ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಕುಂಬಳೆಯ ನಿತಿನ್ರಾಜ್ಗೆ ಚಿನ್ನ
ಕುಂಬಳೆ: ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ವಿದ್ಯಾಥರ್ಿ ನಿತಿನ್ರಾಜ್ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾ ಕೂಟದಲ್ಲಿ ಚಿನ್ನದ ಪದಕ ಗಳಿಸಿದ್ದು, ಶಾಲೆಯ ಅಧ್ಯಾಪಕ ವೃಂದ, ರಕ್ಷಕ ಶಿಕ್ಷಕ ಸಂಘದ ವತಿಯಿಂದ ಗುರುವಾರ ಸನ್ಮಾನಿಸಿ, ನಗರದಲ್ಲಿ ಮೆರವಣಿಗೆ ನಡೆಸಲಾಯಿತು.
ನಿತಿನ್ರಾಜ್ ತಿರುವನಂತಪುರದಲ್ಲಿ ನಡೆದ ಜ್ಯೂನಿಯರ್ ಹುಡುಗರ ವಿಭಾಗದ ಕಬ್ಬಡಿ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದ ಕಾಸರಗೋಡು ಜಿಲ್ಲಾ ತಮಡದ ಆಟಗಾರರಲ್ಲಿ ಓರ್ವ ಪ್ರಮುಖ ಆಟಗಾರ.ಈತ ಕಳೆದ ವರ್ಷವೂ ಚಿನ್ನದಪದಕ ವಿಜೇತನಾಗಿದ್ದ.
ರಾಜ್ಯಮಟ್ಟದ ಜ್ಯೂನಿಯರ್ ಹುಡುಗಿಯರ ವಿಭಾಗದ ಕಬ್ಬಡಿ ಪಂದ್ಯಾಟದಲ್ಲಿ ಶಾಲೆಯ ವಿದ್ಯಾಥರ್ಿನಿಯರಾದ ಧನ್ಯಶ್ರೀ ಹಾಗು ಉಮ್ಮುಜಮೀಲಾ ಭಾಗವಹಿಸಿದ್ದಾರೆ. ಕೋಟ್ಟಯಂ ಜಿಲ್ಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಶಾಲೆಯ ವಿದ್ಯಾಥರ್ಿಗಳಾದ ಅಬುತಾಹಿರ್, ಮೊಹಮ್ಮದ್ ಯೂನಸ್, ಮತ್ತು ಗುರುಪ್ರಸಾದ್ ಭಾಗವಹಿಸಿದ್ದರು.
ರಾಜ್ಯಮಟ್ಟದ ಕಬ್ಬಡಿ ಪಂದ್ಯಾಟದಲ್ಲಿ ಸತತ ಏಳು ವರ್ಷಗಳಿಂದ ಶಾಲೆಯ ವಿದ್ಯಾಥರ್ಿಗಳು ಭಾಗವಹಿಸಿ ಬಹುಮಾನ ಗಳಿಸುತ್ತಿದ್ದು, ಶಾಲಾ ಶಾರೀರಿಕ ಶಿಕ್ಷಕ ಬಾಲಕೃಷ್ಣ ಕುಳಮರ್ವ ಸತತ ಪರಿಶ್ರಮದ ತರಬೇತಿ ವಿದ್ಯಾಥರ್ಿಗಳನ್ನು ಈ ಮಟ್ಟಕ್ಕೆ ಬೆಳೆಸಿದೆ ಎಂದು ಅಧ್ಯಾಪಕ ವೃಂದ ಹಾಗು ರಕ್ಷಕ ಶಿಕ್ಷಕ ಸಮಿತಿ ಮೆಚ್ಚುಗೆ ವ್ಯಕ್ತಪಡಿಸಿದೆ.


