ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ತನ್ನವರಿಗೆ ಗೌರವ ತಂದುಕೊಟ್ಟ ದೇಶದ ಮೊದಲ ತೃತೀಯ ಲಿಂಗಿ ನ್ಯಾಯಧೀಶೆ
ಕೋಲ್ಕತ್ತಾ: ದೇಶದ ಮೊತ್ತ ಮೊದಲ ತೃತೀಯ ಲಿಂಗಿ ನ್ಯಾಯಧೀಶೆ ಎಂಬ ಹೆಗ್ಗಳಿಕೆಗೆ ಪಾತ್ರರಾದ 29 ವರ್ಷದ ಜೋಯಿತಾ ಮಹಿ ಮಂಡಲ್ ಇದೀಗ ತನ್ನ ಸಮುದಾಯದವರಿಗೆ ಗೌರವ ತಂದುಕೊಡುತ್ತಿದ್ದಾರೆ.
ಜುಲೈ 8ರಂದು ಪಶ್ಚಿಮಬಂಗಾಳದ ದಿನಜ್ಪುರ್ ಜಿಲ್ಲೆಯ ಲೋಕ್ ಅದಾಲತ್ ನ್ಯಾಯಧೀಶೆಯಾಗಿ ಜೋಯಿತಾ ಅಧಿಕಾರ ಸ್ವೀಕಾರ ಮಾಡಿದ್ದರು. ತೃತೀಯ ಲಿಂಗಿಯೊಬ್ಬರು ಗೌರವಾನ್ವಿತ ಹುದ್ದೆ ಏರಿದ ಮಹತ್ವದ ದಿನವದು.
ಹಿಜರಾ ಆಗಿ ವೃತ್ತಿ ಮಾಡುತ್ತಾ, ಕುಣಿದು ಕುಪ್ಪಳಿಸುತ್ತ ಜನರಿಂದ ಹಣ ಸಂಗ್ರಹಿಸುತ್ತಿದ್ದ ಅವರು, ಅದನ್ನೆಲ್ಲ ತೊರೆದು ವಿದ್ಯೆ ಕಲಿತು ತೃತೀಯ ಲಿಂಗಿಗಳ ಸಮಾನತೆ, ಶಿಕ್ಷಣ, ಉದ್ಯೋಗಕ್ಕಾಗಿ ಹೋರಾಡಿದರು. ಸಕರ್ಾರ, ಸ್ಥಳಿಯ ಸಂಸ್ಥೆಗಳ ಸಹಕಾರದೊಂದಿಗೆ ನ್ಯಾಯಧೀಶೆಯಾಗಿ ನೇಮಕವಾದರು.
ಇದೀಗ ಅವರಿಗೆ ಜನರಿಂದ ಗೌರವ ದೊರಕುತ್ತಿದೆ, ನೆಮ್ಮದಿಯ ಬದುಕು ನಡೆಸುತ್ತಿದ್ದಾರೆ. ಇದುವರೆಗೆ ನಾಲ್ಕು ಪ್ರಕರಣಗಳಲ್ಲಿ ನ್ಯಾಯಸಮ್ಮತ ತೀರ್ಪನ್ನು ಪ್ರಕಟಿಸಿದ್ದಾರೆ. ತನ್ನ ಸಮುದಾಯದ ಇತರರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆದು ತರುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.




