ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ಲಸಿಕಾ ಸಂಶೋಧನೆಯ ಹೊಸ ಹಬ್ ಆಗಿ ಉದಯಿಸುತ್ತಿರುವ ಭಾರತ
ನವದೆಹಲಿ: ವಿಶ್ವದ ಟಾಪ್ ಲಸಿಕೆ ಉತ್ಪಾದನಾ ರಾಷ್ಟ್ರವಾದ ಭಾರತ ಇದೀಗ ಈ ಬಗೆಗಿನ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲೂ ದಾಪುಗಾಲು ಇಡುತ್ತಿದೆ. ವಿಶ್ವದ ಶೇ.60ರಷ್ಟು ವ್ಯಾಕ್ಸಿನ್ಗಳು ಭಾರತದಲ್ಲೇ ಉತ್ಪಾದನೆಯಾಗುತ್ತದೆ.
ಲಸಿಕೆಯ ಬಗೆಗಿನ ಸಂಶೋಧನೆಗಳು, ಅದನ್ನು ಅಭಿವೃದ್ಧಿಪಡಿಸುವಿಕೆಯ ಬಗ್ಗೆ ಭಾರತದಲ್ಲಿ ಹೆಚ್ಚಿನ ಗಮನವನ್ನು ನೀಡಲಾಗುತ್ತದೆ. ಕೈಗೆಟುಕುವ ದರದ ಔಷಧಿಗಳಿಗೆ ಭಾರತ ಈಗಾಗಲೇ ಫೇಮಸ್ ಆಗಿದೆ.
ನಿರಂತರ ಸಂಶೋಧನೆಗಳ ಫಲವಾಗಿಯೇ ಭಾರತ ಟಾಪ್ ಲಸಿಕಾ ಉತ್ಪಾದನಾ ದೇಶವಾಗಿ ಹೊರಹೊಮ್ಮಿದೆ. ವಿಶ್ವದ ಶೇ.60ರಷ್ಟು ಲಸಿಕೆಗಳನ್ನು ನಾವೇ ಉತ್ಪಾದನೆ ಮಾಡುತ್ತಿದ್ದೇವೆ ಎಂಬುದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಹೊಸ ಲಸಿಕೆಗಳನ್ನು ಡಿಸ್ಕವರಿ ಮಾಡುವುದು ತುಂಬಾನೇ ರಿಸ್ಕ್ ಇರುವ ಕಾರ್ಯ. ವಿಜ್ಞಾನಿಗಳು ತಯಾರಿಸಿದ 10 ಸಾವಿರ ಲಸಿಕೆಗಳಲ್ಲಿ 1ನ್ನು ಮಾತ್ರ ಮನುಷ್ಯನ ಮೇಲೆ ಪರೀಕ್ಷೆ ಮಾಡಲಾಗುತ್ತದೆ. ಈ ಪ್ರಕ್ರಿಯೆ ನಡೆಯಲು ಕನಿಷ್ಠವೆಂದರೂ 10 ವರ್ಷಗಳು ಬೇಕು.
ಈ ವರ್ಷದ ಜನವರಿಯಲ್ಲಿ ಭಾರತ ಇಂಟರ್ನ್ಯಾಷನಲ್ ವ್ಯಾಕ್ಸಿನ್ ಇನ್ಸ್ಟಿಟ್ಯೂಟ್ ಗವನರ್ಿಂಗ್ ಕೌನ್ಸಿಲ್ನ ಸದಸ್ಯತ್ವವನ್ನು ಪಡೆದುಕೊಂಡಿದೆ. ಇದು ಲಸಿಕಾ ಕ್ಷೇತ್ರದಲ್ಲಿ ಭಾರತ ಸಾಕಷ್ಟು ಮುಂದುವರೆದಿದೆ ಎಂಬುದನ್ನು ಸಾಬೀತುಪಡಿಸಿದೆ.




