ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 27, 2017
ರಾಷ್ಟ್ರಗೀತೆ=ಆದೇಶ ಮರು ಪರಿಶೀಲನೆ
ನವದೆಹಲಿ: ಸಿನಿಮಾ ಮಂದಿರಗಳಲ್ಲಿ ಸಿನಿಮಾ ಆರಂಭಕ್ಕೆ ಮೊದಲು ರಾಷ್ಟ್ರಗೀತೆಯನ್ನು ಕಡ್ಡಾಯವಾಗಿ ಹಾಡಬೇಕು ಎಂಬ ಆದೇಶವನ್ನು ಮಾರ್ಪಡಿಸುವ ಸುಳಿವನ್ನು ಸುಪ್ರೀಂ ಕೋಟರ್್ ನೀಡಿದೆ . ಕಡ್ಡಾಯವಾಗಿ ರಾಷ್ಟ್ರಗೀತೆ ಹಾಡುವುದನ್ನು ಮುಂದುವರಿಸಬೇಕು ಎಂಬ ಇಚ್ಛೆ ಸಕರ್ಾರಕ್ಕೆ ಇದ್ದಿದ್ದರೆ ಈ ಬಗ್ಗೆ ಸುತ್ತೋಲೆಯನ್ನು ಯಾಕೆ ಹೊರಡಿಸಿಲ್ಲ ಎಂದು ಕೋಟರ್್ ಪ್ರಶ್ನಿಸಿದೆ.
`ರಾಷ್ಟ್ರಗೀತೆ ಹಾಡದ ಜನರು ಕಡಿಮೆ ದೇಶಪ್ರೇಮಿಗಳು ಎಂದು ನಾವು ಯಾಕೆ ಭಾವಿಸಬೇಕು ? ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಿದ ಆದೇಶವನ್ನು ಪ್ರಶ್ನಿಸಿದರೆ ರಾಷ್ಟ್ರವಿರೋಧಿ ಎಂಬ ಹಣೆಪಟ್ಟೆ ಕಟ್ಟುತ್ತಾರೆ ಎಂಬ ಭೀತಿ ಜನರಲ್ಲಿ ಇದೆ . ದೇಶಪ್ರೇಮಿಗಳು ಎನಿಸಿಕೊಳ್ಳಲು ರಾಷ್ಟ್ರಗೀತೆ ಹಾಡುವ ಅಗತ್ಯ ಇಲ್ಲ ' ಎಂದು ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.




