HEALTH TIPS

ನಕ್ಸಲ್‌ ಪೀಡಿತ ಬುಡಕಟ್ಟು ಜನರ ರಕ್ಷಣೆಗೆ ಹಿಂದಿನ ಸರ್ಕಾರಗಳು ಮುಂದಾಗಿರಲಿಲ್ಲ: PM

ನವದೆಹಲಿ:  ನಕ್ಸಲ್‌ ಹಿಂಸಾಚಾರದಿಂದ ಬುಡಕಟ್ಟು ಸಮುದಾಯಗಳು ಹೆಚ್ಚು ತೊಂದರೆ ಅನುಭವಿಸಿದ್ದವು. ಆದರೆ ಆ (ಬುಡಕಟ್ಟು) ಜನರ ರಕ್ಷಣೆ ವಿಚಾರದಲ್ಲಿ ಹಿಂದಿನ ಸರ್ಕಾರಗಳು ನಿರ್ಲಕ್ಷ್ಯ ತೋರಿದ್ದವು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಆರೋಪಿಸಿದ್ದಾರೆ. 


ಸ್ವಾತಂತ್ರ್ಯ ಹೋರಾಟಗಾರ, ಬುಡಕಟ್ಟು ಸಮುದಾಯದ ನಾಯಕ ಬಿರ್ಸಾ ಮುಂಡಾ ಅವರ 151ನೇ ಜನ್ಮದಿನದ ಪ್ರಯುಕ್ತ ಮಹಾರಾಷ್ಟ್ರದ ಗಡ್‌ಚಿರೋಲಿಯಲ್ಲಿ ಆಯೋಜಿಸಿದ್ದ ಜನಜಾತೀಯಾ ಗೌರವ ದಿನ ಕಾರ್ಯಕ್ರಮದಲ್ಲಿ ವರ್ಚುವಲ್‌ ಆಗಿ ಭಾಗವಹಿಸಿದ ಮೋದಿ, ಬುಡಕಟ್ಟು ಜನರು ಅನ್ಯಾದ ವಿರುದ್ಧ ಸದಾ ಧ್ವನಿ ಎತ್ತಿದ್ದಾರೆ ಎಂದು ಹೇಳಿದ್ದಾರೆ.

ನಕ್ಸಲ್‌ ಹಾವಳಿಯಿಂದಾಗಿ ಬುಡಕಟ್ಟು ಜನರು ಮತದಾನದ ಹಕ್ಕಿನಿಂದ ವಂಚಿತರಾಗಿದ್ದರೂ, ಹಿಂದಿನ ಸರ್ಕಾರಗಳು ಮೌನವಾಗಿದ್ದವು ಎಂದು ದೂರಿರುವ ಪ್ರಧಾನಿ, ದಶಕಗಳಿಂದ ಮೂಲಸೌಕರ್ಯ ವಂಚಿತವಾಗಿದ್ದ ಬುಡಕಟ್ಟು ಜನರ ಅಭಿವೃದ್ಧಿಗಾಗಿ ತಮ್ಮ ಸರ್ಕಾರ ಶ್ರಮಿಸಿದ ಎಂದಿದ್ದಾರೆ. ಹಾಗೆಯೇ, ಸುಮಾರು ₹ 1 ಲಕ್ಷ ಕೋಟಿ ಅನುದಾನ ಹಂಚಿಕೆ ಮಾಡಿರುವುದಾಗಿಯೂ ತಿಳಿಸಿದ್ದಾರೆ.

ಕೇಂದ್ರ ಸರ್ಕಾರವು ಬಡತನ ನಿರ್ಮೂಲನೆಗೆ ಸಾಕಷ್ಟು ಕೆಲಸ ಮಾಡಿದೆ ಎಂದ ಅವರು, ಸುಮಾರು 50 ಕೋಟಿ ಜನರನ್ನು ಕಡುಬಡತನದಿಂದ ಮೇಲೆತ್ತಿರುವುದಾಗಿ ಹೇಳಿಕೊಂಡಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries