ಯಾವುದೇ ಶೀರ್ಷಿಕೆಯಿಲ್ಲ
0
ಡಿಸೆಂಬರ್ 01, 2017
ನೀಚರ್ಾಲು : ಕುಮಾರ ಸ್ವಾಮಿ ಭಜನಾ ಸಂಘದ ವಾಷರ್ಿಕೋತ್ಸವ
ಬದಿಯಡ್ಕ: ನೀಚರ್ಾಲು ಶ್ರೀ ಕುಮಾರ ಸ್ವಾಮಿ ಭಜನಾ ಸಂಘದ ಆಶ್ರಯದಲ್ಲಿ 43ನೇ ವಾಷರ್ಿಕೋತ್ಸವವು ಡಿ.11ರಂದು ಜರಗಲಿದೆ.
ಇದರ ಪ್ರಯುಕ್ತ ಬೆಳಗ್ಗೆ 6.30ಕ್ಕೆ ಗಣಪತಿ ಹವನ, ಧ್ವಜಾರೋಹಣ, ಆಶ್ಲೇಷ ಪೂಜೆ, 8 ರಿಂದ ಸತ್ಸಂಗ, 9.15ರಿಂದ ಭಜನೆ, 11ಗಂಟೆಗೆ ನಡೆಯುವ ಧಾಮರ್ಿಕ ಸಭೆಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಗ್ರಾಮಾಂತರ ಜಿಲ್ಲಾ ಸಹ ಪ್ರಚಾರಕ್ ಜಿತೇಂದ್ರ ಪ್ರತಾಪನಗರ ಧಾಮರ್ಿಕ ಭಾಷಣ ಮಾಡುವರು.
ಚಕ್ರೇಶ್ವರ ಅಧ್ಯಕ್ಷತೆ ವಹಿಸುವರು. ಸಂಘದ ಹಿರಿಯ ಸದಸ್ಯರಾದ ನಾರಾಯಣ ಮಣಿಯಾಣಿ ಮತ್ತು ಮೊಳೆಯಾರು ಗುರುಸ್ವಾಮಿ ಅವರನ್ನು ಇದೇ ಸಂದರ್ಭದಲ್ಲಿ ಸಮ್ಮಾನಿಸಲಾಗುವುದು. ಮಧ್ಯಾಹ್ನ 12ಗಂಟೆಗೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ, ಮಧ್ಯಾಹ್ನ 1.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4ಕ್ಕೆ ನೃತ್ಯ ವೈವಿಧ್ಯ, ಸಂಜೆ 6.05ಕ್ಕೆ ದೀಪಪ್ರತಿಷ್ಠೆ, ಭಜನೆ, ರಾತ್ರಿ 9.00ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 9.30ರಿಂದ ಸಾಂಸ್ಕೃತಿಕ ಕಾರ್ಯಕ್ರಮ ಇತ್ಯಾದಿ ನಡೆಯಲಿದೆ.




