HEALTH TIPS

No title

`ಸಕರ್ಾರ, ನ್ಯಾಯಾಂಗ ಒಗ್ಗೂಡಲಿ' `ನವ ಭಾರತ'ದ ಕಲ್ಪನೆಯ ಸಾಕಾರಕ್ಕಾಗಿ ಸಕರ್ಾರ ಮತ್ತು ನ್ಯಾಯಾಂಗ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು. ನವದೆಹಲಿ: `ನವ ಭಾರತ'ದ ಕಲ್ಪನೆಯ ಸಾಕಾರಕ್ಕಾಗಿ ಸಕರ್ಾರ ಮತ್ತು ನ್ಯಾಯಾಂಗ ವ್ಯವಸ್ಥೆ ಒಟ್ಟಾಗಿ ಕೆಲಸ ಮಾಡುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಪ್ರತಿಪಾದಿಸಿದರು. ಆದರೆ, ಇವುಗಳು ಸಾಮರಸ್ಯದಿಂದ ಕೆಲಸ ಮಾಡುತ್ತಿವೆಯೇ ಎಂದು ಪ್ರಶ್ನಿಸಿದರು. ಸಂವಿಧಾನ ದಿನಾಚರಣೆಯ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, `ನಾವು ಪ್ರಜಾಪ್ರಭುತ್ವದ ದಾರಿಯಲ್ಲಿ ಮುಂದುವರಿಯುವುದನ್ನು ಸಂವಿಧಾನ ದೃಢಪಡಿಸುತ್ತದೆ. ಇದು ನಾವು ಹಾದಿ ತಪ್ಪುವುದನ್ನು ತಡೆದಿದೆ. ಸಕರ್ಾರ (ಶಾಸಕಾಂಗ), ನ್ಯಾಯಾಂಗ ಮತ್ತು ಅಧಿಕಾರಶಾಹಿಗಳು (ಕಾಯರ್ಾಂಗ) ಒಂದೇ ಕುಟುಂಬದ ಭಾಗ. ಈ ಸಂದರ್ಭ ಅತ್ಯಂತ ಮಹತ್ವದ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ.ಈ ಕುಟುಂಬದ ಸದಸ್ಯರಾಗಿ, ಸಂವಿಧಾನ ಬಯಸಿದಂತೆ ನಾವು ನಿಯಮಗಳಿಗೆ ಅನುಸಾರವಾಗಿ ನಡೆದುಕೊಳ್ಳುತ್ತಿದ್ದೇವೆಯೇ' ಎಂದು ಅವರು ಕೇಳಿದರು. ಸಕರ್ಾರದ ಈ ಅಂಗಗಳು ಪರಸ್ಪರನ್ನು ಬಲಪಡಿಸುತ್ತವೆಯೇ ಮತ್ತು ಪರಸ್ಪರರಿಗೆ ಸಹಕಾರ ನೀಡುತ್ತಿವೆಯೇ ಎಂದು ಕೇಳಿದ ಅವರು, `ಈ ಪ್ರಶ್ನೆಗಳು ಸಕರ್ಾರ ಮತ್ತು ನ್ಯಾಯಾಂಗದಲ್ಲಿ ಕೆಲಸ ಮಾಡುವವರಿಗೆ ಮಾತ್ರ ಸಂಬಂಧಿಸಿದ್ದಲ್ಲ; ಕೋಟ್ಯಂತರ ಜನರು ನಂಬಿಕೆ ಇಟ್ಟ ಸಕರ್ಾರದ ಎಲ್ಲ ಸಂಸ್ಥೆಗಳಿಗೆ ಸಂಬಂಧಿಸಿದೆ' ಎಂದು ಹೇಳಿದರು. ದೇಶದ ಸಂವಿಧಾನ ಮೂರು ಅಂಗಗಳಿಗೂ ಪ್ರತ್ಯೇಕ ಅಧಿಕಾರಗಳನ್ನು ಕೊಟ್ಟಿದೆ. ಅವುಗಳನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದರು. `ಶಾಸಕಾಂಗಕ್ಕೆ ಕಾನೂನು ರೂಪಿಸುವ ಸ್ವಾತಂತ್ರ್ಯ ಇರಬೇಕು. ಯಾವುದೇ ಕ್ರಮ ಕೈಗೊಳ್ಳಲು ಕಾಯರ್ಾಂಗಕ್ಕೆ ಸ್ವಾತಂತ್ರ್ಯ ಇರಬೇಕು. ಶಾಸಕರು ಅಂಗೀಕರಿಸಿದ ಕಾನೂನುಗಳನ್ನು ವಿಶ್ಲೇಷಣೆಗೆ ಒಳಪಡಿಸಲು ನ್ಯಾಯಾಂಗ ಮುಕ್ತವಾಗಿರಬೇಕು' ಎಂದು ಪ್ರತಿಪಾದಿಸಿದರು. ನ್ಯಾಯಾಂಗದ ಕ್ರಿಯಾಶೀಲತೆಯ ಬಗ್ಗೆ ಕೇಂದ್ರ ಸಚಿವರಾದ ಅರುಣ್ ಜೇಟ್ಲಿ ಮತ್ತು ರವಿಶಂಕರ್ ಪ್ರಸಾದ್ ಅವರು ಸುಪ್ರೀಂ ಕೋಟರ್್ನ ಮುಖ್ಯ ನ್ಯಾಯಮೂತರ್ಿ ದೀಪಕ್ ಮಿಶ್ರಾ ಅವರ ನಡುವೆ ಮಾತಿನ ಸಂಘರ್ಷ ಏರ್ಪಟ್ಟಿರುವುದರ ನಡುವೆಯೇ ಮೋದಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೇಶದಾದ್ಯಂತ ಏಕ ಕಾಲದಲ್ಲಿ ಚುನಾವಣೆ ನಡೆಸುವ ತಮ್ಮ ಆಶಯವನ್ನು ಪುನರುಚ್ಚರಿಸಿದ ಪ್ರಧಾನಿ, `ಚುನಾವಣಾ ದಿನಾಂಕಗಳು ನಿಶ್ಚಿತವಾಗಿರುವ ಕೆಲವು ದೇಶಗಳಿವೆ. ಚುನಾವಣೆ ಯಾವಾಗ ನಡೆಯುತ್ತದೆ ಎಂದು ಜನರಿಗೆ ಗೊತ್ತಿರುತ್ತದೆ. ಇದು ನಿಜಕ್ಕೂ ಪ್ರಯೋಜನಕಾರಿ. ಹೀಗಿದ್ದರೆ, ದೇಶವು ಯಾವಾಗಲೂ ಚುನಾವಣೆಯ ಗುಂಗಲ್ಲೇ ಇರುವುದಿಲ್ಲ. ನೀತಿ ರೂಪಿಸುವ ಪ್ರಕ್ರಿಯೆ ಮತ್ತು ಅದರ ಅನುಷ್ಠಾನ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ದೇಶದ ಸಂಪನ್ಮೂಲದ ಮೇಲೆ ಅನಗತ್ಯ ಹೊರೆಯೂ ಬೀಳುವುದಿಲ್ಲ' ಎಂದು ಅಭಿಪ್ರಾಯಪಟ್ಟರು.

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries