ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ವ್ಯಕ್ತಿಯನ್ನು ಕಲೆ ಶಕ್ತಿಯಾಗಿಸುವುದು-ರಾಘವೇಶ್ವರ ಶ್ರೀ
ಬದಿಯಡ್ಕ : ಸಾಂಸ್ಕೃತಿಕ ಕ್ಷೇತ್ರದ ಅನನ್ಯ ಸೇವೆಯು ವ್ಯಕ್ತಿಯನ್ನು ಶಕ್ತಿಯಾಗಿಸುವುದು. ಸಂಸ್ಕಾರ, ಪರಂಪರೆಯನ್ನು ಕರಾವಳಿಯಾದ್ಯಂತ ಬೆಳೆಸುವಲ್ಲಿ ಪ್ರಧಾನ ಪಾತ್ರವಹಿಸುವ ಯಕ್ಷಗಾನದ ಅದ್ವಿತೀಯ ಸಾಧನೆ ತಪಸ್ಸಿಗೆ ಸಮವಾದುದು. ಸಮಾಜ ಕಟ್ಟುವ ಇಂತಹ ಕಾಯಕ ಯೋಗಿಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಕರ್ತವ್ಯ ಎಂದು ಶ್ರೀರಾಮಚಂದ್ರಾಪುರ ಮಠಾಧೀಶ ಶ್ರೀರಾಘವೇಶ್ವರ ಭಾರತಿ ಶ್ರೀಗಳು ಆಶೀವರ್ಾದ ಪೂರ್ವಕ ಹರಿಸಿದರು.
ಅವರು ಯಕ್ಷರಂಗದ ಹಿರಿಯಜ್ಜ ಅಡ್ಕ ಗೋಪಾಲಕೃಷ್ಣ ಭಟ್ರನ್ನು ತಮ್ಮ ಮುಳ್ಳೇರಿಯ ಮಂಡಲ ಪ್ರವಾಸದ ಸಂದರ್ಭದಲ್ಲಿ ನೀಚರ್ಾಲು `ಈಶಾವಾಸ್ಯಂ'ನಲ್ಲಿ ಶಾಲು ಹೊದೆಸಿ, ಸ್ಮರಣಿಕೆ, ಮಂತ್ರಾಕ್ಷತೆಯನ್ನಿತ್ತು ಆಶೀರ್ವದಿಸಿ ಮಾತನಾಡಿದರು.
ತನ್ನ ಅಚಲ ನಿಲುವು, ನಿಷ್ಠೆಯಿಂದ ಎಲ್ಲರಿಗೂ ಸ್ಪೂತರ್ಿಯಾದ ಅಡ್ಕದ ಅಜ್ಜ ಓರ್ವ ಆದರ್ಶ ವ್ಯಕ್ತಿ ಎಂದು ಹರಿಸಿದರು.
್ರ ಅಧ್ಯಾಪಕರಾಗಿ ಶಿಕ್ಷಣ ಕ್ಷೇತ್ರದಲ್ಲಿ, ಯಕ್ಷಗಾನ, ನಾಟಕ, ವಿವಿಧ ಕಲಾರಂಗಗಳು ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅನುಪಮ ಸೇವೆಗೈದ ಶ್ರೀ ಮಠದ ನಿಷ್ಠಭಕ್ತನೆನಿಸಿದ ಕುಂಬಳೆ ಸೀಮೆಯ ಖಂಡಿಗೆ ಮನೆತನದ ಅಡ್ಕ ಗೋಪಾಲಕೃಷ್ಣ ಭಟ್ಟರು ಶ್ರೀ ಗುರುಗಳಿಂದ ಪ್ರಶಂಸೆಗೊಳಪಟ್ಟಿರುವುದು ಅವರ ಅಭಿಮಾನಿಗಳಿಗೆ ಹಾಗೂ ಶಿಷ್ಯವೃಂದದವರಿಗೆ ಸಂತಸವನ್ನು ತಂದಿದೆ.
ಗೋಕರ್ಣಮಂಡಲಾಧ್ಯಕ್ಷೆ ಈಶ್ವರಿ ಬೇರ್ಕಡವು, ಕಾರ್ಯದಶರ್ಿ ಹರಿಪ್ರಸಾದ ಪೆರಿಯಪ್ಪು, ಮಹಾಮಂಡಲ ಉಲ್ಲೇಖ ಪ್ರಧಾನ ಗೋವಿಂದ ಬಳ್ಳಮೂಲೆ, ಮುಳ್ಳೇರಿಯ ಮಂಡಲಾಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್ ಹಾಗೂ ಮಂಡಲ ಪದಾಧಿಕಾರಿಗಳು, ಗುರಿಕ್ಕಾರರು ಮತ್ತು ಶಿಷ್ಯವೃಂದದವರು ಸಂದರ್ಭಕ್ಕೆ ಸಾಕ್ಷಿಯಾದರು.
ಕೋಟ್ಸ್:
ಕುಲಗುರುಗಳಿಂದ ಪ್ರೀತಿಪೂರ್ವಕವಾಗಿ ಆಶೀವರ್ಾದ ಸನ್ಮಾನ ಲಭಿಸಬೇಕಾದರೆ ಪೂರ್ವಜನ್ಮದ ಸುಕೃತ ಫಲವಿರಬೇಕು. ಇದು ಮಿಕ್ಕೆಲ್ಲ ಪ್ರಶಸ್ತಿಗಿಂತಲೂ ಹಿರಿದಾದುದು, ಗೌರವಯುತವಾದುದು. ಅಡ್ಕ ಅಜ್ಜನಿಗೆ ಅರ್ಹವಾಗಿ ಸಂದ ಶ್ರೀ ಗುರುಗಳ ಆಶೀವರ್ಾದ.
- ಈಶ್ವರಿ ಬೇರ್ಕಡವು, ಗೋಕರ್ಣಮಂಡಲಾಧ್ಯಕ್ಷೆ

