ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 13, 2017
ಕಾಂಕ್ರಿಟ್ ತಡೆಬೇಲಿ ವಿಸ್ತರಣೆಗೆ ಹೆಚ್ಚಿದ ಒತ್ತಾಯ
ಮುಳ್ಳೇರಿಯ : ದೇಲಂಪಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 6 ಹಾಗೂ 7ನೇ ವಾಡರ್್ ಪ್ರದೇಶವಾದ ತಲ್ಪಚ್ಚೇರಿ ಪರಿಸರದಲ್ಲಿ ಕೇಂದ್ರ ಸಕರ್ಾರದ ಅನುದಾನದಿಂದ ಕೇರಳ ರಾಜ್ಯ ಅರಣ್ಯ ಇಲಾಖೆಯ ನಿರ್ವಹಣೆಯಲ್ಲಿ ನಿಮರ್ಿಸಿದ ಕಾಂಕ್ರೀಟ್ ತಡೆಬೇಲಿಯು ಕಾಡಾನೆಗಳಿಂದ ಕೃಷಿಯನ್ನು ರಕ್ಷಿಸಲು ಬಹಳಷ್ಟು ಸಹಕಾರಿಯಾಗಿವೆ. ಸುಮಾರು 1.8 ಕಿಲೋಮೀಟರ್ ಉದ್ದದ ಈ ತಡೆಬೇಲಿಯ ಮಧ್ಯ ಭಾಗದ ಸುಮಾರು 400 ಮೀಟರ್ ಉದ್ದದ ಪ್ರದೇಶದಲ್ಲಿ ತಡೆಬೇಲಿ ಕಾಮಗಾರಿ ನಡೆದಿಲ್ಲ. ಈ ಪ್ರದೇಶಕ್ಕೆ ಕಾಂಕ್ರಿಟ್ ತಡೆಬೇಲಿಯ ಕಚ್ಛಾ ಸಾಮಗ್ರಿಗಳನ್ನು ಕೊಂಡೊಯ್ಯಲು ವ್ಯವಸ್ಥೆ ಇರದ ಕಾರಣ ಈ ಪ್ರದೇಶದಲ್ಲಿ ಕಾಮಗಾರಿ ತಾತ್ಕಾಲಿಕವಾಗಿ ಸ್ಥಗಿತವಾಗಿತ್ತು. ಇದೀಗ ಈ ಸಮಸ್ಯೆ ಪರಿಹಾರವಾಗಿದೆ.
ಕಳೆದ ಕೆಲದಿನಗಳಿಂದ ಕಾಡಾನೆಗಳು ಈ ಪ್ರದೇಶದ ಮೂಲಕ ಕೃಷಿಭೂಮಿಯನ್ನು ಪ್ರವೇಶಿಸಲು ಹೊಂಚು ಹಾಕುತ್ತಿವೆ. ಕೆಲದಿನಗಳ ಹಿಂದೆ ಈ ಪ್ರದೇಶಕ್ಕೆ ಸುಮಾರು 6 ಆನೆಗಳ ತಂಡ ಆಗಮಿಸಿತ್ತು. ಕೃಷಿಕರು ಸಿಡಿಸಿದ ಪಟಾಕಿ ಸದ್ದಿಗೆ ಅರಣ್ಯದ ಕಡೆಗೆ ಓಡಿಹೋದುವು. ಕಾಡಾನೆಗಳು ಕೃಷಿಭೂಮಿಗೆ ಮತ್ತೆ ದಾಳಿ ಮಾಡಲು ಹವಣಿಸುತ್ತಿದ್ದು, ಕೃಷಿಕರು ಕೃಷಿ ರಕ್ಷಣೆಯ ವಿಚಾರದಲ್ಲಿ ಆತಂಕಿತರಾಗಿದ್ದಾರೆ.
ಪ್ರತೀ 1 ಕಿಲೋಮೀಟರ್ಗೆ 1.36 ಕೋಟಿ ವೆಚ್ಚದಲ್ಲಿ ಈ ತಡೆಬೇಲಿ ನಿಮರ್ಾಣವಾಗಿದ್ದು, ತಡೆಬೇಲಿಯು 2.2 ಮೀಟರ್ ಎತ್ತರ ಹಾಗೂ 1 ಮೀಟರ್ ಅಗಲವಿದೆ. ಈ ತಡೆಬೇಲಿಯ ಕಾಮಗಾರಿಯು ಅಪೂರ್ಣವಾಗಿರುವುದು ಪ್ರದೇಶವಾಸಿಗಳಲ್ಲಿ ಭಯ ಹುಟ್ಟಿಸಿದೆ. ಕಾಮಗಾರಿ ನಡೆಸದೆ ಬಿಟ್ಟಿರುವ ಪ್ರದೇಶದಲ್ಲಿ ಕಾಡಾನೆಗಳು ಒಳ ಪ್ರವೇಶಿಸಿದಲ್ಲಿ ಸುಮಾರು 200ರಿಂದ 250 ಎಕರೆ ಕೃಷಿ ನಾಶವಾಗುವ ಸಾಧ್ಯತೆ ಇದೆ. ಈಗ ನಡೆದಿರುವ 1.4 ಕಿಲೋ ಮೀಟರ್ ತಡೆಬೇಲಿ ಕಾಮಗಾರಿಯು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಅವರ ಆದೇಶದಂತೆ ನಡೆದಿದೆ. ಉಳಿದಿರುವ 400 ಮೀಟರ್ ಉದ್ದದ ತಡೆಬೇಲಿ ಕಾಮಗಾರಿಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕೆಂದು ಕೇಂದ್ರ ಸಕರ್ಾರಕ್ಕೆ ಮನವಿ ಮಾಡಿದ್ದು, ಕೇಂದ್ರ ಸಕರ್ಾರವು ಕೇರಳ ರಾಜ್ಯ ಸಕರ್ಾರಕ್ಕೆ ಪರಿಸ್ಥಿತಿಯ ಪರಿಶೀಲನೆಗೆ ಆದೇಶಿಸಿದೆ ಎಂದು ದೇಲಂಪಾಡಿ ಗ್ರಾಮ ಪಂಚಾಯಿತಿ ಬಿಜೆಪಿ ಸಮಿತಿ ತಿಳಿಸಿದೆ.
ಈಗಾಗಲೇ ಕೇಂದ್ರ ಸಕರ್ಾರದ ಆದೇಶದ ಮೇರೆಗೆ ಕೇರಳ ರಾಜ್ಯ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಪ್ರದೇಶದಲ್ಲಿ ಸವರ್ೆ ನಡೆಸಿದ್ದು, ತಲ್ಪಚ್ಚೇರಿಯಿಂದ ಜಾಂಬರ್ಮೂಲೆ ಮೂಲಕ ಅಂಬಿತ್ತಿಮಾರು ಪ್ರದೇಶಕ್ಕೆ ತಡೆಬೇಲಿ ನಿಮರ್ಿಸಲು ಉದ್ದೇಶಿಸಲಾಗಿದೆ. ಇದರಿಂದ ಮಾವಿನಡಿ ಹಾಗೂ ಕಾಟಿಕಜೆಯ ಸುಮಾರು 250 ಎಕರೆ ಕೃಷಿಭೂಮಿ ಅರಣ್ಯದ ಪಾಲಾಗಲಿದೆ. ಆದ್ದರಿಂದ ಈ ಸವರ್ೆಯಲ್ಲಿ ತಲ್ಪಚ್ಚೇರಿಯಿಂದ ಮಾವಿನಡಿ, ಕಾಟಿಕಜೆ ಮೂಲಕ ಅಂಬಿತ್ತಿಮಾರಿಗೆ ಸಂಪಕರ್ಿಸುವ ತಡೆಬೇಲಿ ನಿಮರ್ಿಸುವ ತಿದ್ದುಪಡಿಯನ್ನು ಮಾಡಬೇಕೆಂದು ಕಾಟಿಕಜೆ ವನಸಂರಕ್ಷಣಾ ಸಮಿತಿ ಅಧ್ಯಕ್ಷ ವಾಸು ನಾಯ್ಕ ಒತ್ತಾಯಿಸಿದ್ದಾರೆ.
ಕಾಡಾನೆಗಳನ್ನು ತಡೆಯುವ ಕಾಂಕ್ರೀಟ್ ತಡೆಬೇಲಿಯನ್ನು ಮಾವಿನಡಿ, ಕಾಟಿಕಜೆ ಪ್ರದೇಶದಲ್ಲಿ ಅಗತ್ಯವಾಗಿ ನಿಮರ್ಿಸಬೇಕು. ಈ ಪ್ರದೇಶದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಿದೆ. ಈ ಬಗ್ಗೆ ಕೇರಳ ರಾಜ್ಯ ಅರಣ್ಯ ಇಲಾಖೆ ಹಾಗೂ ಕೇರಳ ರಾಜ್ಯ ಪರಿಶಿಷ್ಟ ಜಾತಿ/ವರ್ಗದ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಕಾಡುಪ್ರಾಣಿಗಳ ನಿರಂತರ ಹಾವಳಿಯಿಂದ ರಕ್ಷಿತಾರಣ್ಯದ ಸರಹದ್ದಿನಲ್ಲಿ ಭಾರೀ ಪ್ರಮಾಣದಲ್ಲಿ ಕೃಷಿ ನಾಶವಾಗುತ್ತಿದೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಪರಿಶಿಷ್ಟ ಜಾತಿ/ವರ್ಗ ಕೊಲನಿ ಅಧ್ಯಕ್ಷ ಹಾಗೂ ಟ್ರೈಬಲ್ ಕೊಲನಿ ಮುಖಂಡ ಕೇಪು ನಾಯ್ಕ ಕಾಟಿಕಜೆ ಹೇಳುತ್ತಾರೆ.
ಸಮರಸಕ್ಕೆ ಏನಂದ್ರು 1)ಕೋಟ್ಸ್:
ಇತ್ತೀಚೆಗೆ ಅರಣ್ಯ ಇಲಾಖೆ ಮಾಡಿದ ಸವರ್ೇಯನ್ನು ತಿದ್ದುಪಡಿ ಮಾಡಬೇಕು. ತಡೆಬೇಲಿಯು ತಲ್ಪಚ್ಚೇರಿ, ಮಾವಿನಡಿ, ಕಾಟಿಕಜೆ ಮೂಲಕ ಅಂಬಿತ್ತಿಮಾರಿಗೆ ಸಂಪಕರ್ಿಸಬೇಕು. ಇದರಿಂದ ಸುಮಾರು 250 ಎಕರೆ ಕೃಷಿ ರಕ್ಷಣೆ ಮಾಡಬಹುದು.
- ವಾಸು ನಾಯ್ಕ ಕಾಟಿಕಜೆ
ವನ ಸಂರಕ್ಷಣಾ ಸಮಿತಿ ಅಧ್ಯಕ್ಷ
ಕಾಟಿಕಜೆ
2)
ಕಾಡಾನೆಗಳನ್ನು ನಿಯಂತ್ರಿಸುವ ತಡೆಬೇಲಿಯನ್ನು ಮಾವಿನಡಿ ಹಾಗೂ ಕಾಟಿಕಜೆ ಪ್ರದೇಶದಲ್ಲಿ ಅಗತ್ಯವಾಗಿ ನಿಮರ್ಿಸಬೇಕು. ಈಗ ಉಳಿದಿರುವ 400 ಮೀಟರ್ ಉದ್ದದ ಪ್ರದೇಶದಲ್ಲಿ ತಡೆಬೇಲಿ ನಿಮರ್ಿಸಬೇಕು. ಈ ಬಗ್ಗೆ ಕೇರಳ ಅರಣ್ಯ ಇಲಾಖೆ ಹಾಗೂ ಎಸ್ಸಿ/ಎಸ್ಟಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ.
- ಕೇಪು ನಾಯ್ಕ ಕಾಟಿಕಜೆ
ಪರಿಶಿಷ್ಟ ಜಾತಿ/ವರ್ಗ ಕಾಲನಿ ಅಧ್ಯಕ್ಷರು
ಟ್ರೈಬಲ್ ಕಾಲನಿ ಮುಖಂಡರು
3)
ಕಾಡಾನೆಗಳನ್ನು ತಡೆಯುವ ಕಾಂಕ್ರೀಟ್ ತಡೆಬೇಲಿ ನಿಮರ್ಾಣಕ್ಕೆ ಕೇಂದ್ರ ಸಕರ್ಾರ ಅನುದಾನ ನೀಡಿದೆ. ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಬಗ್ಗೆ ಮುತುವಜರ್ಿ ವಹಿಸಿದ್ದಾರೆ. ಬಾಕಿ ಉಳಿದಿರುವ ಹಾಗೂ ಆಗಬೇಕಿರುವ ತಡೆಬೇಲಿ ವಿಸ್ತರಣೆಗೆ ಸವರ್ೇ ನಡೆಸಲು ಕೇಂದ್ರ ಸಕರ್ಾರ ಆದೇಶಿಸಿದೆ.
ಬಿಜೆಪಿ ಸಮಿತಿ
ದೇಲಂಪಾಡಿ ಗ್ರಾಮ ಪಂಚಾಯಿತಿ.


