ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 27, 2017
ಸುಪ್ರೀಂ'ಗೆ ಹಾದಿಯಾ ಹೇಳಿಕೆ ಇಂದು
ಕೇರಳದ ಯುವತಿ ಹಾದಿಯಾಳನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ ಎಂಬ ಪ್ರಕರಣದ ವಿಚಾರಣೆ ಸುಪ್ರೀಂ ಕೋಟರ್್ನಲ್ಲಿ ಸೋಮವಾರ ನಡೆಯಲಿದೆ.
ನವದೆಹಲಿ/ ಕೊಚ್ಚಿ (ರಾಯಿಟಸರ್್): ಕೇರಳದ ಯುವತಿ ಹಾದಿಯಾಳನ್ನು ಬಲವಂತದಿಂದ ಮತಾಂತರ ಮಾಡಲಾಗಿದೆ ಎಂಬ ಪ್ರಕರಣದ ವಿಚಾರಣೆ ಸುಪ್ರೀಂ ಕೋಟರ್್ನಲ್ಲಿ ಸೋಮವಾರ ನಡೆಯಲಿದೆ.
ಅಖಿಲಾ ಎಂಬ ಮೂಲ ಹೆಸರಿನ ಈ ಯುವತಿಯನ್ನು ಜಿಹಾದಿ ಚಟುವಟಿಕೆಗಳಿಗೆ ನಿಯೋಜಿಸಲು ಬಲವಂತದಿಂದ ಮತಾಂತರ ಮಾಡಲಾಗಿದೆ. ಮುಸ್ಲಿಂ ಯುವಕನೊಂದಿಗೆ ಆಕೆಯ ಮದುವೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಯುವತಿಯ ತಂದೆ ಅಶೋಕನ್ ಅವರು ಕೋರಿದ್ದಾರೆ. ಬಲವಂತದಿಂದ ಮತಾಂತರ ಮಾಡಲಾಗಿದೆಯೇ ಎಂಬ ಬಗ್ಗೆ ಹಾದಿಯಾ ಅವರು ಸೋಮವಾರ ಸುಪ್ರೀಂ ಕೋಟರ್್ನಲ್ಲಿ ತಮ್ಮ ಹೇಳಿಕೆ ದಾಖಲಿಸಲಿದ್ದಾರೆ.
ಹಿಂದೂ ಯುವತಿಯರನ್ನು ಮುಸ್ಲಿಂ ಯುವಕರು ಮದುವೆಯಾಗಿ ನಂತರ ಮುಸ್ಲಿಂ ಧರ್ಮಕ್ಕೆ ಮತಾಂತರ ಮಾಡುವುದನ್ನು `ಲವ್ ಜಿಹಾದ್' ಎಂದು ಆರ್ಎಸ್ಎಸ್ ಹೇಳುತ್ತಿದೆ. ಇಂತಹ ಪ್ರಕರಣಗಳು ಕೇರಳದಲ್ಲಿ ಭಾರಿ ಸಂಖ್ಯೆಯಲ್ಲಿ ನಡೆದಿವೆ ಎಂಬ ಆರೋಪ ಇದೆ. ಹಾಗಾಗಿ ಈ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತನಿಖೆ ನಡೆಸುತ್ತಿದೆ.
ಅಂತರ್ಧಮರ್ೀಯ ಮದುವೆಯ ಒಟ್ಟು 89 ಪ್ರಕರಣಗಳನ್ನು ಎನ್ಐಎ ತನಿಖೆಗೆ ಒಳಪಡಿಸಿದೆ. ಅವುಗಳ ಪೈಕಿ 9 ಮದುವೆ ಆಗಿರುವವರಿಗೆ ಐಎಸ್ ಜತೆ ನಂಟು ಇರುವ ಶಂಕೆ ಇದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.





