ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಮಂಜೇಶ್ವರ ಉಪಜಿಲ್ಲಾ ಕಲೋತ್ಸವ ಉದ್ಘಾಟನೆ
ಉಪ್ಪಳ: ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಉಪ್ಪಳ ಸರಕಾರಿ ಶಾಲೆಯಲ್ಲಿ ಬುಧವಾರ ಶಾಲಾ ಪಿಟಿಎ ಅಧ್ಯಕ್ಷ ಅಶ್ರಫ್ ದ್ವಜಾರೋಹಣ ನಡೆಸಿದರು. ಗುರುವಾರ ಬೆಳಿಗ್ಗೆ ಉದ್ಘಾಟನೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ ಬಶೀರ್ ನೆರವೇರಿಸಿದರು.ಅವರು ಉದ್ಘಾಟಿಸಿ ಮಾತನಾಡಿ ವಿದ್ಯಾಥರ್ಿ ಜೀವನದ ಪ್ರತಿಯೊಂದು ಸಂದರ್ಭಗಳೂ ಭಾವೀ ಬದುಕಿನ ಸಮರ್ಪಕತೆಗೆ ಮಾರ್ಗದಶರ್ಿಯಾಗಿದ್ದು, ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸುವುದು, ಪ್ರತಿಭಾ ಅನಾವರಣಕ್ಕೆ ಬಳಸಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.
ಮಂಗಲ್ಪಾಡಿ ಗ್ರಾ.ಪಂ. ಅಧ್ಯಕ್ಷ ಶಾಹುಲ್ ಹಮೀದ್ ಬಂದ್ಯೋಡು ಅಧ್ಯಕ್ಷತೆ ವಹಿಸಿದ್ದರು. ಮುಖ್ಯೋಪಾಧ್ಯಾಯ ಬಾಲಕೃಷ್ಣ ಶೆಟ್ಟಿಗಾರ್, ಮಂಜೇಶ್ವರ ಉಪಜಿಲ್ಲಾ ವಿದ್ಯಾಧಿಕಾರಿ ದಿನೇಶ್ ವಿ, ಸಹಿತ ಹಲವು ಗಣ್ಯವ್ಯಕ್ತಿಗಳು ಉಪಸ್ಥಿತರಿದ್ದರು.
ಎರಡು ದಿನಗಳಲ್ಲಿ ಸಾವಿರಾರು ವಿದ್ಯಾಥರ್ಿಗಳು ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿದರು. ಶುಕ್ರವಾರಹಾಗು ಶನಿವಾರ ವಿವಿಧ ಸ್ಪಧರ್ೆಗಳು ನಡೆಯಲಿದೆ. 11ರಂದು ಕಲೋತ್ಸವ ಸಮಾಪ್ತಿಗೊಳ್ಳಲಿದೆ.


