ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ಹಿಮಾಚಲ ಪ್ರದೇಶದಲ್ಲಿ ದಾಖಲೆಯ ಶೇ.74ರಷ್ಟು ಮತದಾನ, ಬಿಜೆಪಿ, ಕಾಂಗ್ರೆಸ್ ನಡುವೆ ತೀವ್ರ ಸ್ಪಧರ್ೆ
ಶಿಮ್ಲಾ: ಪರ್ವತ ರಾಜ್ಯ ಹಿಮಾಚಲ ಪ್ರದೇಶದ 68 ವಿಧಾನಸಭಾ ಕ್ಷೇತ್ರಗಳಿಗೆ ಗುರುವಾರ ನಡೆದ ಒಂದೇ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ದಾಖಲೆಯ ಶೇ.74ರಷ್ಟು ಮತದಾನವಾಗಿದೆ ಎಂದು ಚುನಾವಣಾ ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿ ವೀರಭದ್ರ ಸಿಂಗ್, 10 ಮಂದಿ ಸಚಿವರು, ಎಂಟು ಮುಖ್ಯ ಸಂಸದೀಯ ಕಾರ್ಯದಶರ್ಿಗಳು, ಉಪ ಸ್ಪೀಕರ್ ಜಗತ್ ಸಿಂಗ್, ಬಿಜೆಪಿಯ ಮುಖ್ಯಮಂತ್ರಿ ಅಭ್ಯಥರ್ಿ ಪ್ರೇಮ್ ಕುಮಾರ್ ದ್ಹುಮಲ್ ಹಾಗೂ ಇನ್ನೂ ಅನೇಕ ಪ್ರಮುಖರು ಇಂದು ಬೆಳಗ್ಗೆಯೇ ತಮ್ಮ ಹಕ್ಕು ಚಲಾಯಿಸಿದರು.
ಈ ಬಾರಿಯ ಚುನಾವಣೆಯಲ್ಲಿ 62 ಮಂದಿ ಶಾಸಕರು ಸೇರಿದಂತೆ 337 ಅಭ್ಯಥರ್ಿಗಳು ಸ್ಪಧರ್ಾಕಣದಲ್ಲಿದ್ದಾರೆ. ಡೂನ್ ವಿಧಾನಸಭಾ ಕ್ಷೇತ್ರದಲ್ಲಿ 9 ಮತಯಂತ್ರಗಳು ಕೆಟ್ಟು ಹೋದ ಬಗ್ಗೆ ವರದಿಯಾಗಿದೆ. ಕೆಲವು ಕಡೆ ವಿದ್ಯುನ್ಮಾನ ಮತಯಂತ್ರಗಳು ಕೈ ಕೊಟ್ಟಿರುವುದನ್ನು ಬಿಟ್ಟರೆ ಬಹುತೇಕ ಮತದಾನ ಶಾಂತಿಯುತವಾಗಿ ಅಂತ್ಯಗೊಂಡಿದೆ.
ಶಿಮ್ಲಾದಲ್ಲಿ ಮುಖ್ಯಮಂತ್ರಿ ವೀರಭದ್ರ ಸಿಂಗ್ ತಮ್ಮ ಕುಟುಂಬದವರ ಜೊತೆ ಮತ ಚಲಾಯಿಸಿದರು. ಕಾಂಗ್ರೆಸ್ ಪಕ್ಷ ಬಹುಮತದಿಂದ ಗೆಲುವು ಸಾಧಿಸಲಿದೆ ಎಂದು ವೀರಭದ್ರ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸಿಎಂ ಅಭ್ಯಥರ್ಿ ಪ್ರೇಮ್ ಕುಮಾರ್ ದುಮಲ್ ತಮ್ಮ ಕುಟುಂಬದವರ ಜೊತೆ ಸಮಿಪರ್ುರ್ ಕ್ಷೇತ್ರದಲ್ಲಿ ಹಕ್ಕು ಚಲಾಯಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದ್ಹುಮಲ್, ನಾವು 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿ ಹೊಂದಿದ್ದೇವೆ ಎಂದರು.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೇ ನೇರ ಹಣಾಹಣಿ ಏರ್ಪಟ್ಟಿದ್ದು, ಅಂತಿಮವಾಗಿ ಮತದಾರ ಯಾರ ಕೈಹಿಡಿಲಿದ್ದಾನೆ ಎಂಬುದು ಡಿಸೆಂಬರ್ 18ರಂದು ಬಹಿರಂಗವಾಗಲಿದೆ.


