ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 13, 2017
ಶಬರಿಮಲೆ ಭದ್ರತೆಗೆ ಡ್ರೋನ್ ಕಣ್ಗಾವಲು
ಕಾಸರಗೋಡು: ಶಬರಿಮಲೆ ಭದ್ರತೆಗೆ ಡ್ರೋನ್ ಕಣ್ಗಾವಲು ಏರ್ಪಡಿಸಲು ಪೊಲೀಸ್ ಇಲಾಖೆ ತೀಮರ್ಾನಿಸಿದೆ. ಶಬರಿಮಲೆ ತೀಥರ್ಾಟನಾ ಋತು ಆರಂಭಗೊಳ್ಳುವ ವೇಳೆಯಲ್ಲಿ ಆಕಾಶ ಮಾರ್ಗವಾಗಿ ಡ್ರೋನ್ ಕಣ್ಗಾವಲು ಭದ್ರತೆ ಏರ್ಪಡಿಸಲಾಗುವುದು.
ಶಬರಿಮಲೆ ದೇಗುಲ ಮತ್ತು ಪರಿಸರದ ಪ್ರದೇಶದ ಅರಣ್ಯ ಮೇಲಿನಿಂದ ಡ್ರೋನ್ ಹಾರಲಿದೆ. ಆ ಮೂಲಕ ಆಕಾಶಮಾರ್ಗವಾಗಿ ಶಬರಿಮಲೆಯ ಎಲ್ಲಾ ಚಲನವಲನಗಳನ್ನು ಡ್ರೋನ್ ಕ್ಯಾಮರಾಗಳು ನೇರವಾಗಿ ಚಿತ್ರೀಕರಿಸಲಿದೆ.
ಶಬರಿಮಲೆಯಲ್ಲಿರುವ ಪೊಲೀಸ್ ಕಂಟ್ರೋಲ್ ರೂಂನ ನಿಯಂತ್ರಣದಲ್ಲಿ ಆಕಾಶಮಾರ್ಗವಾಗಿ ಕಾರ್ಯವೆಸಗಲಿದೆ. ಶಬರಿಮಲೆಗೆ ಬಿಗು ಭದ್ರತೆ ಏರ್ಪಡಿಸುವ ಸಲುವಾಗಿ ಇಂತಹ ಹೊಸ ಕ್ರಮಕ್ಕೆ ಪೊಲೀಸ್ ಇಲಾಖೆ ಮುಂದಾಗಿದೆ. ಡ್ರೋನ್ ಚಿತ್ರೀಕರಿಸುವ ಎಲ್ಲಾ ದೃಶ್ಯಗಳು ಶಬರಿಮಲೆಯಲ್ಲಿ ಪೊಲೀಸ್ ಕಂಟ್ರೋಲ್ ರೂಂನಲ್ಲಿರುವ ಕಂಪ್ಯೂಟರ್ ಸ್ಕ್ರೀನ್ಗಳಲ್ಲಿ ಮಾತ್ರವಲ್ಲ ರಾಜ್ಯ ಪೊಲೀಸ್ ಮಹಾ ನಿದರ್ೇಶಕ ಮತ್ತು ಶಬರಿಮಲೆ ಭದ್ರತೆಯ ಹೊಣೆಗಾರಿಕೆ ಹೊಂದಿರುವ ಐಜಿಯವರ ಕಚೇರಿಯ ಕಂಪ್ಯೂಟರ್ನಲ್ಲೂ ಗೋಚರಿಸಲಿದೆ.
ಇದು ಕೇರಳ ಸರಕಾರದ ಸ್ವಂತ ಡ್ರೋನ್ ಆಗಿದೆ. ತಮಿಳುನಾಡು ತಾಂತ್ರಿಕ ವಿದ್ಯಾಲಯದ ತಾಂತ್ರಿಕ ಸಹಾಯದೊಂದಿಗೆ ಡ್ರೋನ್ ನಿಮರ್ಿಸಲಾಗಿದೆ. ಪರೀಕ್ಷಾರ್ಥವಾಗಿ ತಿರುವನಂತಪುರದಲ್ಲಿ ಕೆಲವು ದಿನಗಳ ಹಿಂದೆ ಭಾರತ - ನ್ಯೂಜಿಲ್ಯಾಂಡ್ ನಡುವಿನ ಟ್ವೆಂಟಿ - 20 ಕ್ರಿಕೆಟ್ ಪಂದ್ಯಕ್ಕೆ ಪೊಲೀಸರು ಬಳಸಿದ್ದರು. ಅದರಲ್ಲಿ ಡ್ರೋನ್ ಸಮರ್ಪಕ ರೀತಿಯಲ್ಲಿ ಕಾರ್ಯವೆಸಗುತ್ತಿರುವುದನ್ನು ಖಾತರಿಪಡಿಸಲಾಗಿದೆ. ಮುಂದೆ ಇದೇ ರೀತಿಯ ಡ್ರೋನ್ಗಳನ್ನು ಮಾವೋವಾದಿ ಚಟುವಟಿಕೆ ನಡೆಯುತ್ತಿರುವ ಕೇರಳದ ಅರಣ್ಯ ಪ್ರದೇಶಗಳಲ್ಲಿ ಬಳಸಿ ಅದರ ಸಹಾಯದಿಂದ ಮಾವೋವಾದಿಗಳ ವಿರುದ್ಧ ಕಾಯರ್ಾಚರಣೆ ನಡೆಸಲು ಪೊಲೀಸ್ ಇಲಾಖೆ ತೀಮರ್ಾನಿಸಿದೆ.
ಶಬರಿಮಲೆ ತೀಥರ್ಾಟನಾ ವೇಳೆಯಲ್ಲಿ ಭದ್ರತೆಗಾಗಿ ಹೊಸದಾಗಿ ಇನ್ನೂ ಮೂರು ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು ತೆರೆಯಲು ಗೃಹ ಇಲಾಖೆ ತೀಮರ್ಾನಿಸಿದೆ.


