ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ಜಾಗತಿಕ ಶಾಂತಿ ಸೂಚ್ಯಂಕ; ಯಾವುದು ಅತ್ಯಂತ ಶಾಂತಿಯುತ ದೇಶ!
ದಕ್ಷಿಣ ಏಷ್ಯಾದ ಶಾಂತಿಯುತ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದ್ದು, ನೂತನ ಸಮೀಕ್ಷೆಯ ಪ್ರಕಾರ ಜಾಗತಿಕ ಮಟ್ಟದಲ್ಲಿ ಭಾರತ 137 ನೇ ಸ್ಥಾನದಲ್ಲಿದೆ.
ಆಸ್ಟ್ರೇಲಿಯಾ ಮೂಲದ ಇಕೋನಾಮಿಕ್ಸ್ ಅಂಡ್ ಪೀಸ್( ಅರ್ಥಶಾಸ್ತ್ರ ಮತ್ತು ಶಾಂತಿ) ಸಂಸ್ಥೆ 2017 ರ ಜಾಗತಿಕ ಶಾಂತಿ ಸೂಚ್ಯಂಕ ಸಮೀಕ್ಷೆ ನಡೆಸಿದೆ ಎಂದು ವರದಿ ತಿಳಿಸಿದೆ .
ಈ ನೂತನ ಜಾಗತಿಕ ಶಾಂತಿ ಸೂಚ್ಯಂಕದ ಪಟ್ಟಿಯ ಪ್ರಕಾರ , ದಕ್ಷಿಣ ಏಷ್ಯಾದಲ್ಲಿ ಭೂತಾನ್ ಅತ್ಯಂತ ಶಾಂತಿಯುತ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು , 13 ನೇ ಸ್ಥಾನ ಪಡೆದುಕೊಂಡಿದೆ . ತದನಂತರ ಶ್ರೀಲಂಕಾ 80 ನೇ ಸ್ಥಾನ , ಬಾಂಗ್ಲಾದೇಶ 84 , ಭಾರತ 137 , ಪಾಕಿಸ್ತಾನ 152 ಹಾಗೂ ಅಫ್ಘಾನಿಸ್ತಾನ 162 ನೇ ಸ್ಥಾನದಲ್ಲಿದೆ .
2011 ರಲ್ಲಿ ಸಿರಿಯಾ ಯುದ್ಧ ಆರಂಭವಾದ ಬಳಿಕ ಮೊದಲ ಬಾರಿಗೆ ಜಗತ್ತಿನಾದ್ಯಂತ ಶಾಂತಿ ನಿಧಾನವಾಗಿ ಮರುಕಳುಹಿಸುತ್ತಿದೆ ಎಂದು ಸಿಡ್ನಿ ಮೂಲದ ಚಿಂತಕರ ಚಾವಡಿ ಅಭಿಪ್ರಾಯವ್ಯಕ್ತಪಡಿಸಿದೆ.




