HEALTH TIPS

No title

ಕೇರಳ ಲೋಕಸೇವಾ ಆಯೋಗದ ಪ್ರಶ್ನೆ ಪತ್ರಿಕೆ ಅವಾಂತರ ಕನ್ನಡ ಸ್ಪಧರ್ಾಥರ್ಿಗಳಿಗೆ ಮಲೆಯಾಳ ಪ್ರಶ್ನೆಪತ್ರಿಕೆ ಕುಂಬಳೆ: ಕೇರಳ ಲೋಕಸೇವಾ ಆಯೋಗವು ಶನಿವಾರ ನಡೆಸಿದ ಪರೀಕ್ಷೆಯಲ್ಲಿ ಕನ್ನಡ ಪರೀಕ್ಷೆ ಬರೆವ ಅಭ್ಯಥರ್ಿಗಳಿಗೆ ಮಲೆಯಾಳ ಭಾಷಾ ಪ್ರಶ್ನೆ ಪತ್ರಿಕೆಯನ್ನು ವಿತರಿಸುವ ಮೂಲಕ ವ್ಯಾಪಕ ಅವಾಂತರಕ್ಕೆ ಕಾರಣವಾಗಿ ಪರೀಕ್ಷಾಥರ್ಿಗಳ ಗಲಿಬಿಲಿ, ಆಕ್ರೋಶಕ್ಕೆ ಕೆಲವೆಡೆ ಕಾರಣವಾಗಿರುವುದು ಕಂಡುಬಂದಿದೆ. ಕೇರಳ ಲೋಕಸೇವಾ ಆಯೋಗವು ಕಳೆದ ಶನಿವಾರ ವಿಲ್ಲೇಜ್ ಪೀಲ್ಡ್ ಅಸಿಸ್ಟೆಂಟ್(ಗ್ರಾಮ ಸಹಾಯಕ)ಹುದ್ದೆಗೆ ಓಎಂಆರ್ ಮಾದರಿಯ ಪರೀಕ್ಷೆಗಳನ್ನು ನಡೆಸಿತ್ತು. ಗಡಿನಾಡು ಕಾಸರಗೋಡಿನ ಬಹುತೇಕ ಶಾಲೆಗಳಲ್ಲಿ ಪರೀಕ್ಷಾ ಕೇಂದ್ರಗಳಾಗಿ ಸಾವಿರಾರು ಮಂದಿಗಳು ಪರೀಕ್ಷೆ ಬರೆದಿದ್ದು, ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕುಗಳ ಕನ್ನಡ ಅಭ್ಯಥರ್ಿಗಳೂ ಪರೀಕ್ಷೆಗೆ ಹಾಜರಾಗಿದ್ದರು. ಈ ಪೈಕಿ ಕೆಲವೆಡೆಗಳಲ್ಲಿ ಕನ್ನಡ ಪರೀಕ್ಷಾಥರ್ಿಗಳಿಗೆ ಮಲೆಯಾಳ ಭಾಷೆಯ ಪ್ರಶ್ನೆ ಪತ್ರಿಕೆಗಳನ್ನು ನೀಡುವ ಮೂಲಕ ಸಮಸ್ಯೆಗೆ ಕಾರಣವಾದ ಘಟನೆ ನಡೆಯಿತು. ಬಂದ್ಯೋಡು ಸಮೀಪದ ಧರ್ಮತ್ತಡ್ಕ ಶ್ರೀದುಗರ್ಾಪರಮೇಶ್ವರಿ ಅನುದಾನಿತ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕೇಂದ್ರವಾಗಿ ಪರೀಕ್ಷೆ ಬರೆದ ಮಂಜೇಶ್ವರ ಮೀಯಪದವಿನ ಕಿರಣಶಂಕರ್ ಎಂಬವರು ಪರೀಕ್ಷೆಗೆ ಅಜರ್ಿ ಸಲ್ಲಿಸುವಾಗ ಪ್ರಶ್ನೆ ಪತ್ರಿಕೆ ಕನ್ನಡ ಮಾಧ್ಯಮ ಎಂದು ಗುರುತಿಸಿದ್ದರೂ ಅವರಿಗೆ ಮಲೆಯಾಳ ಭಾಷೆಯಲ್ಲಿರುವ ಪ್ರಶ್ನೆ ಪತ್ರಿಕೆ ನೀಡಿ ಪರೀಕ್ಷೆ ಬರೆಯಲಾರದ ಸ್ಥಿತಿಗೆ ಕಾರಣವಾಯಿತೆಂದು ವಿಜಯವಾಣಿಗೆ ತಮ್ಮ ಅಳಲು ತೋಡಿಕೊಂಡಿದ್ದಾರೆ. ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳ ಹಲವು ಅಭ್ಯಥರ್ಿಗಳಿಗೆ ಇಂತಹ ಅನುಭವಗಳಾಗಿದ್ದು, ಇದು ಪರೀಕ್ಷೆ ಬರೆಯುವಲ್ಲಿ ತೊಡಕಾಗಿ ಭವಿಷ್ಯವನ್ನೇ ಕಳೆದುಕೊಳ್ಳುವ ಭೀತಿಗೆ ಕಾರಣವಾಯಿತು. ಇದ್ದ ಕನ್ನಡದಲ್ಲಿ ಗೊಂದಲಗಳು: ಶನಿವಾರ ನಡೆದ ಕನ್ನಡ ಪ್ರಶ್ನೆ ಪತ್ರಿಕೆಗಳಲ್ಲಿ ಹಲವು ಗೊಂದಲಕರ ಪ್ರಶ್ನೆಗಳು ಕಂಡುಬಂದಿರುವ ಬಗ್ಗೆಯೂ ಕೆಲವರು ಪತ್ರಿಕೆಗೆ ತಿಳಿಸಿದ್ದಾರೆ. ಮಲೆಯಾಳ ಭಾಷೆಯಿಂದ ಕನ್ನಡಕ್ಕೆ ಭಾಷಾಂತರಿಸುವಲ್ಲಿ ಮಲೆಯಾಳ ಪದದ ಸರಿಯಾದ ಕನ್ನಡ ಶಬ್ದಗಳ ಭಾಷಾಂತರ ನಡೆಯದೆ ಗೊಂದಲಕ್ಕೆ ಕಾರಣವಾಗಿದೆ. ಈ ಹಿಂದೆ ಹಲವು ಪರೀಕ್ಷೆಗಳಲ್ಲೂ ಇಂತಹ ಭಾಷಾಂತರ ಗೊಂದಲ ಕಂಡುಬಂದಿತ್ತು. ಕನಿಷ್ಠ ಪಕ್ಷ ಕನ್ನಡ ಭಾಷೆಯ ಸ್ಪಷ್ಟತೆ ಇರುವವರಿಂದಲಾದರೂ ಭಾಷಾಂತರ ಮಾಡಿಸಬಾರದೇ ಎಂಬ ಜಿಜ್ಞಾಸೆ ಹಲವರಲ್ಲಿ ಮೂಡಿಬಂದಿದೆ. ದೂರು ನೀಡುವವರಿಲ್ಲ: ಗಡಿನಾಡು ಕಾಸರಗೋಡಿನ ಅಲ್ಪಸಂಖ್ಯಾತ ಕನ್ನಡಿಗರಿಗೆ ವಿಶೇಷ ಆದ್ಯತೆಗಳಿದ್ದರೂ ಅದರ ಬಗ್ಗೆ ಅರಿವಿನ ಕೊರತೆ ಸ್ಪಷ್ಟವಾಗಿ ಗೋಚರಿಸುತ್ತಿದೆ. ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಗಳ ಗೊಂದಲಗಳ ಬಗ್ಗೆ ಆಯೋಗದ ಅಧಿಕೃತರಿಗೆ ದೂರು ನೀಡಿ ಸಮಸ್ಯೆಗೆ ಪರಿಹಾರ ಕಲ್ಪಿಸಬಹುದಾದರೂ ಈ ಬಗ್ಗೆ ದೂರು ನೀಡಲು ಮುಂದಾಗದಿರುವುದು ತಪ್ಪುಗಳು ಪುನರಾವರ್ತನೆಯಾಗುವಲ್ಲಿ ಪ್ರೇರೇಪಿಸುತ್ತದೆ. ಕೇರಳ ಲೋಕಸೇವಾ ಆಯೋಗದ ಜಿಲ್ಲಾ ಅಧಿಕೃತರು ಸ್ಪಷ್ಟನೆಗೆ ಮುಂದಾಗಿಲ್ಲ: ಶನಿವಾರ ನಡೆದ ಪರೀಕ್ಷಾ ಗೊಂದಲದ ಬಗ್ಗೆ ಪತ್ರಿಕೆ ಜಿಲ್ಲಾ ಲೋಕಸೇವಾ ಆಯೋಗದ ಅಧಿಕೃತರನ್ನು ಸಂಪಕರ್ಿಸಲು ಮುಂದಾದರೂ ನುಣುಚಿಕೊಂಡು ಯಾವುದೇ ಸ್ಪಷ್ಟನೆ ನೀಡಲು ಮುಂದಾಗಿಲ್ಲ. ಏನಂತಾರೆ: ಲೋಕಸೇವಾ ಆಯೋಗ ಈ ಹಿಂದೆಯೂ ಇಂತಹ ಅವಾಂತರಗಳನ್ನು ಮಾಡಿರುತ್ತದೆ. ಆದರೆ ಪರೀಕ್ಷಾಥರ್ಿಗಳು ಈ ಬಗ್ಗೆ ದೂರು ನೀಡಲು ಮುಮದಾಗದಿರುವುದು ಸಮಸ್ಯೆ ಮುಂದುವರಿಕೆಗೆ ಕಾರಣವಾಗಿದ್ದು, ಅಭ್ಯಥರ್ಿಗಳು ತಮಗಾದ ತೊಂದರೆಯ ಬಗ್ಗೆ ತಿರುವನಂತಪುರದ ಲೋಕಸೇವಾ ಆಯೋಗದ ರಾಜ್ಯ ಕಾಯರ್ಾಲಯಕ್ಕೆ ದೂರು ನೀಡಬೇಕಾಗಿದೆ. ಅದಕ್ಕೆ ತಕ್ಕ ಉತ್ತರ ಬಾರದಿದ್ದಲ್ಲಿ ಮಾಹಿತಿ ಹಕ್ಕು ಕಾಯ್ದೆಯಂತಹ ಅಸ್ತ್ರಗಳ ಮೂಲಕ ನಮ್ಮ ಹಕ್ಕನ್ನು ಎತ್ತಿಹಿಡಿಯದಿದ್ದರೆ ಇಲ್ಲಿಯ ಕನ್ನಡಿಗರಿಗೆ ಭಾರೀ ಅಪಾಯಗಳಿವೆ. ಡಾ.ನರೇಶ್ ಮುಳ್ಳೇರಿಯ ಕನ್ನಡ ಪರ ಹೋರಾಟಗಾರ, ಸಾಹಿತಿ.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries