ಯಾವುದೇ ಶೀರ್ಷಿಕೆಯಿಲ್ಲ
0
ಅಕ್ಟೋಬರ್ 23, 2017
'ಸಿನಿಮಾ ಹಾಲಿನಲ್ಲಿ ರಾಷ್ಟ್ರಗೀತೆಗೆ ಗೌರವ ಕೇಂದ್ರದ ತೀಮರ್ಾನ'
ನವದೆಹಲಿ: ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕಾ ಬೇಡ್ವಾ ಎಂಬುದರ ಬಗ್ಗೆ ನಿಧರ್ಾರ ತೆಗೆದುಕೊಳ್ಳುವಂತೆ ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋಟರ್್ ಹೇಳಿದೆ.
ರಾಷ್ಟ್ರಗೀತೆಗೆ ಅಗೌರವ 3 ವಿದ್ಯಾಥರ್ಿಗಳ ಬಂಧನ
"ನಮ್ಮ ಹೆಗಲ ಮೇಲಿಂದ ಗುಂಡು ಹಾರಿಸುವುದು ಬೇಡ. ನಿಧರ್ಾರವನ್ನು ನೀವೇ ತೆಗೆದುಕೊಳ್ಳಿ," ಎಂದು ಕೇಂದ್ರ ಸರಕಾರಕ್ಕೆ ಸುಪ್ರಿಂ ಕೋಟರ್್ ಸೂಚನೆ ನೀಡಿದೆ.
ವಿಚಾರಣೆ ವೇಳೆ ನ್ಯಾ. ಡಿ.ವೈ ಚಂದ್ರಚೂಡ್, "ನಿಮ್ಮ ರಾಷ್ಟ್ರೀಯತೆಯನ್ನು ಪ್ರದಶರ್ಿಸಲು ಸಿನಿಮಾ ಹಾಲ್ ನಲ್ಲಿ ರಾಷ್ಟ್ರಗೀತೆಗೆ ಎದ್ದು ನಿಲ್ಲಬೇಕಾಗಿಲ್ಲ," ಎಂದು ಮೌಖಿಕವಾಗಿ ಹೇಳಿದ್ದಾರೆ.
ಮುಂದುವರಿದು ಹೇಳಿದ ಅವರು"ಮುಂದೆ ನೀವು ಟೀಶಟರ್್ ಮತ್ತು ಶಾಟರ್್ ಗಳನ್ನು ಸಿನಿಮಾ ಹಾಲ್ ನಲ್ಲಿ ಧರಿಸಬೇಡಿ. ಇದು ರಾಷ್ಟ್ರಗೀತೆಗೆ ಮಾಡುವ ಅವಮಾನ ಎನ್ನುತ್ತೀರಿ. ನೈತಿಕ ಪೊಲೀಸ್ ಗಿರಿ ಮಾಡುವವರು ನಿಮ್ಮನ್ನು ತಡೆಯುತ್ತಾರೆ," ಎಂದು ಹೇಳಿದ್ದಾರೆ.
ರಾಷ್ಟ್ರಗೀತೆಗೆ ಎದ್ದು ನಿಲ್ಲುವ ಆದೇಶವನ್ನು ಕೇಂದ್ರ ಸರಕಾರ ಬೆಂಬಲಿಸಿದ್ದಕ್ಕೆ ಅಸಮಧಾನ ವ್ಯಕ್ತಪಡಿಸಿರುವ ಅವರು ಜನರು ಮನರಂಜನೆಗಾಗಿ ಸಿನಿಮಾ ಮಂದಿರಕ್ಕೆ ಬರುತ್ತಾರೆ ಎಂದು ಉಲ್ಲೇಖಿಸಿದ್ದಾರೆ.
ಈ ಸಂಬಂಧ ಅಂತಿಮ ತೀಮರ್ಾನ ತೆಗೆದುಕೊಳ್ಳಲು ಕೇಂದ್ರ ಸರಕಾರಕ್ಕೆ 2018ರ ಜನವರಿವರೆಗೆ ಸುಪ್ರಿಂ ಕೋಟರ್್ ಸಮಯ ನೀಡಿದೆ.





