HEALTH TIPS

No title

ಎಂಡೋ ಸಂತ್ರಸ್ತರ ಪಟ್ಟಿಯಲ್ಲಿ 287 ಮಂದಿಯನ್ನು ಸೇರಿಸಲು ನಿಧರ್ಾರ ಕಾಸರಗೋಡು: ಕಾಸರಗೋಡು ಜಿಲ್ಲೆಯ ಎಂಡೋಸಲಾನ್ ಸಂತ್ರಸ್ತರ ಪಟ್ಟಿಯಲ್ಲಿ ಹೊಸದಾಗಿ 287 ಮಂದಿಯನ್ನು ಸೇರಿಸಿಕೊಳ್ಳಲು ಕಲೆಕ್ಟರೇಟ್ ಕಾನರೆನ್ಸ್ ಸಭಾಂಗಣದಲ್ಲಿ ಜರಗಿದ ಎಂಡೋಸಲ್ಫಾನ್ ಪೀಡಿತರ ಏಕೋಪನಾ ಪುನರ್ವಸತಿಗಾಗಿರುವ ಜಿಲ್ಲಾ ಮಟ್ಟದ ಸೆಲ್ ಸಭೆಯಲ್ಲಿ ತೀಮರ್ಾನಿಸಲಾಗಿದೆ. ಪ್ರಸ್ತುತ 5209 ಮಂದಿ ಸಂತ್ರಸ್ತರ ಪಟ್ಟಿಯಲ್ಲಿದ್ದಾರೆ. ಮಾತ್ರವಲ್ಲದೆ 608 ಮಂದಿಗೆ ಉಚಿತ ಚಿಕಿತ್ಸಾ ಸಹಾಯ ಒದಗಿಸಲು ಎಂಡೋಸಲ್ಫಾನ್ ಸೆಲ್ನ ಅಧ್ಯಕ್ಷರಾದ ರಾಜ್ಯ ಕಂದಾಯ ಮತ್ತು ವಸತಿ ಇಲಾಖೆ ಸಚಿವ ಇ.ಚಂದ್ರಶೇಖರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಕಳೆದ ಎಪ್ರಿಲ್ ಮೊದಲ ವಾರದಲ್ಲಿ ನಡೆಸಿದ ಪ್ರತ್ಯೇಕ ವೈದ್ಯಕೀಯ ಶಿಬಿರದ ಆಧಾರದಲ್ಲಿ 27 ಗ್ರಾಮ ಪಂಚಾಯತ್ಗಳ 287 ಮಂದಿಯನ್ನು ನೂತನವಾಗಿ ಪಟ್ಟಿಗೆ ಸೇರಿಸಿಕೊಳ್ಳಲಾಗುವುದು. ಪಟ್ಟಿಯಲ್ಲಿ ಸೇರದಿರುವ 608 ಮಂದಿಗೆ ಉಚಿತ ಚಿಕಿತ್ಸಾ ಸೌಲಭ್ಯ ಒದಗಿಸಲಾಗವುದು. ವೈದ್ಯಕೀಯ ಕಾಲೇಜುಗಳ ಪರಿಣಿತ ವೈದ್ಯರ ತಂಡವು ರೋಗಿಗಳನ್ನು ಪರಿಶೀಲಿಸಿ ತಯಾರಿಸಿದ ಪಟ್ಟಿಯ ಪ್ರಕಾರ ಐಸಿಡಿಎಸ್ ಸೂಪರ್ವೈಸರ್ಗಳ ಫೀಲ್ಡ್ ತಪಾಸಣೆ ಪೂರ್ಣಗೊಳಿಸಿ ವೈದ್ಯರ ತಂಡವು ಪುನರ್ ಪರಿಶೀಲಿಸಿದ ಬಳಿಕ ಅಂತಿಮ ಪಟ್ಟಿಯನ್ನು ಜಿಲ್ಲಾ ಮಟ್ಟದ ಸೆಲ್ಗೆ ಸಲ್ಲಿಸಲಾಯಿತು. ಮಾನಸಿಕ, ಶಾರೀರಿಕವಾಗಿ ದೌರ್ಬಲ್ಯಗಳನ್ನು ಹೊಂದಿರುವ ಮತ್ತು ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಲು ಸಾಧ್ಯವಾಗದ ಯಾರಾದರೂ ಎಂಡೋ ಸಂತ್ರಸ್ತರು ಇದ್ದರೆ ಅವರನ್ನು ಸಹ ಪಟ್ಟಿಯಲ್ಲಿ ಪರಿಗಣಿಸಲು ಜಿಲ್ಲಾಧಿಕಾರಿಯವರಿಗೆ ಕಂದಾಯ ಇಲಾಖೆ ಸಚಿವ ಇ.ಚಂದ್ರಶೇಖರನ್ ನಿದರ್ೇಶಿಸಿದರು. ಎಂಡೋಸಲ್ಫಾನ್ ಪ್ಯಾಕೇಜ್ನಡಿ ನಬಾಡರ್್ ಆರ್ಐಡಿಎಫ್ ಯೋಜನೆಗಳಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ 181 ಯೋಜನೆಗಳ ಪೈಕಿ 128 ಯೋಜನೆಗಳನ್ನು ಈಗಾಗಲೇ ಪೂರ್ಣಗೊಳಿಸಲಾಗಿದೆ. ಜಲ ಪ್ರಾಧಿಕಾರದ 56 ಯೋಜನೆಗಳಲ್ಲಿ 36 ಯೋಜನೆಗಳನ್ನು ಪೂತರ್ಿಗೊಳಿಸಲಾಗಿದೆ. ಎಂಡೋಸಲ್ಫಾನ್ ಸಂತ್ರಸ್ತರಾದ ಎಲ್ಲಾ ಕುಟುಂಬಗಳನ್ನು ಅಂದರೆ ಆದ್ಯತಾ ಪಟ್ಟಿಯಲ್ಲಿ ಸೇರಿರುವವರು ಮತ್ತು ಬಿಪಿಎಲ್ ಲಿಸ್ಟ್ನಲ್ಲಿದ್ದವರ ಪಟ್ಟಿಯನ್ನು ನೀಡಲು ಜಿಲ್ಲಾ ನಾಗರಿಕ ಪೂರೈಕೆ ಅಕಾರಿಯವರಿಗೆ ಸಚಿವರು ಆದೇಶಿಸಿದರು. ಎಂಡೋ ಬಾತರಿಗೆ ಸರಕಾರದಿಂದ ಸಿಗುವ ಎಲ್ಲಾ ರೀತಿಯ ಸವಲತ್ತುಗಳನ್ನು ಕೂಡಲೇ ಒದಗಿಸಲು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಎಂಡೋಸಲ್ಫಾನ್ ಸಂತ್ರಸ್ತ ಸೆಲ್ನ ಸಭೆಯಲ್ಲಿ ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು, ಉದುಮ ಶಾಸಕ ಕೆ.ಕುಂಞಿರಾಮನ್, ಬ್ಲಾಕ್ ಮತ್ತು ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಸೆಲ್ನ ಸದಸ್ಯರು, ಎನ್ಎಚ್ಎಂ ಜಿಲ್ಲಾ ಪ್ರಾಜೆಕ್ಟ್ ಮೆನೇಜರ್ ಡಾ.ರಾಮನ್ ಸ್ವಾತಿ ವಾಮನ್ ಮತ್ತಿತರು ಉಪಸ್ಥಿತರಿದ್ದರು. ಆರ್ಡಿಓ ಸಿ.ಬಿಜು ವರದಿ ಮಂಡಿಸಿದರು. ವಿವಿಧ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಎಂಡೋ ಸ್ಥಿತಿಗತಿ ಅಧ್ಯಯನ : ಕೇರಳ ತೋಟಗಾರಿಕಾ ಗೋದಾಮುಗಳಲ್ಲಿ ಬ್ಯಾರಲ್ಗಳಲ್ಲಿ ತುಂಬಿಸಿಡಲಾದ ಎಂಡೋಸಲ್ಫಾನ್ ಕೀಟನಾಶಕದ ಪ್ರಸ್ತುತ ಸ್ಥಿತಿಗತಿಗಳ ಬಗ್ಗೆ ಅಧ್ಯಯನ ನಡೆಸುವುದಾಕ್ಕಾಗಿ ಎರಡು ಸ್ವತಂತ್ರ ಏಜೆನ್ಸಿಗಳಿಗೆ ಶೀಘ್ರ ಸ್ಯಾಂಪಲ್ಗಳನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಜೀವನ್ಬಾಬು ಸಭೆಗೆ ತಿಳಿಸಿದರು. ತಪಾಸಣಾ ವರದಿಯ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದರು. ಅಲ್ಲದೆ ಬ್ಯಾರಲ್ಗಳಲ್ಲಿರುವ ಕೀಟನಾಶಕದ ಕುರಿತು ಹೆಚ್ಚಿನ ಜಾಗ್ರತೆ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಜಿಲ್ಲಾಧಿಕಾರಿ ಹೇಳಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries