನಾಬ್‌ನ ಶಾಲೆಯಲ್ಲಿದ್ದ ನೂರಾರು ಮುಗ್ಧ ಮಕ್ಕಳು ಸಾವಿಗೀಡಾಗಿದ್ದಾರೆ. ಇವರಿಗೂ ಮಕ್ಕಳಿಲ್ಲವೇ?' ಎಂದು ಇರಾನ್ ಈ ಹಿಂದೆ ಪ್ರಕಟಿಸಿದ್ದ ಪೋಸ್ಟ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿತ್ತು.

ಆ ಪೋಸ್ಟ್‌ ಅನ್ನು ಮರುಹಂಚಿಕೊಂಡಿರುವ ಅದು, ಮಕ್ಕಳ ಕೊಂದವರನ್ನು ಹುಡುಕಿಯೇ ತೀರುವುದಾಗಿ ಶಪಥ ಮಾಡಿದೆ.

ಅಮೆರಿಕದ ಹಿರಿಯ ಅಧಿಕಾರಿಗಳ ಮೇಲೆ ದಾಳಿ ನಡೆಸಿದರೆ ಇರಾನ್ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ ಬೆನ್ನಲ್ಲೇ ಇರಾನ್‌ನಿಂದ ಈ ಹೇಳಿಕೆ ಹೊರಬಿದ್ದಿದೆ.

ಅಮೆರಿಕದ ಹಿರಿಯ ಅಧಿಕಾರಿಯೊಬ್ಬರ ಹತ್ಯೆ ನಡೆದರೆ ಇರಾನ್ ಹೆಚ್ಚು ಕಾಲ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂದು ಟ್ರಂಪ್ ಸಂದರ್ಶನವೊಂದರಲ್ಲಿ ಎಚ್ಚರಿಸಿದ್ದರು.

ಫೆಬ್ರುವರಿಯಲ್ಲಿ ನಡೆದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಆರಂಭಿಕ ಹಂತದಲ್ಲಿ ಮಿನಾಬ್‌ನ ಶಾರೆ ತಯ್ಯಬಾ ಶಾಲೆಯ ಮೇಲೆ ಕ್ಷಿಪಣಿ ದಾಳಿ ನಡೆದಿತ್ತು. ಘಟನೆಯಲ್ಲಿ 123 ಮಕ್ಕಳು ಸೇರಿದಂತೆ ಕನಿಷ್ಠ 156 ಮಂದಿ ಮೃತಪಟ್ಟಿದ್ದರು ಎಂದು ವರದಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries