HEALTH TIPS

Saudi Arabia | ದಮ್ಮಾಮ್ ವಿಮಾನ ನಿಲ್ದಾಣ, ಜಿಝಾನ್ ರಾಡಾರ್ ಕೇಂದ್ರದ ಮೇಲೆ ದಾಳಿ: ಹೂತಿಗಳಿಂದ ಹೇಳಿಕೆ

ದಮ್ಮಾಮ್:  ಸೌದಿ ಅರೆಬಿಯದ ದಮ್ಮಾಮ್ ವಿಮಾನ ನಿಲ್ದಾಣ ಮತ್ತು ಜಿಝಾನ್ ನಲ್ಲಿರುವ ಮುನ್ನೆಚ್ಚರಿಕಾ ರಾಡಾರ್ ಕೇಂದ್ರವನ್ನು ಗುರಿಯಾಗಿಸಿಕೊಂಡು ಡ್ರೋನ್ ದಾಳಿ ನಡೆಸಿರುವುದಾಗಿ ಯೆಮೆನ್ ನ ಹೂತಿ ಸಶಸ್ತ್ರ ಗುಂಪು ಹೇಳಿಕೊಂಡಿದೆ ಎಂದು Al Jazeera ವರದಿ ಮಾಡಿದೆ.


ಕಳೆದ 48 ಗಂಟೆಗಳಲ್ಲಿ ಎರಡು ಡ್ರೋನ್ ಗಳನ್ನು ಬಳಸಿ ಪೂರ್ವ ಸೌದಿ ಅರೆಬಿಯದ ದಮ್ಮಾಮ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಹೂತಿ ಗುಂಪಿನ ಮಿಲಿಟರಿ ವಕ್ತಾರ ಯಾಹ್ಯಾ ಸರೀ ತಿಳಿಸಿದ್ದಾರೆ.

ಇದೇ ವೇಳೆ, ನೈಋತ್ಯ ಸೌದಿ ಅರೆಬಿಯದ ಜಿಝಾನ್ ನಗರದಲ್ಲಿರುವ ಮುನ್ನೆಚ್ಚರಿಕಾ ರಾಡಾರ್ ಕೇಂದ್ರದ ಮೇಲೂ ಡ್ರೋನ್ ಮೂಲಕ ದಾಳಿ ನಡೆಸಿರುವುದಾಗಿ ಅವರು ಹೇಳಿದ್ದಾರೆ.

ಈ ದಾಳಿಗಳು ಯಶಸ್ವಿಯಾಗಿವೆಯೇ ಎಂಬ ಬಗ್ಗೆ ಹೂತಿ ಗುಂಪು ಯಾವುದೇ ಹೆಚ್ಚಿನ ವಿವರ ನೀಡಿಲ್ಲ. ಹೂತಿಗಳ ಹೇಳಿಕೆಯನ್ನು ಸೌದಿ ಅರೆಬಿಯ ತಕ್ಷಣಕ್ಕೆ ದೃಢಪಡಿಸಿಲ್ಲ. ದಾಳಿಗಳ ಕುರಿತು ಸೌದಿ ಅರೆಬಿಯದಿಂದ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries