ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ನೌಕರರಿಲ್ಲದೆ ಕಂಗೆಟ್ಟ ಸ್ಥಳೀಯಾಡಳಿತ-ಕುಂಬಳೆ ಗ್ರಾ.ಪಂ.ನಿಂದ ಪ್ರತಿಭಟನೆ
ಕುಂಬಳೆ: ಕುಂಬಳೆ ಗ್ರಾ.ಪಂ. ಸಹಿತ ಜಿಲ್ಲೆಯ ನಾಲ್ಕು ಗ್ರಾ.ಪಂ. ಗಳು ನೌಕರರ ಕೊರತೆಯಿಂದ ತೀವ್ರ ಸ್ವರೂಪದ ಆಡಳಿತಾತ್ಮಕ ಸಂಕಷ್ಟ ಅನುಭವಿಸುತ್ತಿದೆ. ಅಧಿಕೃತರು ಈ ಬಗ್ಗೆ ಮೌನ ವಹಿಸಿರುವುದರಿಂದ ಪರಿಹಾರೋಪಾಯಗಳಿಲ್ಲದೆ ವಿವಿಧ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ತೊಂದರೆಗಳು ಎದುರಾಗಿದೆ, ಈ ಬಗ್ಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಕಳೆದ 3 ತಿಂಗಳುಗಳಿಂದ ಕಾರ್ಯದಶರ್ಿಯ ಹುದ್ದೆ ತೆರವಾಗಿದೆ. ಇಬ್ಬರು ಕೆಳ ಹಾಗೂ ಇಬ್ಬರು ಮೇಲ್ದಜರ್ೆಯ ಕ್ಲಕರ್್ಗಳ ಕೊರತೆಯಿದ್ದು, ಗ್ರಾಮ ಪಂಚಾಯತು ಕಾಲಾಕಾಲಕ್ಕೆ ಜಾರಿಗೊಳಿಸುವ ವಿವಿಧ ಯೋಜನೆಗಳು ಕಾರ್ಯಗತಗೊಳ್ಳದೆ ಬಾಕಿಯಿದೆ. ಕೇರಳ ಸರಕಾರದ ಮಹತ್ವಾಕಾಂಕ್ಷಿ ಲೈಫ್ ಯೋಜನೆ, ವಿವಿಧ ಪಿಂಚಣಿಗಳ ಬಟವಾಡೆ ಸಹಿತ ಗ್ರಾ.ಪಂ. ಅನುಮೋದನೆ ನೀಡಿ ವ್ಯವಸ್ಥೆಗೊಳಿಸಬೇಕಾದ ನೂರಾರು ಯೋಜನೆಗಳು ಅಧಿಕಾರಿಗಳಲ್ಲದೆ ಮೂಲೆಗುಂಪಾಗುವ ಭೀತಿ ಎದುರಿಸುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಬಗ್ಗೆ ಅಧಿಕೃತರಿಗೆ ಹಲವು ಬಾರಿ ಮನವಿ ಮಾಡಲಾಗಿದ್ದರೂ, ನೇಮಕಾತಿಯಲ್ಲಿ ಈವರೆಗೆ ಯಾವುದೇ ಕ್ರಮ ಪಾಲಿಸಲಾಗಿಲ್ಲ. ಕೇರಳದ ದೂರದ ಊರುಗಳಿಂದ ಆಗಮಿಸುವ ಅಧಿಕಾರಿಗಳು ಎರಡು ತಿಂಗಳುಗಳೊಳಗೆ ವರ್ಗಗೊಂಡು ತೆರಳುತ್ತಿರುವುದು ತೀವ್ರ ಸಮಸ್ಯೆಗೆ ಕಾರಣವಾಗಿದೆ. ಆದುದರಿಂದ ನ.14 ರಂದು ಬೆಳಿಗ್ಗೆ 10 ಗಂಟೆಗೆ ಕಾಸರಗೋಡಿನಲ್ಲಿರುವ ಗ್ರಾಮ ಪಂಚಾಯತು ಉಪನಿದರ್ೇಶಕ(ಡಿಡಿಪಿ)ಜಿಲ್ಲಾ ಕಚೇರಿಯ ಎದುರು ಕುಂಬಳೆ ಗ್ರಾಮ ಪಂಚಾಯತಿನ ಎಲ್ಲಾ 23 ಸದಸ್ಯರೊಂದಿಗೆ ಪ್ರತಿಭಟನಾ ಸತ್ಯಾಗ್ರಹ ನಡೆಸಲಾಗುವುದೆಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗ್ರಾ.ಪಂ. ಅಧ್ಯಕ್ಷರ ಜೊತೆಗೆ ಉಪಾಧ್ಯಕ್ಷೆ ಗೀತಾ, ಸ್ಥಾಯೀ ಸಮಿತಿ ಅಧ್ಯಕ್ಷರುಗಳಾದ ಬಿ.ಎಂ.ಮೊಹಮ್ಮದ್, ಎ.ಕೆ.ಆರೀಫ್, ಪ್ರಾತಿಮಾ ಅಬ್ದುಲ್ ರಹಿಮಾನ್, ಸದಸ್ಯ ಮುರಳೀಧರ ಯಾದವ್ ನಾಯ್ಕಾಪು ಉಪಸ್ಥಿತರಿದ್ದು ಮಾತನಾಡಿದರು.


