HEALTH TIPS

No title

ಇಂದು ಏಡ್ಸ್ ದಿನಾಚರಣೆ- ವಿವಿಧ ಕಾರ್ಯಕ್ರಮ ಕಾಸರಗೋಡು: ಇಂದು ವಿಶ್ವ ಏಡ್ಸ್ ದಿನವಾಗಿದ್ದು, ಇದರ ಪೂರ್ವಭಾವಿಯಾಗಿ ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್(ಎಡಿಎಂ) ಎನ್.ದೇವಿದಾಸ್ ತಿಳಿಸಿದ್ದಾರೆ. ಇದರಂಗವಾಗಿ ನ.29ರಂದು ಕಾಞಂಗಾಡು ಸರಕಾರಿ ನಸರ್ಿಂಗ್ ಶಾಲೆಯಲ್ಲಿ ಸ್ಕಿಟ್ ಸ್ಪಧರ್ೆ ನಡೆಯಿತು. ಇದರಲ್ಲಿ ಜಿಲ್ಲೆಯ ಹೈಯರ್ ಸೆಕೆಂಡರಿ, ವೊಕೇಶನಲ್ ಹೈಯರ್ಸೆಕೆಂಡರಿ, ನಸರ್ಿಂಗ್ ವಿದ್ಯಾಥರ್ಿಗಳು ಪಾಲ್ಗೊಂಡರು. ವಿಜಯಿಗಳಿಗೆ ಪ್ರಮಾಣಪತ್ರ ಮತ್ತು ನಗದು ಬಹುಮಾನವನ್ನು ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ. ನ.30ರಂದು ಸಂಜೆ 5.30ಕ್ಕೆ ಬೇಕಲ್ ಬೀಜ್ಪಾಕರ್್ನಲ್ಲಿ ಕ್ಯಾಂಡಲ್ ಉರಿಸುವುದು, ರೆಡ್ ಬೆಲೂನು ಹಾರಿಸುವುದು ಇತ್ಯಾದಿಗಳು ನಡೆಯಿತು. ಡಿ.1ರಂದು ಬೆಳಿಗ್ಗೆ 9ಕ್ಕೆ ಕಾಂಞಂಗಾಡು ಕೋಟಚ್ಚೇರಿಯಿಂದ ಪುರಭವನದ ತನಕ ಜಿಲ್ಲಾ ಮಟ್ಟದ ರ್ಯಾಲಿ, ಬಳಿಕ 11ಗಂಟೆಗೆ ಕಾಂಞಂಗಾಡು ಪುರಭವನದಲ್ಲಿ ಸಾರ್ವಜನಿಕ ಸಭೆ, ಕಾಸರಗೋಡು ಹೊಸಬಸ್ ನಿಲ್ದಾಣದಲ್ಲಿ ಏಡ್ಸ್ ಕುರಿತಾಗಿ ಜಾಗೃತಿ ಮೂಡಿಸಲು ಪ್ರದರ್ಶನ, ಪುಸ್ತಕ ವಿತರಣೆ ನಡೆಯಲಿದೆ ಎಂದು ಅವರು ತಿಳಿಸಿದರು. ಈಗ ಜಿಲ್ಲೆಯಲ್ಲಿ 1424ಮಂದಿಗೆ ಏಡ್ಸ್ ಬಾಧಿತರು ಇರುವುದಾಗಿ ದೃಢೀಕರಿಸಲಾಗಿದ್ದರೂ 697ಮಂದಿ ಮಾತ್ರ ಪ್ರಸ್ತುತ ಖಾಯಂ ಆಗಿ ಔಷಧಿ ಸೇವಿಸುತ್ತಿದ್ದಾರೆ. ಹಿಂದಿನ ವರ್ಷಗಳಿಗೆ ಹೋಲಿಸಿದರೆ ಏಡ್ಸ್ ಬಾಧಿತರ ಸಂಖ್ಯೆ ತೀರಾ ಕಡಿಮೆಯಾಗಿದೆ ಎಂದು ಎಡಿಎಂ ತಿಳಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries