ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ವಿದ್ಯಾಪೀಠ ರನ್ನರ್ಸ್ಅಫ್ ಪ್ರಶಸ್ತಿ
ಬದಿಯಡ್ಕ : ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ಗಮನಾರ್ಹ ಸಾಧನೆಯೊಂದಿಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠವು ಹಿರಿಯ ಪ್ರಾಥಮಿಕ ಕನ್ನಡ ವಿಭಾಗದಲ್ಲಿ ರನ್ನರ್ಸ್ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ವಿವಿಧ ವಿಭಾಗಗಳಲ್ಲಾಗಿ 48ರಲ್ಲಿ ಎ ಗ್ರೇಡ್ ಪಡೆದುಕೊಂಡಿದೆ. ಕಿರಿಯ ಪ್ರಾಥಮಿಕ ಜನರಲ್ ವಿಭಾಗದಲ್ಲಿ 48 ಪಾಯಿಂಟ್, ಹಿರಿಯ ಪ್ರಾಥಮಿಕ ಜನರಲ್ 49, ಸಂಸ್ಕೃತದಲ್ಲಿ 72, ಹೈಸ್ಕೂಲ್ ಜನರಲ್ 67, ಸಂಸ್ಕೃತದಲ್ಲಿ 60 ಪಾಯಿಂಟ್ಗಳನ್ನು ಪಡೆದುಕೊಂಡಿದೆ. ವಿದ್ಯಾಥರ್ಿಗಳಾದ ಅನನ್ಯ ಪಿ, ಅಕ್ಷರ ಕೆ.ಎಚ್. ನಿತೀಶ್ ಕೆ, ಶ್ರೀವತ್ಸ ಎನ್, ವೆಂಕಟ ಯಶಸ್ವಿ ಕೆ, ಕವಿತಾ ಎಸ್ ಪೈ ಜಿಲ್ಲಾ ಮಟ್ಟದಲ್ಲಿ ಸ್ಪಧರ್ಿಸಲಿದ್ದಾರೆ. ಮಕ್ಕಳ ಸಾಧನೆಯು ಶಾಲಾ ಮುಖ್ಯೋಪಾಧ್ಯಾಯರ, ಅಧ್ಯಾಪಕ ವೃಂದ, ಶಿಕ್ಷಕ ರಕ್ಷಕ ವೃಂದ ಹಾಗೂ ಆಡಳಿತ ಮಂಡಳಿಯ ಪ್ರಶಂಸೆಗೆ ಪಾತ್ರವಾಗಿದೆ.


