HEALTH TIPS

No title

ನಿವೃತ್ತ ಸೀಮೆನ್ಗಳ ಪೆನ್ಶನ್ ವಿಷಯದಲ್ಲಿ ಸರಕಾರ ಮುತುವಜರ್ಿ ವಹಿಸಬೇಕು : ಮಚರ್ೆಂಟ್ ನೇವಿ ಯೂತ್ವಿಂಗ್ ಕಾಸರಗೊಡು: ನಿವೃತ್ತ ನಾವಿಕರ ಪಿಂಚಣಿ ವಿಷಯದಲ್ಲಿ ರಾಜ್ಯ ಸರಕಾರವು ತುತರ್ಾಗಿ ಮಧ್ಯ ಪ್ರವೇಶಿಸಬೇಕೆಂದು ಮಚರ್ೆಂಟ್ ನೇವಿ ಯೂತ್ವಿಂಗ್ ಜಿಲ್ಲಾ ಕನ್ವೆನ್ಶನ್ ನಿರ್ಣಯದಲ್ಲಿ ಹಕ್ಕೊತ್ತಾಯ ಮಂಡಿಸಿತು. ಪಾಲಕುನ್ನಿನಲ್ಲಿ ನಡೆದ ಕಾಸರಗೋಡು ಜಿಲ್ಲಾ ಕನ್ವೆನ್ಶನ್ ಸುರೇಶ್ ಟಿ.ವಿ ಅಧ್ಯಕ್ಷತೆಯಲ್ಲಿ ನಡೆಯಿತು. ರಾಷ್ಟ್ರೀಯ ಸಂಘಟನೆಯಾದ ನ್ಯಾಶನಲ್ ಯೂನಿಯನ್ ಆಫ್ ಸೀಫೇರಸರ್್ ಆಫ್ ಇಂಡಿಯಾ(ಎನ್.ಯು.ಎಸ್.ಐ) ಯ ಪದಾಧಿಕಾರಿ ಸಂತೋಷ್ ತೋರೋತ್ತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎನ್.ಯು.ಎಸ್.ಐ.ಯ ಅಧೀನದಲ್ಲಿ 2009 ರಲ್ಲಿ ರೂಪೀಕೃತವಾದ ಸಂಘಟನೆ ದೇಶ ವಿದೇಶಗಳ ಹಡಗಿನಲ್ಲಿ ವೃತ್ತಿ ಮಾಡಿ ದೇಶಕ್ಕೆ ವಿದೇಶಿ ವಿನಿಮಯದ ಬಹುದೊಡ್ಡ ದೇಣಿಗೆ ನೀಡುತ್ತಿರುವ ನಾವಿಕರನ್ನು ಒಗ್ಗೂಡಿಸಿ ಸಂಘಟನಾತ್ಮಕ ಪ್ರವೃತ್ತಿಯಲ್ಲಿ ಸಮಾಜ ಸೇವೆಯ ಮುಖಾಂತರ ಬಹುಮುಖೀ ಕಾರ್ಯಚಟುವಟಿಕೆಗಳಲ್ಲಿ ಭಾಗಿಯಾಗುವುದನ್ನು ಗಮನಿಸಿ ಸಂಘಟನೆಯನ್ನು ಶ್ಲಾಘಿಸಿದರು. ಸಂಸ್ಥೆಯು ಈ ವರ್ಷ ಸುಮಾರು 7 ಲಕ್ಷ ರೂಪಾಯಿಗಿಂತ ಮಿಕ್ಕಿ ಮೊತ್ತವನ್ನು ಜೀವಕಾರುಣ್ಯ ಚಟುವಟಿಕೆಗಳಿಗೆ ವೆಚ್ಚ ಮಾಡಿದೆ. ಉದುಮ ಕಿರಿಯ ಪ್ರಾಥಮಿಕ ಶಾಲೆಯ ಗಂಜಿ ಕೊಠಡಿಯ ಶೋಚನೀಯಾವಸ್ಥೆಯನ್ನು ಗಮನಿಸಿ 4.5 ಲಕ್ಷ ರೂ. ವೆಚ್ಚದಲ್ಲಿ ಗಂಜಿ ಕೊಠಡಿ ನಿಮರ್ಿಸಿಕೊಟ್ಟು ಗಮನ ಸೆಳೆಯಿತು. ಸುಮಾರು ಮೂರು ಲಕ್ಷ ರೂಪಾಯಿಗಳನ್ನು ನಿವೃತ್ತ ನಾವಿಕರ ಹಾಗೂ ಬಡವರ ತುತರ್ು ಆರೋಗ್ಯ ಸಮಸ್ಯೆಗಳಿಗೆ ವೆಚ್ಚ ಮಾಡಿ ಜೀವಕಾರುಣ್ಯ ಪ್ರವೃತ್ತಿಯನ್ನು ಉದ್ಘಾಟಿಸಿ ಸಂತೋಷ್ ತೋರೋತ್ತ್ ಶ್ಲಾಘಿಸಿದರು. ಕನ್ವೆನ್ಶನ್ನಲ್ಲಿ ಅನಿನ್ ವೆಡಿತ್ತರಕ್ಕಾಲ್ ರಾಜಕಿರಣ್, ಸಂತ ಶಂಭು, ರಿತುರಾಜ, ರಾಜನ್ ಪಾಕ್ಕರ ಮಾತನಾಡಿದರು. ಕನ್ವೆನ್ಶನ್ನಲ್ಲಿ ಜಯರಾಜ್ ಪಿ.ವಿ. ಅಧ್ಯಕ್ಷರಾಗಿ, ರಾಜೇಂದ್ರನ್ ಮುದಿಯಕ್ಕಾಲ್ ಪ್ರಧಾನ ಕಾರ್ಯದಶರ್ಿಯಾಗಿ, ವಿನೋದ್ ಉದಯಮಂಗಲ ಕೋಶಾಧಿಕಾರಿಯಾಗಿ ಚುನಾಯಿತರಾದರು. ಸುರೇಶ್ ಟಿ.ವಿ, ರಾಜ್ಕಿರಣ್, ವಿನೋದ್ ತೆಕ್ಕೇಕರ ಕಾರ್ಯದಶರ್ಿಗಳಾಗಿ, ಅನಿಲ್ ವೆಡಿತ್ತರ, ಮುರಳೀಧರ, ಕೃಷ್ಣದಾಸ್ ಮಲಾಂಕುನ್ನು ಉಪಾಧ್ಯಕ್ಷರಾಗಿ ಚುನಾಯಿತರಾದರು. ಮಧುಸೂದನ್ ಸಿ.ಬಿ, ಅರವಿಂದಾಕ್ಷನ್ ಕೆ.ಎ, ಮನೋಜ್ ವಿಜಯನ್ ಪೂಚ್ಚಕ್ಕಾಡ್ ರಕ್ಷಾಧಿಕಾರಿಯಾಗಿ ನಿಯೋಗಿಸಲ್ಪಟ್ಟರು. ರಾಜೇಂದ್ರನ್ ಪನಯಾಲ್ ಆಡಿಟರ್ ಆಗಿಯೂ, ಸಂತೋಷ್ ತೋರೋತ್ತ್ ಸಂಚಾಲಕರಾಗಿ ಸವರ್ಾನುಮತದಿಂದ ಚುನಾಯಿತರಾದರು. ರಾಜೇಂದ್ರನ್ ಮುದಿಯಕ್ಕಾಲ್ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries