ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 13, 2017
ಉಗುಳಿದ್ದನ್ನು ಹೆಕ್ಕಿ ತಿನ್ನುವುದು ನಾಗರಿಕತೆಯಲ್ಲ-ಸಾಯಿರಾಂ ಭಟ್
ಬದಿಯಡ್ಕ: ಮದ್ಯಮುಕ್ತ ಸಮಾಜ ನಿಮರ್ಾಣವು ನಾಗರಿಕ ಪ್ರಪಂಚದ ಮೂಲಭೂತ ಲಕ್ಷ್ಯವಾದಾಗ ವ್ಯವಸ್ಥಿತ ಸಮಾಜ ನಿಮರ್ಾಣಗೊಳ್ಳುತ್ತದೆ. ಇದು ವಿನಮ್ರತೆ, ಸದಾಚಾರ, ಕ್ರಿಯಾಶೀಲತೆಗೆ ಕಾರಣವಾಗುತ್ತದೆ ಎಂದು ಹಿರಿಯ ದಾನಿ, ದೀನಬಂಧು ಸಾಯಿರಾಂ ಗೋಪಾಲಕೃಷ್ಣ ಭಟ್ ಕಿಳಿಂಗಾರು ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಬೆಳ್ತಂಗಡಿಯ ಅಖಿಲ ಕನರ್ಾಟಕ ಜನಜಾಗೃತಿ ವೇದಿಕೆ, ಬೆಂಗಳೂರಿನ ಕನರ್ಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಪೆರಡಾಲ ಶ್ರೀಉದನೇಶ್ವರ ದೇವಸ್ಥಾನ, ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಆಸ್ಪತ್ರೆ, ಬದಿಯಡ್ಕ ಗ್ರಾಮ ಪಂಚಾಯತುಗಳ ಸಹಿತ ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪೆರಡಾಲ ಶ್ರೀಉದನೇಶ್ವರ ಕ್ಷೇತ್ರ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ 1155ನೇ ಮದ್ಯವರ್ಜನ ಶಿಬಿರ ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು.
ಸುಸ್ಥಿರ ಕುಟುಂಬ, ಸಮಾಜ ನಿಮರ್ಾಣವು ಭಾರತದ ಜೀವಸೆಲೆಯಾಗಿದ್ದು, ವ್ಯಸನ ಕಾರಣ ಅದು ಅಸ್ಥಿರಗೊಂಡಿರುವುದು ದುದರ್ೈವ ಎಂದು ತಿಳಿಸಿದ ಅವರು, ಉಗುಳಿದ್ದನ್ನು ಮತ್ತೆ ಹೆಕ್ಕಿ ತಿನ್ನುವುದು ನಾಗರಿಕ ಪ್ರಪಂಚದ ಲಕ್ಷ್ಮಣವಲ್ಲ ಎಂದು ತಿಳಿಸಿದರು. ಮಾನವ ಜೀವನದಲ್ಲಿ ಪ್ರೀತಿ, ಪರಸ್ಪರ ವಿಶ್ವಾಸ, ನಂಬಿಕೆ, ಪ್ರೇಮಮಯಿಯಾಗಿ ಬದುಕುವುದು ಸಾಧ್ಯವಿದ್ದು, ವಿಡುಗುಗಳಿಂದ ಹೊರತಾದ ಸಮಾಜಕ್ಕೆ ಅವನ್ನು ಪ್ರಾಪ್ತಿಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು. ಶ್ರೀಕ್ಷೇತ್ರ ಧರ್ಮಸ್ಥಳದ ಸಮಾಜಮುಖೀ ವಿವಿಧ ಚಟುವಟಿಕೆಗಳು ಭಗವದನುಗ್ರಹದಿಂದ ಯಶಸ್ವಿಯಾಗುತ್ತಿದ್ದು, ಮದ್ಯಮುಕ್ತ ಸಮಾಜ ನಿಮರ್ಾಣಕ್ಕೆ ಆಂತರಂಗಿಕ ಮನೋಸ್ಥಿತಿಯಿಂದ ಪ್ರೇರಣದಾಯಿಯಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ತಿಳಿಸಿದರು.
ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು ಅಧ್ಯಕ್ಷತೆ ವಹಿಸಿದ್ದರು. ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಗ್ರಾಮಾಭಿವೃದ್ದಿ ಯೋಜನೆ ಮತ್ತು ಮದ್ಯವರ್ಜನ ಶಿಬಿರಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು. ಬದಿಯಡ್ಕ ಗ್ರಾಮ ಪಂಚಾಯತು ಅಧ್ಯಕ್ಷ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್, ಬ್ಲಾಕ್ ಪಂಚಾಯತು ಸದಸ್ಯ ಅವಿನಾಶ ರೈ, ಗ್ರಾಮ ಪಂಚಾಯತು ಸದಸ್ಯ ಬಾಲಕೃಷ್ಣ ಶೆಟ್ಟಿ, ಉದನೇಶ್ವರ ಕ್ಷೇತ್ರದ ಮೊಕ್ತೇಸರ ನಾರಾಯಣ ಭಟ್ ಟಿ.ಕೆ, ಸಮಾಜ ಸೇವಕ ಎಂ.ಎಚ್.ಜನಾರ್ಧನ, ನಿವೃತ್ತ ಪ್ರಾಂಶುಪಾಲ ಪ್ರೊ.ಎ.ಶ್ರೀನಾಥ್, ಪೆರಡಾಲ ಕ್ಷೇತ್ರ ಮೊಕ್ತೇಸರ ಚಂದ್ರಹಾಸ ರೈ ಪಿ.ಜಿ, ಕೋಶಾಧಿಕಾರಿ ಜಗನ್ನಾಥ ರೈ ಕೊರೆಕ್ಕಾನ, ಜೊತೆ ಕಾರ್ಯದಶರ್ಿ ನಿರಂಜನ ರೈ ಪೆರಡಾಲ, ಒಕ್ಕೂಟಗಳ ಅಧ್ಯಕ್ಷ ರಘುರಾಮ, ಶ್ಯಾಮ ಆಳ್ವ ಮೊದಲಾದವರು ಉಪಸ್ಥಿತರಿದ್ದು ಶುಭಹಾರೈಸಿದರು.
ಸೇವಾ ಪ್ರತಿನಿಧಿ ಜಲಜಾಕ್ಷಿ ಸ್ವಾಗತಿಸಿ, ಕವಿತಾ ವಂದಿಸಿದರು. ಬದಿಯಡ್ಕ ವಲಯ ಮೇಲ್ವಿಚಾರಕ ಧನಂಜಯ ಕಾರ್ಯಕ್ರಮ ನಿರೂಪಿಸಿದರು. ಮದ್ಯವರ್ಜನ ಶಿಬಿರ ನ.20ರ ವರೆಗೆ ನಡೆಯಲಿದ್ದು, ಮಂಗಳವಾರ ಅಪರಾಹ್ನ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಭೇಟಿ ನೀಡಿ ಸಂವಾದ ನಡೆಸುವರು. ಜೊತೆಗೆ ವಿವಿಧ ದಿನಗಳಲ್ಲಿ ವಿವಿಧ ಜನಜಾಗೃತಿ ವೇದಿಕೆಯ ಪ್ರಮುಖರು, ಸಂಪನ್ಮೂಲ ವ್ಯಕ್ತಿಗಳು ತರಗತಿ ನಡೆಸುವರು.


