ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 24, 2017
58ನೇ ಶಾಲಾ ಕಲೋತ್ಸವಕ್ಕೆ ಮಹಾಜನದಲ್ಲಿ ಭರದ ಸಿದ್ದತೆ
ಬದಿಯಡ್ಕ: ಏಷ್ಯಾದಲ್ಲೇ ಅತೀ ದೊಡ್ಡ ಸಾಂಸ್ಕೃತಿಕ ಉತ್ಸವವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಕೇರಳ ರಾಜ್ಯ ಶಾಲಾ ಕಲೋತ್ಸವಗಳ ಹಾಲಿ ವರ್ಷದ ಕಲೋತ್ಸವ ಇದೀಗ ಆರಂಭಗೊಳ್ಳುತ್ತಿದ್ದು, ಕುಂಬಳೆ ಉಪಜಿಲ್ಲಾ ಮಟ್ಟದ ಶಾಲಾ ಕಲೋತ್ಸವ ಈವರ್ಷ ನೀಚರ್ಾಲು ಮಹಾಜನ ಸಂಸ್ಕೃತ ಕಾಲೇಜು ಹೈಸ್ಕೂಲಿನಲ್ಲಿ ನಡೆಯಲಿದೆ. 21 ವರ್ಷಗಳ ಬಳಿಕ ಮತ್ತೆ ಉಪಜಿಲ್ಲಾ ಕಲೋತ್ಸವದ ಅತಿಥೇಯತ್ವ ನೀಚರ್ಾಲಿಗೆ ಒಲಿದಿದೆ. ಈ ಹಿಂದೆ 1995 ರಲ್ಲಿ ನೀಚರ್ಾಲಿನ ಮಹಾಜನ ವಿದ್ಯಾಸಂಸ್ಥೆಯಲ್ಲಿ ಉಪಜಿಲ್ಲಾ ಕಲೋತ್ಸವ ನಡೆದಿತ್ತು.
ಕುಂಬಳೆ ಉಪಜಿಲ್ಲಾ ಕಲೋತ್ಸವ ಅ.31 ರಿಂದ ನವಂಬರ್ 4ರ ತನಕ ನಡೆಯಲಿದೆ. ಈ ಬಾರಿ ಕುಂಬಳೆ ಉಪಜಿಲ್ಲೆಯ 117 ಶಾಲೆಗಳ ಅಂದಾಜು 3 ಸಾವಿರ ಸ್ಪಧರ್ಾಳು ವಿದ್ಯಾಥರ್ಿಗಳು ವಿವಿಧ ಸ್ಪಧರ್ೆಗಳಲ್ಲಿ ತಮ್ಮ ಪ್ರತಿಭೆ ಪ್ರದಶರ್ಿಸಿ ಜಿಲ್ಲಾ ಮಟ್ಟದ ಸ್ಪಧರ್ೆಗೆ ಅರ್ಹತೆ ಪಡೆಯುವರು. ಒಟ್ಟು ಅಂದಾಜು 322 ವಿವಿಧ ಸ್ಪಧರ್ೆಗಳು 10 ವೇದಿಕೆಗಳಲ್ಲಿ ನಡೆಯಸಲು ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ.
ಹಿನ್ನೆಲೆ: ಶಾಲಾ ವಿದ್ಯಾಥರ್ಿಗಳ ಪ್ರತಿಭೆಯ ಅನಾವರಣಕ್ಕೆ ಮತ್ತು ಅದರ ಪ್ರೋತ್ಸಾಹಕ್ಕೆ ಶಾಲಾ ಮಟ್ಟ, ಉಪಜಿಲ್ಲೆ, ಜಿಲ್ಲೆ ಮತ್ತು ರಾಜ್ಯಮಟ್ಟ ಎಂಬ ನಾಲ್ಕು ಹಂತಗಳಲ್ಲಿ ಕಳೆದ 56 ವರ್ಷಗಳಿಂದ ಕಲೋತ್ಸವಗಳು ನಡೆಯುತ್ತಿವೆ. ಏಷ್ಯಾ ಖಂಡದಲ್ಲೇ ಅತಿ ದೊಡ್ಡ ಸಾಂಸ್ಕೃತಿಕ ಉತ್ಸವವೆಂಬ ಮಾನ್ಯತೆ ಇದಕ್ಕಿದೆ. ರಾಜ್ಯಮಟ್ಟದಲ್ಲಿ ಪಾಲ್ಗೊಂಡ ಸ್ಪಧರ್ಾಳುಗಳಿಗೆ ಹತ್ತನೇ ತರಗತಿಯಲ್ಲಿ ವಿಶೇಷ ಹೆಚ್ಚುವರಿ ಅಂಕ ನೀಡುವ ಪರಿಪಾಠವೂ ಇದೆ.
ಖಚರ್ು-ವೆಚ್ಚ:
ಉಪಜಿಲ್ಲೆ, ಜಿಲ್ಲೆ, ರಾಜ್ಯಮಟ್ಟದ ಕಲೋತ್ಸವ ನಡೆಸಲು ರಾಜ್ಯ ಸರಕಾರ ಮಿತಿಯೊಳಗಿನ ನೆರವು ನೀಡುತ್ತದೆ. ಈ ಬಾರಿಯ ಉಪಜಿಲ್ಲಾ ಕಲೋತ್ಸವಗಳಿಗೆ 4 ಲಕ್ಷ ರೂ.ಗಳನ್ನು ಸರಕಾರ ಒದಗಿಸುತ್ತದೆ. ನೀಚರ್ಾಲಿನಲ್ಲಿ ನಡೆಯಲಿರುವ ಐದು ದಿನಗಳ ಕಲೋತ್ಸವಕ್ಕೆ 13 ಲಕ್ಷ ರೂ.ಗಳ ಖಚರ್ು ಅಂದಾಜಿಸಲಾಗಿದ್ದು, ಸರಕಾರದ ನೆರವು ಹೊರತುಪಡಿಸಿ ಉಳಿದ ಮೊತ್ತವನ್ನು ಮಕ್ಕಳ ಪಾಲಕರು, ಸ್ಥಳೀಯರು, ಹಳೆ ವಿದ್ಯಾಥರ್ಿಗಳು ಮತ್ತು ದಾನಿಗಳಿಂದ ಸಂಗ್ರಹಿಸಲಾಗುತ್ತದೆ.
ಪಾಲ್ಗೊಳ್ಳುವ ವಿದ್ಯಾಥರ್ಿ ಸ್ಪಧರ್ಾಳುಗಳಿಗೆ, ಶಿಕ್ಷಕರಿಗೆ, ತೀಪರ್ುಗಾರರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಊಟ ಹಾಗು ಸಂಜೆ ಉಪಹಾರಗಳನ್ನು ವ್ಯವಸ್ಥೆಗೊಳಿಸಲಾಗುತ್ತದೆ. ಜೊತೆಗೆ ತೀಪರ್ುಗಾರರಿಗೆ ಗೌರವ ಧನ, ಧ್ವನಿ, ಬೆಳಿಕಿನ ವ್ಯವಸ್ಥೆ, ಅಡುಗೆ-ಜೀನಸು ಸಾಮಗ್ರಿಗಳೇ ಮೊದಲಾದ ಭಾರೀ ಖಚರ್ುಗಳು ತಗಲುತ್ತವೆ.ದಶಕಗಳ ಹಿಂದಿನ ವರೆಗೆ ಹಗಲು ಮತ್ತು ರಾತ್ರಿಯಲ್ಲೂ ಕಲೋತ್ಸವಗಳು ನಡೆಯುತ್ತಿದ್ದವು. ಆದರೆ ಒಂದು ದಶಕದಿಂದೀಚೆಗೆ ರಾತ್ರಿಯ ಕಾರ್ಯಕ್ರಮಗಳನ್ನು ನಿಲ್ಲಿಸಲಾಗಿದ್ದು, ಹಗಲು ಮಾತ್ರ ಕಲೋತ್ಸವ ನಡೆಯುತ್ತವೆ.
ಕಲೋತ್ಸವದಿಂದ ಚಲನಚಿತ್ರದ ವರೆಗೆ:
ಶಾಲಾ ಕಲೋತ್ಸವಗಳಲ್ಲಿ ಪ್ರತಿಭೆಗಳಾಗಿ ಹೊರಹೊಮ್ಮಿರುವ ಯುವ ವಿದ್ಯಾಥರ್ಿಗಳಲ್ಲಿ ಅನೇಕರು ತಮ್ಮ ಬದುಕಿನ ಯಶಸ್ಸನ್ನು ಕಂಡುಕೊಳ್ಳುವಲ್ಲಿ ಸಾಫಲ್ಯತೆ ಹೊಂದಿದೆ. ಅನೇಕ ಚಲನಚಿತ್ರ ತಾರೆಯರು ಇಂದು ಗುರುತಿಸಿಕೊಳ್ಳುವಲಲಿ ಕಲೋತ್ಸವದ ಪಾತ್ರ ಮಹತ್ತರ.ಈ ಪೈಕಿ 1986ರ ರಾಜ್ಯ ಕಲಾಪ್ರತಿಭೆ ಪುರಸ್ಕಾರ ಪಡೆದ ನಟ ವಿನೀತ್, 1990ರ ಕಲಾ ತಿಲಕ ಪ್ರಶಸ್ತಿ ಪಡೆದ ದಿವ್ಯಾಉಣ್ಣಿ, 1992 ಮತ್ತು 1995ರ ಕಲಾ ತಿಲಕ ಪ್ರತಿಭೆ ಮಂಜು ವಾರ್ಯರ್, 2001 ಪ್ರತಿಭೆ ನವ್ಯಾ ನಾಯರ್, 2001 ಕಲಾ ತಿಲಕ ವಿಜೇತೆ ಅಂಬಿಳಿದೇವಿ, ುಪಜಿಲ್ಲಾ ಮಟ್ಟದ ಕಲಾ ತಿಲಕ ಪ್ರತಿಭೆ ಕಾವ್ಯಾ ಮಾಧವನ್, 1988ರ ಪ್ರತಿಭೆ ವಿನೀತ್ ಕುಮಾರ್, 2000ನೇ ವರ್ಷದ ಮಾಪಿಳ್ಳ ಪಾಟ್ಟ್ ಪ್ರಥಮ ಸ್ಥಾನಪಡೆದ ವಿನೀತ್ ಶ್ರೀನಿವಾಸನ್, 1991ರ ಕಲಾ ತಿಲಕ ಪಡೆದ ವಿಂದುಜಾ ಮೆನೋನ್ ಮೊದಲಾದವರು ಕಲೋತ್ಸವಗಳ ಮೂಲಕ ಚಲನಚಿತ್ರ ರಂಗದಲ್ಲಿ ಮಿಂಚುವಂತಾದರು ಎಂಬುದು ಕಲೋತ್ಸವದ ಸಾರ್ಥಕತೆಗೆ ಹಿಡಿದ ಕನ್ನಡಿ.
ಏನಂತಾರೆ ಸಂಘಟಕರು:
ಈ ಬಾರಿಯ ಕುಂಬಳೆ ಉಪಜಿಲ್ಲಾ ಕಲೋತ್ಸವ ನೀಚರ್ಾಲಿನಲ್ಲಿ ನಡೆಸಲು ಎಲ್ಲರ ಕೇಳಿಕೆಯಂತೆ ವ್ಯವಸ್ಥೆಗಳನ್ನು ಸಜ್ಜುಗೊಳಿಸಲಾಗುತ್ತಿದೆ. ವಿದ್ಯಾಥಿಗಳ ಪ್ರತಿಭೆಯ ಅನಾವರಣಕ್ಕೆ ಮತ್ತು ಆ ಮೂಲಕ ಅವರನ್ನು ಬೆಳೆಸುವುದಕ್ಕೆ ಪೂರಕವಾದ ಕಲೋತ್ಸವಗಳು ವಿದ್ಯಾಭ್ಯಾಸದ ನೈಜ ಅರ್ಥವನ್ನು ಸಾಫಲ್ಯಗೊಳಿಸುತ್ತದೆ. ನೀಚರ್ಾಲಿನಲ್ಲಿ ನಡೆಯುವ ಉಪಜಿಲ್ಲಾ ಕಲೋತ್ಸವಕ್ಕೆ ಸ್ಥಳೀಯ ಮಹಾಜನರು, ಮಕ್ಕಳ ಪೋಷಕರು, ಶಿಕ್ಷಕರು ಪೂರ್ಣ ಪ್ರಮಾಣದಲ್ಲಿ ಸಹಕರಿಸಲಿದ್ದು, ಯಶಸ್ವಿಯಾಗಿ ನಡೆಯಲಿದೆ.
ಜಯದೇವ ಖಂಡಿಗೆ.
ಮಹಾಜನ ವಿದ್ಯಾಸಂಸ್ಥೆಗಳ ಪ್ರಬಂಧಕರು.






